ಮೂಲ್ಕಿ: ಶ್ರೀಕಟೀಲು ಪ್ರತಿಷ್ಠಾನದ ಕಟೀಲು ಕಲಾ ಉತ್ಸವದ ಅಂಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮೇ 10ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಅನಂತ ಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ.

ಕುಟುಂಬ ಭಜನೆ ಸ್ಪರ್ಧೆ, 16 ವರ್ಷದ ಮೇಲಿನವರಿಗೆ ಹಾಗೂ 16 ವರ್ಷದ ಕೆಳಗಿನವರ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಕುಟುಂಬ ಭಜನೆ ಸ್ಪರ್ಧೆ ವಿಭಾಗದಲ್ಲಿ ಒಂದು ತಂಡದಲ್ಲಿ ಕನಿಷ್ಠ 3 ಗರಿಷ್ಠ 6 ಸದಸ್ಯರು ಭಾಗವಹಿಸಬಹುದು. ಒಂದು ತಂಡದಲ್ಲಿ ಒಂದೇ ಮನೆಯ ತಂದೆ-ತಾಯಿ-ಮಕ್ಕಳು-ಅಜ್ಜ-ಅಜ್ಜಿ ಮಾತ್ರ ಭಾಗವಹಿಸಬಹುದು. 16 ವರ್ಷಕ್ಕಿಂತ ಮೇಲಿನವರು ಹಾಗೂ ಕೆಳಗಿನವರು ವಿಭಾಗದಲ್ಲಿ ಒಂದು ತಂಡದಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ (ಹಿಮ್ಮೇಳದವರು ಹೊರತು ಪಡಿಸಿ) ಭಾಗವಹಿಸಬಹುದು. ತಬಲ, ಹಾರ್ಮೋನಿಯಂ, ಟಮ್ಕಿ, ಗೆಜ್ಜೆ ಹೊರತು ಪಡಿಸಿ ಬೇರೆ ಸಂಗೀತ ಪರಿಕರಗಳನ್ನು ಉಪಯೋಗಿಸುವಂತಿಲ್ಲ. ದಾಸರ ಪದಗಳಿಗೆ ಮಾತ್ರ ಅವಕಾಶ ಇದ್ದು, ಮಾಹಿತಿಗೆ ಮೊ: 9036111350 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-709950417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.