ಧಾರವಾಡ: ‘ಆಕಾಶವಾಣಿ ಧಾರವಾಡ ಕೇಂದ್ರದ 90ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮೇ 11 ರಂದು ನಗರದಲ್ಲಿ ‘ಸಂಧ್ಯಾ ಸುಧೆ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಕಾರ್ಯಕ್ರಮ ಮುಖ್ಯಸ್ಥೆ ಮಂಜುಳಾ ಪುರಾಣಿಕ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆಲೂರು ವೆಂಕಟರಾವ್ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಹಳಿಯಾಳದ ಕೆಎಲ್ಎಸ್ವಿಡಿಐಟಿ ಪ್ರಾಚಾರ್ಯ ಪ್ರೊ.ವಾದಿರಾಜ ಕುಲಕರ್ಣಿ ಪಾಲ್ಗೊಳ್ಳುವರು’ ಎಂದರು.

‘ಕೃತಿಕಾ ಜಂಗಿನಮಠ ಅವರ ಕೊಳಲು ವಾದನ ಪ್ರಸ್ತುತಪಡಿಸುವರು. ರಘುನಂದನ ಗೋಪಾಲ ಹೂಗಾರ ತಬಲಾ ಸಾಥ್ ನೀಡುವರು. ನಂತರ ರಘುನಂದನ ಭಟ್ ಅವರು ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸುವರು. ಶರಣಪ್ಪ ಗುತ್ತರಗಿ ಅವರು ತಬಲಾ, ಅಶ್ವಿನ್ ವಲಾವಲಕರ್ ಅವರು ಹಾರ್ಮೋನಿಯಂ ಸಾಥ್ ಸಂಗತ್ ನೀಡುವರು’ ಎಂದು ಹೇಳಿದರು.

‘ಧಾರವಾಡದ ಆಕಾಶವಾಣಿ ಕೇಂದ್ರ ಕಚೇಯಲ್ಲಿ ಸಿಬ್ಬಂದಿ ಕೊರತೆ ಇದೆ. 187 ಹುದ್ದೆಗಳ ಪೈಕಿ 54 ಸಿಬ್ಬಂದಿ ಕಾರ್ಯರ್ನಿವಹಿಸುತ್ತಿದ್ದಾರೆ. 2015ರಿಂದ ಈವರೆಗೆ ನೇಮಕಾತಿ ನಡದಿಲ್ಲ’ ಎಂದು ಉತ್ತರಿಸಿದರು.

ಆಕಾಶವಾಣಿ ಅಭಿಯಾಂತ್ರಿಕ ವಿಭಾಗದ ಉಪಮಹಾನಿರ್ದೇಶಕ ಕೆ.ಅರುಣ ಪ್ರಭಾಕರ, ಕುಮಾರ ಅಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-24-1247869048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.