ಮೂಡಲಗಿ: ‘ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸಿ ಬದುಕನ್ನು ಸುಂದರಗೊಳಿಸುವ ಭಜನಾ ಪರಂಪರೆಯು ಬೆಳೆಯಬೇಕು’ ಎಂದು ಹಡಗಿನಾಳದ ಮಲ್ಲೇಶ್ವರ ಶರಣರು ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಸಿದ್ಧಾರೂಢ ಮಠದಲ್ಲಿ ಜರುಗಿದ ಭಜನಾ ಕಲಾರತ್ನ ಸತ್ಯಪ್ಪ ಮಂಟೂರ ಅವರ 5ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಭಜನೆ– ಸಂಗೀತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸತ್ಯಪ್ಪ ಮಂಟೂರ ಭಜನಾ ಕಲೆಯ ಮೂಲಕ ತಾವು ಬೆಳೆದರಲ್ಲದೆ ಅನೇಕರಿಗೆ ಕಲೆಯನ್ನು ಧಾರೆಯೆರೆದು ಬೆಳೆಸಿದ್ದರು’ ಎಂದರು.

ಬಳೋಬಾಳದ ಬಸವ ಯೋಗ ಮಂಟಪದ ಮಾತಾ ನೀಲಾಂಬಿಕಾದೇವಿ, ಗುರುಬಸವ ಸ್ವಾಮೀಜಿ, ಸಿದ್ಧಾರೂಢಮಠದ ನಿತ್ಯಾನಂದ ಸ್ವಾಮೀಜಿ, ರಾಯಪ್ಪ ಅಜ್ಜನವರು, ಎಸ್.ಕೆ. ಕೊಪ್ಪದ ರಾಮನಗೌಡ ವಜ್ರಮಟ್ಟಿ ಜ್ಯೋತಿ ಬೆಳಗಿಸಿದರು.

ಶಿವಮೊಗ್ಗದ ವಿದ್ವಾನ ನೌಶಾದ ಹರ್ಲಾಪುರ ಹಾಗೂ ವಿದ್ವಾನ ನಿಶಾದ ಹರ್ಲಾಪುರ ಹಾಡುಗಳನ್ನು ಪ್ರಸ್ತುತಪಡಿಸಿದರು.

ಶಿಂಗಳಾಪುರದ ಶಿವಾಜಿ ಜಾಧವ, ಕುಳಲಿಯ ಲಕ್ಷ್ಮೀದೇವಿ, ಯಲ್ಲಪ್ಪ, ಮದಿಹಳ್ಳಿಯ ರಾಮಚಂದ್ರ, ತೋಳಮಟ್ಟಿಯ ಚಂದ್ರಶೇಖರ ನಡುವಿನಮನಿ, ಮಂಕಣಿಯ ಶಿವಣ್ಣ, ಕೊಕಟನೂರದ ಗುರುಸ್ವಾಮಿ, ಗೋಠೆಯ ಶಿವಲಿಂಗ ಚಪ್ಪರ ಹಾಗೂ ಕಲ್ಲೋಳಿ, ಗೋಕಾಕ, ಮೂಡಲಗಿ, ಸುಣಧೋಳಿ, ಕುಲಿಗೋಡ, ಅಡಿಬಟ್ಟಿ, ಹಳ್ಳೂರ ಮತ್ತಿತರ ಕಡೆಯ ಭಜನಾ ತಂಡಗಳು ಪಾಲ್ಗೊಂಡವು.

ವೀಣಾ ಪಾಟೀಲ, ವಿದ್ಯಾ ಮಂಟೂರ, ರಾಜು ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-21-1547031308

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.