ಮಂಡ್ಯ: ‘ಬೇಜವಾಬ್ದಾರಿ ಪ್ರಶ್ನೆಗಳು ಹೆಚ್ಚಾಗುತ್ತಿರುವುದರಿಂದ ಆಧುನಿಕ ಕಾಲದಲ್ಲಿ ಮನುಷ್ಯನ ಘನತೆ ಮೇಲೆ ವಿಶ್ವಾಸ ಕಳೆದು ಹೋಗುತ್ತಿದೆ’ ಎಂದು ಪು.ತಿ.ನ. ಟ್ರಸ್ಟ್ ಅಧ್ಯಕ್ಷ ಎಂ.ಕೃಷ್ಣೇಗೌಡ ವಿಷಾದಿಸಿದರು.

ನಗರದಲ್ಲಿ ಕರ್ನಾಟಕ ಸಂಘದಿಂದ ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೆ ಅಂಗವಾಗಿ ಗುರುವಾರ ನಡೆದ ‘ತತ್ವಪದ ಗಾಯನ’ ಕಾರ್ಯಕ್ರಮದಲ್ಲಿ ಯುಗಯೋಗಿಯ ಸ್ಮರಣೆ ಮತ್ತು ತತ್ವಪದಗಳ ಕುರಿತು ಅವರು ಉಪನ್ಯಾಸ ನೀಡಿದರು. ಪ್ರಶ್ನೆ ಮಾಡುವುದು ತಪ್ಪಲ್ಲ, ಪ್ರಶ್ನೆ ಕೇಳುವುದರಲ್ಲಿ ವಿವೇಕ, ಕಾಳಜಿ ಎಲ್ಲವೂ ಅಡಗಿರಬೇಕು. ಭಾರತೀಯ ಪರಂಪರೆಯಲ್ಲಿರುವ ಶ್ರದ್ಧೆ, ನಂಬಿಕೆಯನ್ನು ಮೌಢ್ಯ ಎಂದಿದ್ದೇವೆ. ಪ್ರಶ್ನೆ ಮಾಡುವುದನ್ನ ಬುದ್ದಿವಂತಿಕೆ ಎಂದೂ ಕರೆದಿದ್ದೇವೆ. ನನ್ನ ಕಾಳಜಿ ಏನೆಂದರೆ ಮನುಷ್ಯನ ಘನತೆ ಮೇಲೆ ವಿಶ್ವಾಸ ಹೊರಟು ಹೋಗಿದೆ ಎಂದರು. ‘ಅದ್ಯಾರೋ ಒಬ್ಬ ಹುಡುಗ ರಾಜ್ಕುಮಾರ್ ಸಮಾಧಿ ಬಗ್ಗೆ ಒಂದು ಕಾಮೆಂಟ್ ಮಾಡಿದ್ದಾನೆ, ಇಲ್ಲಿ ಚರ್ಚೆ ಮಾಡುವ ವಿಷಯವೂ ಇದಲ್ಲ, ನನಗೆ ಈ ತರಹದ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಬೇಕು ಎನಿಸುವುದಿಲ್ಲ. ಇಂತಹ ಪ್ರಶ್ನೆಗಳನ್ನು ನಿರ್ಲಕ್ಷ್ಯ ಮಾಡುವುದೇ ಉತ್ತಮ. ವ್ಯಕ್ತಿ ಬಗ್ಗೆ ಮಾತನಾಡುವ ಮುನ್ನ ಘನತೆ ಮೆಲೆ ನಿಗಾ ಇರಬೇಕು’ ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಮೊದಲು ಶಿಕ್ಷಣಕ್ಕೆ ಒತ್ತು ನೀಡಿ, ಬಳಿಕ ಮಠದ ಬಗ್ಗೆ ಚಿಂತನೆ ಮಾಡಿದರು. ಹಾಗಾಗಿ ಚುಂಚಶ್ರೀಗಳು ಕೇವಲ ಒಕ್ಕಲಿಗರಿಗಷ್ಟೇ ಸೀಮಿತವಾಗಿರದೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡಿದ್ದ ಪ್ರಬುದ್ಧ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಮಾತನಾಡಿ, ತತ್ವಪದ ಗಾಯನ ಸಮಾಜಕ್ಕೆ ಬೇಕಿದೆ. ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಗಾಯಕರಿಗೆ ವೇದಿಕೆ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು. ಗಾಯಕರಾದ ಗಾಮನಹಳ್ಳಿ ಸ್ವಾಮಿ, ನಾದ ಮಣಿನಾಲ್ಕೂರು, ರವಿ ಚುಂಚನಗಿರಿ, ಡಾ.ವರ್ಷಾ ಹಾಡಿದ ತತ್ವಪದಗಳಿಗೆ ಪ್ರೇಕ್ಷಕರು ತಲೆ ತೂಗಿದರು.

ಚರ್ಮರೋಗ ತಜ್ಞೆ ಡಾ.ಸೀಮಾ, ಡಾ.ಎಂ.ಸಿದ್ದು, ಡಾ.ಸೊನಾಲಿ ಆರ್.ಉಚ್ಚಿಲ್, ಡಾ.ಸುಹಾಸ್ ಚಂದ್ರಶೇಖರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-40-2087848134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.