ಮೈಸೂರು: ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ಬೆಂಗಳೂರಿನ ತಬಲವಾದಕ ಪಂಡಿತ್ ರಾಜೇಂದ್ರ ನಾಕೋಡ ಅವರಿಗೆ ಪ್ರಸಕ್ತ ಸಾಲಿನ ‘ಪಂಡಿತ್ ಕೆ.ಎಸ್.ಹಡಪದ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಇಲ್ಲಿನ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ನಡೆದ ಪಂಡಿತ್ ಕೆ.ಎಸ್.ಹಡಪದ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಭಾದ ಗೌರವಾಧ್ಯಕ್ಷ ಎಂ.ವಿ.ರಾಮಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿದರು.

‘ಮೈಸೂರು ಎಲ್ಲಾ ಕಲೆ ಪ್ರೋತ್ಸಾಹಿಸುವ ಸ್ಥಳವಾಗಿದ್ದು, ಇದನ್ನು ಉಳಿಸಿಕೊಳ್ಳುವ ಹೊಣೆ ಯುವಜನರ ಮೇಲಿದೆ’ ಎಂದರು.

ಪರಮಹಂಸ ವಿದ್ಯಾನಿಕೇತನ ಟ್ರಸ್ಟ್ನ ಸಲಹೆಗಾರ ಕೆ.ಎನ್.ನವೀನ್ಕುಮಾರ್, ಸಭಾ ಅಧ್ಯಕ್ಷ ಪಂಡಿತ್ ಭೀಮಾಶಂಕರ ಬಿದನೂರ, ಉಪಾಧ್ಯಕ್ಷ ಮೃತ್ಯುಂಜಯ ಹಿರೇಮಠ ಉಪಸ್ಥಿತರಿದ್ದರು.

ರೋಹಿಣಿ ಎಸ್. ಓಂಕಾರ್ ನಿರೂಪಿಸಿದರು. ಬೆಂಗಳೂರಿನ ವಿದುಷಿ ಅಂತರಭಟ್ ಅವರ ಬಾನ್ಸುರಿ ಹಾಗೂ ವಿದ್ವಾನ್ ಅರುಣ್ ಭಟ್ ಅವರ ತಬಲಾ ವಾದನ ಗಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-39-1245580142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.