ಹುಲಸೂರ: ‘ದೇಶದ ವೇದ ಸಂಗೀತ ಪರಂಪರೆಗೆ ವಿರೂಪಾಕ್ಷಯ್ಯ ಸ್ವಾಮಿ ಅವರ ಕೊಡುಗೆ ಅಪಾರ’ ಎಂದು ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.

ತಾಲ್ಲೂಕಿನ ಗೋರಟಾ ಗ್ರಾಮದಲ್ಲಿ ಸಂಗೀತ ರುದ್ರೇಶ್ವರ 4ನೇ ಜಾತ್ರಾ ಮಹೋತ್ಸವ, ವಿರೂಪಾಕ್ಷಯ್ಯ ಸ್ವಾಮಿಗಳ 14ನೇ ಹಾಗೂ ವೀರಮ್ಮ ತಾಯಿಯವರ 9ನೇ ಪುಣ್ಯಾರಾಧನೆ, ಕಲ್ಯಾಣ ಕರ್ನಾಟಕ 7ನೇ ಪ್ರಾಂತೀಯ ಸಂಗೀತ ಸಮ್ಮೇಳನ ಮತ್ತು ‘ಪಂ.ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವೇದದ ರುದ್ರಮಂತ್ರಗಳಿಗೆ ಸಂಗೀತ ಸಂಯೋಜಿಸಿ ದೇಶದಾದ್ಯಂತ ‘ರುದ್ರ ಸಂಗೀತ’ ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿರೂಪಾಕ್ಷಯ್ಯ ಸ್ವಾಮಿಗಳು ಜಿಲ್ಲೆಗೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾರೆ.1948ರ ಗೋರಟಾ ರಜಾಕಾರ ಹತ್ಯಾಕಾಂಡದ ಕುರಿತು ‘ಭುಲಾಯಿ ಪದ’ ಗ್ರಂಥ ರಚಿಸಿ ಹುತಾತ್ಮರ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಗೋರಟಾದ ಹುತಾತ್ಮ ಸ್ಮಾರಕ ನಿರ್ಮಾಣಕ್ಕೂ ಅವರು ಪ್ರೇರಕರಾಗಿದ್ದರು ಎಂದರು.

‘ಪಂ. ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹಾರ್ಮೋನಿಯಂ ಕಲಾವಿದ ಪಂ.ರಾಜೇಂದ್ರ ಸಿಂಗ್ ಪವಾರ ಮಾತನಾಡಿ, ‘ಶ್ರೀ ರುದ್ರಕ್ಕೆ ಸಂಗೀತ ಸಂಯೋಜಿಸಿದ ದೇಶದ ಮೊದಲ ಕಲಾವಿದ ವಿರೂಪಾಕ್ಷಯ್ಯ ಸ್ವಾಮಿಗಳು. ಅವರ ರುದ್ರ ಸಂಗೀತ ಕೇಳಿ ನಾವು ಬೆಳೆದವರು’ ಎಂದು ಸ್ಮರಿಸಿದರು.

1960ರ ದಶಕದಲ್ಲಿ ಗೋರಟಾದಲ್ಲಿ ‘ಶಾರದಾ ಸಂಗೀತ ವಿದ್ಯಾಲಯ’ ಸ್ಥಾಪಿಸಿ ನೂರಾರು ಮಂದಿಗೆ ಸಂಗೀತ ಶಿಕ್ಷಣ ನೀಡಿದ್ದರು. 1958ರಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ ಆಯೋಜಿಸಿ ಭಾಗಕ್ಕೆ ಕೀರ್ತಿ ತಂದಿದ್ದರು ಎಂದು ಹೇಳಿದರು.

ಸಂಸ್ಥಾನದ ಅಧಿಪತಿ ರಾಜಶೇಖರ ಶಿವಾಚಾರ್ಯರು ಮಾತನಾಡಿ, ಗೋರಟಾ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ವಿರೂಪಾಕ್ಷಯ್ಯ ಸ್ವಾಮಿಗಳ ಸಂಕಲ್ಪದಂತೆ ಸಂಗೀತ ರುದ್ರೇಶ್ವರ ದೇವಾಲಯ ಹಾಗೂ 81 ಅಡಿ ಎತ್ತರದ ಗೋಪುರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಶ್ರೀಶೈಲದ ಕರುಣಾದೇವಿ ಮಾತಾ ಸಾನ್ನಿಧ್ಯ ವಹಿಸಿದ್ದರು. ಸಿದ್ದರಾಮಯ್ಯ ಸ್ವಾಮಿ ರುದ್ರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಪಂ. ವಿರೂಪಾಕ್ಷ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿಯನ್ನು ಪಂ. ರಾಜೇಂದ್ರ ಸಿಂಗ್ ಪವಾರ ಅವರಿಗೆ ಹಾಗೂ ರಾಜ್ಯ ಪ್ರಶಸ್ತಿಯನ್ನು ರೇವಪ್ಪ ಪಾಂಚಾಳ ಅವರಿಗೆ ಪ್ರದಾನಿಸಲಾಯಿತು.

ಈ ವೇಳೆ ರಾಜಶೇಖರ ಸ್ವಾಮೀಜಿ, ಸಿದ್ದರಾಮಯ್ಯ ಸ್ವಾಮಿ, ಸಂಗಮೇಶ ಬಿರಾದಾರ, ಕರಬಸಪ್ಪ ಅಕ್ಕಣ್ಣ ಮುಂತಾದವರು ಇದ್ದರು. ಪ್ರೊ. ರುದ್ರೇಶ್ವರ ಸ್ವಾಮಿ ವಂದಿಸಿದರು. ಬಸವರಾಜ ಹಾಲಹಳ್ಳಿ ನಿರೂಪಿಸಿದರು.

ಇದಕ್ಕೂ ಮುನ್ನ ಸಂಗೀತ ರುದ್ರೇಶ್ವರ ಲಿಂಗ ಹಾಗೂ ವೀರಮ್ಮ–ವಿರೂಪಾಕ್ಷಯ್ಯ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-33-2138119048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.