ಕಲಬುರಗಿ: ನಗರದ ಐತಿಹಾಸಿಕ ಕಲಬುರಗಿಯ ಬಹಮನಿ ಕೋಟೆ ಆವರಣದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದ್ದ ‘ಅನಂತರ’ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರಿಗೆ ಸಂಗೀತ–ನಾಟ್ಯದ ರಸದೌತಣ ಉಣಬಡಿಸಿತು.

ಕನ್ನಡ, ಹಿಂದಿ ಗೀತೆಗಳು, ಸೂಫಿ ಸ್ಪರ್ಶದ ಕವ್ವಾಲಿಗಳು, ಭಜನಗಳ ‘ಸ್ವರ’–‘ನಾದ’ವು 14ನೇ ಶತಮಾನದ ಕೋಟೆ ಆವರಣದ ನಿಶ್ಚಲ ಕಲ್ಲು–ಕಲ್ಲಿನಲ್ಲೂ ಅನುರಣಿಸಿತು.

ಶುಕ್ರವಾರ ಸಂಜೆ ಮೋಡಗಳು ದಟ್ಟೈಸಿ ತಂಗಾಳಿ ಬೀಸಿತ್ತು. ಬಿರುಬಿಸಿಲಿನಿಂದ ಕಾದಿದ್ದ ಕೋಟೆ ಕಲ್ಲುಗಳನ್ನು ತಣಿಸಿತ್ತು. ಮುಸ್ಸಂಜೆ ಸರಿದು ಕತ್ತಲು ಆವರಿಸಿದ ಹೊತ್ತಲ್ಲಿ ಗಾಯನದ ಇಂಪು ಶುರುವಾಯಿತು.

ಸ್ವರ ಸಂಗೀತ ಮ್ಯೂಸಿಕ್ ಬ್ಯಾಂಡ್ನ ಕಲಾವಿದರು ‘ಇನ್ಸ್ಟ್ರುಮೆಂಟ್’ನೊಂದಿಗೆ ಸಂಗೀತದ ಅಲೆ ಸೃಷ್ಟಿಸಿದರು. ಪುಟ್ಟರಾಜ ಕೊಳಲನೂದಿ ಸಂಗೀತ ಸೃಷ್ಟಿಸಿದರು. ಮನೋಹರ ಅದಕ್ಕೆ ತಬಲಾ ‘ತಾಳ’ ಜೊತೆಗೂಡಿಸಿದರು. ಪ್ರಸಾದ್ ಡ್ರಮ್ ನಾದ ಮೇಳೈಸಿದರೆ, ಶಿವಾನಂದ ಕೀಬೋರ್ಡ್ ನುಡಿಸಿ ಲಯ ತುಂಬಿದರು.

ಬಳಿಕ ಗಾಯಕರಾದ ಪಾವನಾ ಮತ್ತು ಸೃಜನ್, ‘ಲಗಜಾ ಗಲೇ ಫಿರ್ ಏ ಹಸೀನ್ ರಾತ್ ಹೋ ನಾ ಹೋ...’ ಹಾಗೂ ‘ಏಕ್ ಪ್ಯಾರ್ ಕಾ ನಗಮಾ ಹೈ...ಮೌಂಜೊ ಕೀ ರವಾನಿ ಹೈ... ಜಿಂದಗಿ ಔರ್ ಕುಚ್ ಭೀ ನಹಿಂ ತೇರಿ ಮೇರಿ ಕಹಾನಿ ಹೈ...’ ಗೀತೆಗಳು ಕತ್ತಲಿನಲ್ಲಿ ಬೀಸುತ್ತಿದ್ದ ತಂಗಾಳಿಯಂತೆ ಪ್ರೇಕ್ಷಕರ ಮನವನ್ನು ಆವರಿಸಿದವು.

‘ನಿನ್ನದೇ ನೆನಪು ದಿನವೂ ಮನದಲ್ಲಿ...ನೋಡುವ ಆಸೆಯೂ ತುಂಬಿದೆ ನನ್ನಲ್ಲಿ, ನನ್ನಲ್ಲಿ...’ ಜನರಲ್ಲಿ ಉತ್ಸಾಹ ತುಂಬಿತು. ಬಳಿಕ ಅವರು ‘ಉಸಿರೇ..ಉಸಿರೇ..ಈ ಉಸಿರ ಕೊಲ್ಲಬೇಡ.. ಪ್ರೀತಿ ಹೆಸರಲಿ..ಈ ಹೃದಯ ಗೆಲ್ಲಬೇಡ.. ಉಸಿರಲೆ... ಪ್ರೀತಿಸು... ಈ ಉಸಿರಲೇ..ಪ್ರೀತಿಸು...’ ಎಂದು ಕೋರಿದರು. ಪ್ರೇಕ್ಷಕರೂ ಕೆಲವು ಸಾಲು ಧ್ವನಿಗೂಡಿಸಿದರು.

ಬಳಿಕ ಮತ್ತೆ ‘ಎ ರಾತೇಂ ಎ ಮೌಸಮ್ ನದಿಕಾ ಕಿನಾರಾ ಎ ಚಂಚಲ ಹವಾ...’ ಹಾಗೂ ಅದೇ ಬಗೆಯ ಕನ್ನಡ ಗೀತೆ ‘ಮುಂಜಾನೆ ಮಂಜಲ್ಲಿ.. ಮುಸ್ಸಂಜೆ ತಿಳಿ ತಂಪಲ್ಲಿ ಓ.. ಒಲವೇ ನೀನೆಲ್ಲಿ...’ ಹಾಡಿ ಚಪ್ಪಾಳೆ ಗಿಟ್ಟಿಸಿದರು.

ಸೂಫಿಗೀತೆ ‘ಕಾಲೇ ಕಾಲೇ ಜುಲ್ಫೋಂ ಸೇ ಬಂದೇ ಲಗಾಲೋ...ಹಮೇ ಜಿಂದಾ ರಹನೇ ದೋ ಏ ಹುಸ್ನೇವಾಲೋಂ...’ ಹಾಗೂ ‘ತೇರೆ ನಾಮಸೇ ಜೀಲೂ ತೆರೆ ನಾಮಸೇ ಮರಜಾಂವೂ ತೇರೆ ದೀವಾನಿ ದೀವಾನಿ’ ಗೀತೆಗೆ ಪ್ರೇಕ್ಷರು ಕರತಾಡನದ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತಿಮವಾಗಿ ‘ಗುಲಾಬಿ ಆಂಖೆ... ಜೋ ತೇರಿ ದೇಖಿ ಶರಾಬಿ ಯೇ ದಿಲ್ ಹೋಗಯಾ...’, ‘ಓ ಮೇರೆ ದಿಲ್ ಕೇ ಚೈನ್... ಚೈನ್ ಆಯೆ ಮೇರೆ ದಿಲ್ ಕೋ ದುವಾ ಕೀಜಿಯೇ...’, ‘ಮೇರೆ ಮೆಹಬೂಬ್ ಕಯಾಮತ್ ಹೋಗಿ...’ ಇತ್ಯಾದಿ ಗೀತೆಗಳ ಪಲ್ಲವಿಗಳ ‘ಫ್ಯುಜನ್’ ಗಾಯನ ಮೋಡಿಯಿಂದಿಗೆ ಭರ್ತಿ 1 ಗಂಟೆಯ ಸಂಗೀತದ ರಸದೌತಣಕ್ಕೆ ವಿರಾಮ ನೀಡಿದರು.

ಈ ನಡುವೆ ಕಲಬುರಗಿ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ‘ಗುಲಾಬಿ ಆಂಖೆ, ಜೋ ತೇರಿ ದೇಖಿ ಶರಾಬಿ ಯೇ ದಿಲ್ ಹೋಗಯಾ...’ ಗೀತೆಗೆ ಧ್ವನಿ ನೀಡಿದ್ದು ವಿಶೇಷವಾಗಿತ್ತು.

ಬಳಿಕ ‘ಅಂಬಾ ಕ್ರಿಪಾ ನೃತ್ಯ ನಿಕೇತನ’ ತಂಡದಿಂದ ಕಲಾವಿದರು ಹಲವು ನೃತ್ಯಗಳನ್ನು ಪ್ರಸ್ತುಪಡಿಸಿದರು. ‘ನೈನಾ ಮಿಲಾಯಿಕೆ ನೈನಾ ಮಿಲಾಯಿಕೆ...’ ಹಾಗೂ ‘ಮೋಹೆ ರಂಗದೋ ಲಾಲ್...ನಂದಕೀ ಲಾಲ್... ನಂದಕಿ ಲಾಲ್... ಛೇಡೋ ನಾ’ ಹಾಗೂ ‘ಸುನ್ ಸಾಯಾ ಸುನ್ಸಾಯಾ ಸುನ್...’ ಸೇರಿದಂತೆ ಹಲವು ಗೀತೆಗಳಿಗೆ ನೃತ್ಯಗೈದು ನೆರೆದಿದ್ದವರ ಮನಗೆದ್ದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಪಾಲಿಕೆ ಮೇಯರ್ ವರ್ಷಾ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸುಲು, ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಉಪವಿಭಾಗಾಧಿಕಾರಿ ಸಾಹಿತ್ಯಾ ಆಲದಕಟ್ಟಿ, ತಹಶೀಲ್ದಾರ್ ಕೆ.ಆನಂದಶೀಲ ಸೇರಿದಂತೆ ಅನೇಕ ಅಧಿಕಾರಿಗಳು, ಸಾರ್ವಜನಿಕರು ಸಂಗೀತದ ಸಂಜೆಯಲ್ಲಿ ಮಿಂದ್ದೆದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-34-386261849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.