ಹುಲಸೂರ: ತಾಲ್ಲೂಕಿನ ಗೋರಟಾ.ಬಿ ಗ್ರಾಮದಲ್ಲಿ ಮೇ 19ರಂದು ಸಂಗೀತ ರುದ್ರೇಶ್ವರ 4ನೇ ಜಾತ್ರಾ ಮಹೋತ್ಸವ, ಪಂ.ವಿರೂಪಾಕ್ಷಯ್ಯ ಸ್ವಾಮಿ ಅವರ 14ನೇ ಹಾಗೂ ವೀರಮ್ಮ ಸ್ವಾಮಿ ಅವರ 9ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರಾಂತೀಯ 7ನೇ ಸಂಗೀತ ಸಮ್ಮೇಳನ ಮತ್ತು ಪಂ.ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಬೆಳಿಗ್ಗೆ 9ಕ್ಕೆ ಸಂಗೀತ ರುದ್ರೇಶ್ವರ ದೇವರಿಗೆ ಹಾಗೂ ಪಂ.ವಿರೂಪಾಕ್ಷ ಗದ್ದುಗೆಗೆ ಸಂಗೀತ ರುದ್ರಾಭಿಷೇಕ, ಮಹಾಪೂಜೆ ಮತ್ತು ಮಹಾಪ್ರಸಾದ ಜರುಗಲಿವೆ. ಮಧ್ಯಾಹ್ನ 1.15ಕ್ಕೆ ಸಂಸ್ಮರಣೋತ್ಸವ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.

ಬೀದರ್ನ ಸಂಸದ ಸಾಗರ ಖಂಡ್ರೆ ಉದ್ಘಾಟಿಸಲಿದ್ದಾರೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಬೀದರ್ನ ಹಾರ್ಮೋನಿಯಂ ವಾದಕ ರಾಜೇಂದ್ರಸಿಂಗ್ ಪವಾರ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಮುಚಳಂಬ ಗ್ರಾಮದ ರೇವಪ್ಪ ಪಾಂಚಾಳ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಗೀತ ಸಮ್ಮೇಳನದಲ್ಲಿ ರಾಜೇಂದ್ರ ಸಿಂಗ್ ಪವಾರ ಅವರ ಹಾರ್ಮೋನಿಯಂ ವಾದನ, ಕೇಶವರಾವ ಸೂರ್ಯವಂಶಿ ಅವರ ತಬಲಾ ವಾದನ ಹಾಗೂ ಉಸ್ತಾದ್ ಶೇಖ್ ಹನ್ನುಮಿಯಾ, ನಾಗರಾಜ್ ಪುರಂಕರ, ಯಲ್ಲಾಲಿಂಗ ದಾಂಗೆ, ಶಿವದೇವ ನಾವದಗಿ, ಸಂಗಶೆಟ್ಟಿ ಡೋಣಗಾಪುರ, ಎಸ್.ಕೆ. ಪಾಟೀಲ, ಶಿವಾಜಿರಾವ್ ಸಗರ ಸೇರಿದಂತೆ ಹಲವು ಸಂಗೀತ ಕಲಾವಿದರಿಂದ ಗಾಯನ ಮತ್ತು ವಾದ್ಯ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 6.30ಕ್ಕೆ ಸಂಗೀತ ರುದ್ರೇಶ್ವರ ಭವ್ಯ ಪಲ್ಲಕ್ಕಿ ಉತ್ಸವವು ಭಜನಾ ಹಾಗೂ ಮಂಗಳ ವಾದ್ಯಗಳೊಂದಿಗೆ ಜರುಗಲಿದೆ ಎಂದು ಸಂಸ್ಥಾನದ ಗಾಯಕ ಹಾಗೂ ಸಮಿತಿಯ ಉಪಾಧ್ಯಕ್ಷ ಡಾ. ಸಿದ್ದರಾಮಯ್ಯ ರುದ್ರಮಠ ಗೋರಟಾ ಮತ್ತು ಕಾರ್ಯದರ್ಶಿ ಪ್ರೊ. ರುದ್ರೇಶ್ವರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-33-917985173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.