ಸಾಗರ: ‘ಅಧ್ಯಯನಶೀಲ ಪ್ರವೃತ್ತಿ ಹೊಂದಿದ್ದ ಶಿವಾನಂದ ಎಚ್.ಎಂ. ಅವರು ಪ್ರಯೋಗಶೀಲ ಚಟುವಟಿಕೆಗಳಿಗೆ ತಮ್ಮ ಜೀವನದ ಕೊನೆಯವರೆಗೂ ಮುಖಾಮುಖಿಯಾಗುತ್ತಿದ್ದರು’ ಎಂದು ಲೇಖಕ ಜಿ.ಪಿ.ಬಸವರಾಜು ಹೇಳಿದರು.

ಇಲ್ಲಿನ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಹಂಸಗಾರು ಗ್ರಾಮದ ಸ್ವರ ಸೌರಭ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಶಿವಾನಂದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಹಿತ್ಯ, ಸಂಗೀತ, ರಂಗಭೂಮಿ, ಸಿನಿಮಾ, ಯಕ್ಷಗಾನ, ತಾಳಮದ್ದಲೆ, ಕೃಷಿ, ಫೋಟೊಗ್ರಫಿ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಅವರು ತಾವಿರುವ ಪ್ರದೇಶ ಸಾಂಸ್ಕೃತಿಕವಾಗಿ ಸಮೃದ್ಧವಾಗಿರಬೇಕು ಎಂಬ ತುಡಿತ ಹೊಂದಿದ್ದರು’ ಎಂದರು.

ಗುರುಮೂರ್ತಿ ಕಾನ್ಲೆ ಮಾತನಾಡಿದರು. ವಿದ್ವಾನ್ ಮಾಧವ ಭಟ್ ಚೆನ್ನಿಗನತೋಟ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು. ಮೃದಂಗ ವಾದಕರಾಗಿ ನಂದನ್ ಕಶ್ಯಪ್, ಪಿಟೀಲು ವಾದಕರಾಗಿ ಅಮೋಘ ನಡಾಧೂರ್ ಸಾಥ್ ನೀಡಿದರು. ನಂತರ ಸಚಿನ್ ಹಂಪೆ ಅವರಿಂದ ಸರೋದ್ ವಾದನ ನಡೆಯಿತು. ಮಿಲಿಂದ್ ತಬಲಾ ವಾದಕರಾಗಿ ಸಹಕರಿಸಿದರು.

ವೀಣಾ ಶಿವಾನಂದ್, ಯಶೋಧಮ್ಮ, ದೇವರು ಭಟ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-1300712974

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.