ಶಿರಸಿ: ನಗರದ ಯೋಗಮಂದಿರದಲ್ಲಿ ರಾಗಮಿತ್ರ ಪ್ರತಿಷ್ಠಾನದ 34ನೇ ವಾರ್ಷಿಕೋತ್ಸವವು ಗಾಯನ, ವಾದನ ಹಾಗೂ ಹಿರಿಯ ಕಲಾವಿದರ ಸನ್ಮಾನದೊಂದಿಗೆ ವೈಶಿಷ್ಟ್ಯಪೂರ್ಣವಾಗಿ ಜರುಗಿತು. ಸಂಗೀತೋತ್ಸವವು ಕಲಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಬೆಳಿಗ್ಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಗಾಯನ, ಭಕ್ತಿಗೀತೆ ಹಾಗೂ ಹಾರ್ಮೋನಿಯಂ ವಾದನಗಳ ಪ್ರಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಇದೇ ಸಂದರ್ಭದಲ್ಲಿ ಹಾರ್ಮೋನಿಯಂ ಮಾಂತ್ರಿಕ ಪಂಡಿತ ವಸಂತ ಕನಕಾಪುರ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸ್ವರ ಕನಕ ಪ್ರಶಸ್ತಿಯನ್ನು ಪಂ. ಸುರೇಶ ಪತಕಿ, ಪಂ. ಶ್ರೀಧರ ಹೆಗಡೆ, ಪಂ. ಶ್ರೀಪಾದ ಹೆಗಡೆ ಸೋಮನಮನೆ ಅವರಿಗೆ ಹಾಗೂ ನಾದ ಕನಕ ಪ್ರಶಸ್ತಿಯನ್ನು ಪಂ.ರಂಗ ಪೈ, ಪಂ.ವೀರಭದ್ರಯ್ಯ ಹಿರೇಮಠ, ಪಂ.ಶೇಷಾದ್ರಿ ಐಯ್ಯಂಗಾರ ಅವರಿಗೆ ನೀಡಿ ಗೌರವಿಸಲಾಯಿತು.

ಈ ವೇಳೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಗಾಯನದ ಮೂಲಕ ಶೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಪೋಷಕ ಆರ್.ಎನ್.ಭಟ್ ವಹಿಸಿದ್ದರು. ಪ್ರಮುಖರಾದ ಕೃಷ್ಣಮೂರ್ತಿ ಕೆರೆಗದ್ದೆ, ಸಂತೋಷ ಶೆಟ್ಟಿ, ಡಾ.ಎಲ್.ಜಿ. ಧರ್ಮಶಾಲಾ ಹಾಗೂ ಎಂ.ಎನ್.ಹೆಗಡೆ ಪಾಲ್ಗೊಂಡಿದ್ದರು. ಗಣೇಶ ಭಟ್ ಹಳವಳ್ಳಿ ನಿರೂಪಿಸಿದರು. ಪ್ರಾಚಾರ್ಯ ಪ್ರಕಾಶ ಹೆಗಡೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-20-746623186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.