ಇಳಕಲ್ : ಗಾಯಕ ಪಿ.ಬಿ.ಶ್ರೀನಿವಾಸ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಪಿ.ಬಿ.ಶ್ರೀನಿವಾಸ ಅವರ ಹಾಡುಗಳ ಗಾಯನ ಹಾಗೂ ಸತ್ಕಾರ ಕಾರ್ಯಕ್ರಮ ಏ.18ರಂದು ಸಂಜೆ 6.30ಕ್ಕೆ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ನಡೆಯಲಿದೆ.

ಪಿ.ಬಿ.ಶ್ರೀನಿವಾಸ ಅವರ ಅಭಿಮಾನಿ, ಪುಣೆಯಲ್ಲಿ ಉದ್ಯಮಿ ಆಗಿರುವ ರವೀಂದ್ರ ಅಂಬಣ್ಣ ದೇವಗಿರಿಕರ್ ಅವರು ಸ್ನೇಹರಂಗದ ಸಹಯೋಗದಲ್ಲಿ ಸತತ 13ವರ್ಷದಿಂದ ಪಿಬಿಎಸ್ ಸ್ಮರಣೆಯ ಕಾರ್ಯಕ್ರಮ ಆಯೋಜಿಸಿದ್ದು, ಸ್ಥಳೀಯ ಪ್ರತಿಭಾವಂತ ಗಾಯಕರಿಂದ ಗಾಯನ, ಹಿರಿಯ ರಂಗಭೂಮಿ ಕಲಾವಿದರಿಗೆ ಆರ್ಥಿಕ ನೆರವು ಹಾಗೂ ಸತ್ಕಾರ ಹಮ್ಮಿಕೊಂಡಿದ್ದಾರೆ.

ಇಳಕಲ್ ಗುರುಮಹಾಂತ ಶ್ರೀ ಸಾನ್ನಿಧ್ಯ ವಹಿಸುವರು, ಶಿರೂರಿನ ಬಸವಲಿಂಗ ಶ್ರೀ ಅಧ್ಯಕ್ಷತೆ ವಹಿಸುವರು. ದೂರದರ್ಶನ ಚಂದನ ಟಿವಿ ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ರಂಗಭೂಮಿ ಹಿರಿಯ ಕಲಾವಿದೆ ಸುಗುಣಾದೇವಿ ಸಪ್ಪಂಡಿ ಹಾಗೂ ವಿಶೇಷ ಆಹ್ವಾನಿತ ಸಮಾಜಸೇವಕ ಸಿದ್ಧಣ್ಣ ಭಮಸಾಗರ ಅವರನ್ನು ಸನ್ಮಾನಿಸಲಾಗುವುದು.

ಔದ್ಯೋಗಿಕ ಸಲಹೆಗಾರ ರವೀಂದ್ರ ದೇವಗಿರಿಕರ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ ಪಾಲ್ಗೊಳ್ಳುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-359080554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.