ಮಂಡ್ಯ: ‘ಪ್ರಸ್ತುತದಲ್ಲಿ ಎಲೆಮರೆಕಾಯಿ ಅಂತಿರುವ ಗಾಯಕರನ್ನು ಗುರುತಿಸುವ ಮೂಲಕ ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಅಭಿಪ್ರಾಯಪಟ್ಟರು.

ನಗರದ ಅಭಿನವ ಭಾರತಿ ವಿದ್ಯಾಕೇಂದ್ರ ಆವರಣದಲ್ಲಿ ಜಿಲ್ಲಾ ಗಾಯಕರಿಗಾಗಿ ಭಾನುವಾರ ನಡೆದ ‘ಅಭಿನವ ಸರಿಗಮಪ-ಅನಂತ ಸಂಗೀತಯಾನ-2026’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನಂತಕುಮಾರ ಸ್ವಾಮೀಜಿ ಅವರ ಆಶಯ ಮತ್ತು ಆಶೀರ್ವಾದಿಂದ ಜಿಲ್ಲೆಯ ಮಕ್ಕಳಲ್ಲಿರುವ ಗಾಯನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಸಂಗೀತ ಕ್ಷೇತ್ರವು ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಪ್ರತಿಭೆಗಳ ಅಗತ್ಯವಿದ್ದು, ಮುಂದಿನ ಪೀಳೆಗೆಗೆ ಸಂಗೀತದ ಅಭಿರುಚಿ ಉಳಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಾಂಜಲಿ ಸುಗಮ ಸಂಗೀತ ಆಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಈ ಸ್ಪರ್ಧೆಯಲ್ಲಿ 120ಕ್ಕೂ ಹೆಚ್ಚು ಗಾಯನ ಸ್ಪರ್ಧಾರ್ಥಿಗಳು ಬಾಗಿಯಾಗಿದ್ದು, 17 ಕಿರಿಯ ಹಾಗೂ 15 ಹಿರಿಯರ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಮುಂದಿನ ವಾರದಲ್ಲಿ ಸೆಮಿಪೈನಲ್ ಮತ್ತು ಪೈನಲ್ ನಡೆಯಲಿದೆ ಎಂದರು.

ತೀರ್ಪುಗಾರರಿಂದ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಗಾಯಕರ ಆಡಿಷನ್ನಲ್ಲಿ ಮೊದಲ ಹಂತಕ್ಕೆ ಆಯ್ಕೆಯಾದವರಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಯಿತು.

ತೀರ್ಪುಗಾರರಾದ ಧನುಶ್ ಜಗದೀಶ್, ದಿವ್ಯಾ ಸಚ್ಚಿದಾನಂದ, ಪ್ರೊ.ಡೇವಿಡ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-40-1713511681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.