ಮೈಸೂರು: ಇಲ್ಲಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶನಿವಾರ ಭಾರತೀಯ ಸಂಗೀತಶಾಸ್ತ್ರ ದಿನದ ಸಂಭ್ರಮವು ಮನೆ ಮಾಡಿತ್ತು. ರಾ.ಸತ್ಯನಾರಾಯಣ ಜನ್ಮ ಶತಮಾನೋತ್ಸವದ ಸಂಗೀತ ಗೋಷ್ಠಿ ಗಾಯನ ಸಹೃದಯರ ಕಿವಿದುಂಬಿತ್ತು. ಗಮಕ ಕಲೆಯ ಹೂರಣ ಸವಿ ಎಲ್ಲರದ್ದಾಗಿತ್ತು.

ಬ್ರಹ್ಮವಿದ್ಯಾ ಸಂಸ್ಥೆಯು ಆಯೋಜಿಸಿದ್ದ ‘ಶತಮಾನ ರಾಸ ಅಬ್ದಿಪೂರ್ವ’ ಕಾರ್ಯಕ್ರಮದಲ್ಲಿ ವೀಣಾ ವಿದ್ವಾನ್ ರಾ.ವಿಶ್ವೇಶ್ವರನ್ ಅವರು ಧಾರವಾಡದ ರಾಜೇಶ್ವರ ಶಾಸ್ತ್ರಿ ಜೋಶಿ ಅವರಿಗೆ ‘ಶ್ರೀವಿದ್ಯಾ ಶಾಸ್ತ್ರ ಸೂರಿ’ ಪ್ರಶಸ್ತಿ, ನೃತ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ, ಮೃದಂಗ ವಾದಕ ಆನೂರು ಅನಂತಕೃಷ್ಣಶರ್ಮ ಹಾಗೂ ವರ್ಚ್ಯುವಲ್ನಲ್ಲಿ ಇಟಲಿಯ ಭಾರತೀಯ ಶಾಸ್ತ್ರ ವಿದ್ವಾಂಸ ಗ್ವಿಡೊ ಝಾಂಡರಿಗೊ ಅವರಿಗೆ ‘ರಾಸ ಸಂಸ್ಮರಣ ಪ್ರಶಸ್ತಿ’ ಪ್ರದಾನ ಮಾಡಿದರು.

ಮಹೋಪಾಧ್ಯಾಯ: ವಾರಣಸಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ವಿಜಯ್ ಶಂಕರ್ ಶುಕ್ಲಾ ಮಾತನಾಡಿ, ‘ಭಾರತೀಯ ಸಂಗೀತ ಸಂಸ್ಕೃತಿ ಅನನ್ಯವಾಗಿದ್ದು, ರಾ.ಸತ್ಯನಾರಾಯಣ ಅವರು ಮಹೋಪಾಧ್ಯಾಯರಾಗಿದ್ದು, ಸಂಗೀತ ಶಾಸ್ತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. 18 ಪುರಾಣಗಳ ತುಲನಾತ್ಮಕ ಅಧ್ಯಯನ ಪ್ರಸ್ತುತಪಡಿಸಿದ ದೇಶದ ಏಕೈಕ ವಿದ್ವಾಂಸ’ ಎಂದು ಬಣ್ಣಿಸಿದರು.

‘ವಿಜಯನಗರ ಸಾಮ್ರಾಜ್ಯದ ಶ್ರೀವಿದ್ಯಾ ಸಂಗೀತ ಪರಂಪರೆಯ ಕೊಂಡಿ ಗುರುವರ್ಯ ರಾ.ಸತ್ಯನಾರಾಯಣ ಆಗಿದ್ದಾರೆ. ಅದನ್ನು ಉಳಿಸಿಕೊಳ್ಳುವುದು, ಮುಂದಿನ ಪೀಳಿಗೆಗೆ ತಲುಪಿಸುವುದು ಅವರ ಶಿಷ್ಯರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ' ಎಂದು ಹೇಳಿದರು.

ಕೃತಿ ಬಿಡುಗಡೆ: ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಹಲ್ಯಾ ಶರ್ಮಾ ಉದ್ಘಾಟಿಸಿದರು. ಇದೇ ವೇಳೆ ವಿದ್ವಾನ್ ರಾ.ಸತ್ಯನಾರಾಯಣ ಅವರ ‘ಶ್ರೀವಿದ್ಯಾಷೋಡಶಿಕಾ ತ್ರಯೀ ಚಿತ್ಕಲಾ’, ಪಿ.ವಿ.ಕಾಣೆ ಅವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಕೃತಿ ಅನುವಾದಗಳಾದ ‘ಹಿಂದೂ ಧರ್ಮಶಾಸ್ತ್ರಗಳಲ್ಲಿ ವಿವಾಹ’, ‘ಹಿಂದೂ ಧರ್ಮಶಾಸ್ತ್ರಗಳಲ್ಲಿ ಶ್ರಾದ್ಧ’, ರಾ.ಸ.ನಂದಕುಮಾರ ಅವರ ‘ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಶ್ರೀಪಾದರಾಜರು’ ಕೃತಿಯನ್ನು ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು ರಾಸ ಸಂಗೀತ ಗೋಷ್ಠಿ ಗಾಯನವನ್ನು ವಿದ್ವಾನ್ ಸುಮುಖ ಶ್ರೀವತ್ಸ, ಅಂಬಿಕಾ ಶಾಸ್ತ್ರಿ ಪ್ರಸ್ತು ತಪಡಿಸಿದರು. ಮಧುಕರಂ ಶ್ರೀರಾಮ ಅಯ್ಯಂಗಾರ್-ವೀಣೆ, ವಿದುಷಿ ಪೃಥ್ವಿ ಭಾಸ್ಕರ್ - ವಯಲಿನ್, ವಿದ್ವಾನ್ ಜಿ.ಎಸ್.ನಾಗರಾಜ್- ಮೃದಂಗ, ವಿದ್ವಾನ್ ಶರತ್ ಕೌಶಿಕ್ - ಘಟ, ವಿ.ಎಸ್.ರಮೇಶ್ - ಮೋರ್ಚಿಂಗ್ನಲ್ಲಿ ಸಾಥ್ ನೀಡಿದರು. ಜ್ಯೋತಿಶಂಕರ್ ಅವರು ‘ಗಮಕ ಕಲೆಯಲ್ಲಿ ಜೀವನಕಲೆ’, ಪ್ರಶಾಂತ್ ಭಟ್ ಅವರು ‘ಆರೋಗ್ಯ ದಿನಚರಿ’ ಕುರಿತು ಮಾತನಾಡಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಿಇಒ ಸವಿತಾ ಸುಲುಗೋಡು, ಬಿಜೆಪಿ ಮುಖಂಡ ಗೋ.ಮಧುಸೂದನ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-39-999669118

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.