ಮೈಸೂರು: ಸಂಗೀತ ನಿರ್ದೇಶನ, ಜನಪ್ರಿಯ ಗೀತೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಹಂಸಲೇಖ ಅವರ ಕುರಿತ ಅಭಿಮಾನವು ಅಲ್ಲಿ ಸಂವಾದದ ರೂಪ ತಾಳಿತ್ತು. ಅವರೊಂದಿಗೆ ಒಡನಾಡಿದವರು ಮಧುರ ನೆನಪುಗಳನ್ನು ಬಿಚ್ಚಿಟ್ಟರು. ಅವರ ಸಾಹಿತ್ಯದ ವಿಶೇಷಗಳ ಕುರಿತ ಒಳನೋಟಗಳಿದ್ದವು. ಅವರು ಚಿತ್ರರಂಗದಲ್ಲಿಬೆಳೆದು ಬಂದ ಹಾದಿಯ ಕುರಿತ ಹಿನ್ನೋಟವಿತ್ತು. ಕನ್ನಡ ಚಿತ್ರರಂಗದ ಕುರಿತ ಮುನ್ನೋಟವೂ ಇತ್ತು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣವು ಮಂಗಳವಾರ ಹೀಗೆ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಅದು ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಪ್ರಯುಕ್ತ ‘ನಾಲ್ವಡಿ ನಾಡಿನಲ್ಲಿ ನಾದಬ್ರಹ್ಮ’ ಶೀರ್ಷಿಕೆಯಡಿ ‘ಹಂಸಲೇಖರ ಸಿನಿಮಾ–ಸಾಹಿತ್ಯ’ ಕುರಿತು ಹಮ್ಮಿಕೊಂಡ ಕಾರ್ಯಾಗಾರ. ನಾಲ್ವಡಿ ಕುರಿತು ಹನಸೋಗೆ ಸೋಮಶೇಖರ್ ಅವರ ‘ಮರೆಯೋದುಂಟೆ ಮೈಸೂರು ದೊರೆಯಾ’ ಗೀತೆಯನ್ನು ಹಾಡಿದ ಗಾನಾ ಸುಮಾ ಪಟ್ಟಸೋಮಹಳ್ಳಿ ನಾದಮಯ ಆರಂಭವನ್ನು ಒದಗಿಸಿದರು.

‘ಹಂಸಲೇಖಾ ಸಾಹಿತ್ಯದಲ್ಲಿ ಪ್ರಕೃತಿ–ಪರಿಸರ ಪ್ರೇಮ’ ಕುರಿತು ಮಾತನಾಡಿದ ಆಕಾಶವಾಣಿ ಹಾಸನ ವಿಭಾಗದ ನಿವೃತ್ತ ಮುಖ್ಯಸ್ಥ ಎಂ.ಶಿವಕುಮಾರ್ ಅವರು, ಹಂಸಲೇಖಾ ಅವರೊಂದಿಗೆ ಒಡನಾಟವನ್ನು ಸ್ವಾರಸ್ಯಕರವಾಗಿ ವಿವರಿಸಿದರು.

‘ಸಾಮಾಜಿಕ ಬದುಕಿನಲ್ಲಿ ಹಂಸಲೇಖರ ಸಾಹಿತ್ಯ’ ಕುರಿತು ಮಾತನಾಡಿದ ಲೇಖಕ, ಸಿನಿಮಾ ನಿರ್ದೇಶಕ ಕೃಷ್ಣಮೂರ್ತಿ ಚಮರಂ ಅವರು, ಸಮಾಜದಲ್ಲಿ ಹಂಸಲೇಖರ ಗೀತೆಗಳು ಮೂಡಿಸಿರುವ ಪ್ರಭಾವವನ್ನು ವಿವರಿಸಿದರು.

ಹಂಸಲೇಖರ ಸಾಹಿತ್ಯದಲ್ಲಿ ದೇಸಿಯತೆ ಕುರಿತು ಸಿನಿಮಾ ನಿರ್ದೇಶಕ ಪ್ರಕಾಶ್ರಾಜ್ ಮೇಹು, ‘ಸಂಗೀತ ಮತ್ತು ಒಡನಾಟ’ ಕುರಿತು ಗಾಯಕ ಆರ್.ಮಹೇಂದರ್, ‘ಹಂಸಲೇಖ ಬೆಳೆದು ಬಂದ ಹಾದಿ’ ಕುರಿತು ಗಾನಾ ಸುಮಾ ಪಟ್ಟಸೋಮಹಳ್ಳಿ ಮಾತನಾಡಿದರು.

ಕಾರ್ಯಾಗಾರವನ್ನು ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಉದ್ಘಾಟಿಸಿದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಅಧ್ಯಕ್ಷತೆ ವಹಿಸಿದ್ದರು.

ನಂತರ ನಡೆದ ಸಂವಾದದಲ್ಲಿ ಕಥೆಗಾರ ಸ್ವಾಮಿ ಪೊನ್ನಾಚಿ, ಪತ್ರಕರ್ತ ವಿನೋದ್ ಮಹದೇವಪುರ, ಲೇಖಕರಾದ ರಾಘವೇಂದ್ರ ಅಪುರಾ, ಮಹೇಶ್ ಇರಸವಾಡಿ, ಸವಿತಾ ಎಸ್.ಗೌಡ, ಸಂಜಯ್, ಸತೀಶ್ ಎಸ್, ಲೋಹಿತಾಶ್ವ, ಸತೀಶ್ ಹೆಗ್ಗೂರು, ನಂದಾದೀಪ, ಆರ್.ರವಿಕುಮಾರನಪುರ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-39-2088767644

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.