ಕಲಬುರಗಿ: ‘ಸಂಗೀತ ಕಲಿಕೆಯಲ್ಲಿ ಯುವಪೀಳಿಗೆ ಬಹಳ ಉತ್ಸುಕತೆ ತೋರಿಸುತ್ತಿದೆ. ಗುರುಗಳಿಂದ ವಿದ್ಯೆ ಪಡೆದು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಸಾಧನೆ ಸಾಧ್ಯ’ ಎಂದು ಹಿರಿಯ ವಕೀಲ ಎಸ್.ವಿ.ದೇಶಮುಖ ಹೇಳಿದರು.

ಶಂಕರ ಶ್ರೀ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ನಡೆದ ನಾದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಂದಕ್ಕೂ ಪರಿಶ್ರಮ ಮುಖ್ಯ’ ಎಂದರು.

ಮುಖಂಡ ಶಿವರಾಯ ಹೂಗಾರ ಮಾತನಾಡಿ, ‘ವಿದ್ಯೆಗಳಲ್ಲಿ ಸಂಗೀತ ವಿದ್ಯೆ ಶ್ರೇಷ್ಠ. ಅದನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.

ದತ್ತರಾಜ ಕಲಶೆಟ್ಟಿ, ಮಲ್ಲಿಕಾರ್ಜುನ ಮಣ್ಣೂರ, ಸಂಗಮೇಶ ನೀಲಾ, ತೋಟಯ್ಯ ಶಾಸ್ತ್ರಿ, ಶಿವಶರಣಯ್ಯ ಸ್ವಾಮಿ, ಶಿವಶರಣ ಪೂಜಾರಿ, ಕಲ್ಮೇಶ ಹೂಗಾರ, ರೇವಣಸಿದ್ದ ಹೂಗಾರ, ಮನೋಹರ ಟೇಂಗಳಿ, ಪೂಜಾ ಮಡಿವಾಳ, ಬಸವರಾಜ ಮಡಿವಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಗಣ್ಣಗೌಡ ಎಸ್.ಎಂ., ಸಿದ್ದಣ್ಣ ಅಂಬಲಗಿ, ಪ್ರಕಾಶ ಪಾಟೀಲ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಜಗದೀಶ ಹೂಗಾರ ನಿರೂಪಿಸಿದರು. ಹಿರಿಯ ಸಂಗೀತ ಕಲಾವಿದ ಸಿದ್ದಣ್ಣ ಹೂಗಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-1407692267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.