ಕೆ.ಆರ್.ಪೇಟೆ: ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ರಂಗಕಲಾವಿದ, ಗಾಯಕ ಜಿ.ಕೆ.ಶಂಕರ್ ಇವರ ವೈದ್ಯಕೀಯ ಚಿಕಿತ್ಸಾ ನೆರವಿಗಾಗಿ ನಾಡಿನ ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಳೆಯ ಸುಮಧುರ ಗೀತೆಗಳ ಕರೋಕೆ ಗಾಯನದ ಗಾನವೈಭವ ಭಾನುವಾರ ನಡೆಯಿತು.

ನೂರಾರು ಮಂದಿ ಪ್ರೇಕ್ಷಕರು ಹಳೆಯ ಸಿನಿಮಾ ಗೀತೆಗಳ್ನು ಆಲಿಸಿ, ತಮ್ಮ ಬಾಲ್ಯದ ಸಿನಿಮಾ ಹಾಡುಗಳನ್ನು ನೆನಪಿಸಿಕೊಂಡರು. 80ರ ದಶಕದಲ್ಲಿ ರಸಮಂಜರಿ ಕಾರ್ಯಕ್ರಮಗಳಲ್ಲಿ ಸಿನಿಮಾ ಗೀತೆಗಳನ್ನು ಹಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದ ತಾಲ್ಲೂಕಿನ ದೊಡ್ಡಕ್ಯಾತನಹಳ್ಳಿ ಗ್ರಾಮದ ಜಿ.ಕೆ.ಶಂಕರ್ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಗಾಯಕರಾಗಿ, ರಂಗಕಲಾವಿದರಾಗಿ, ನಟರಾಗಿ ಸೇವೆ ಸಲ್ಲಿಸಿದ್ದು 70ರ ಇಳಿವಯಸ್ಸಿನಲ್ಲಿಯೂ ತಮ್ಮ ಗಾಯನದ ಸ್ವರ ಮಾದುರ್ಯ ಉಣ ಬಡಿಸುವ ಕಾರ್ಯ ಮುಂದುವರಿಸಿದ್ದಾರೆ.

ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಪರದಾಡುತ್ತಿರುವದರಿಂದ ಅವರ ಗೆಳೆಯರು, ಶಿಷ್ಯರು, ಸಹ ಕಲಾವಿದರು ಕಾರ್ಯಕ್ರಮ ನಡೆಸುತಿದ್ದು ಸಹೃದಯಿಗಳು ಹೆಚ್ಚಿನ ನೆರವು ನೀಡುವ (ಸಂಪರ್ಕ ಮೊ: 8861078807) ಮೂಲಕ ಆರೋಗ್ಯ ಸುಧಾರಣೆಗೆ ಸಹಕಾರ ನೀಡುವಂತೆ ನಿವೃತ್ತ ಪ್ರಾಂಶುಪಾಲ ಡಿ.ಬಿ.ಸತ್ಯ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವೈ.ಆನಂದ್, ಕಲ್ಪತರು ಪದವಿ ಕಾಲೇಜಿನ ಅಧ್ಯಕ್ಷ ವಿಠಲಾಪುರ ಜಯರಾಮು, ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕ ಪದ್ಮೇಶ್ ಮನವಿ ಮಾಡಿದರು.

ಜಿ.ಕೆ.ಶಂಕರ್ ಹಳೆಯ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು. ಗಾಯಕರಾದ ತುಮಕೂರಿನ ಸಿದ್ದಾರ್ಥ ನಾರಾಯಣ್, ಮೈಸೂರಿನ ಅಶ್ವಿನಿಶಾಸ್ತ್ರಿ, ಎಚ್.ಡಿ.ಕೋಟೆ ಅಶ್ವಿನಿ, ಮೈಸೂರಿನ ತ್ಯಾಗರಾಜು, ಮಂಡ್ಯದ ಆರ್.ಶಂಕರ್, ಆರ್. ಮೋಹನ್, ಸಂತೇಬಾಚಹಳ್ಳೀ ಪ್ರಮೋದ್, ಸಾಲಿಗ್ರಾಮ ಮಂಜುನಾಥ್ ಆಚಾರ್ಯ ಸೇರಿ ಹಲವರು ಗೀತಗಾಯನ ನಡೆಸಿಕೊಟ್ಟರು.

ಸಮಾರಂಭದಲ್ಲಿ ವಕೀಲ ಬಿ.ಗಣೇಶ್, ಟಿಎಚ್ಒ ಡಾ.ಅಜಿತ್, ಪೂರ್ಣಚಂದ್ರತೇಜಸ್ವಿ, ಶಿವರಾಜು, ಬೆಸ್ಕಾಂ ಇಂಜಿನಿಯರ್ ಸಿದ್ದಾರ್ಥ ನಾರಾಯಣ್, ಮಂಜೇಗೌಡ, ಛಾಯಾಕೃಷ್ಣ, ಸೇರಿ ಹಲವು ಗಣ್ಯರು ಮತ್ತು ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-36-122851331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.