ಶಿವಮೊಗ್ಗ: ಶ್ರೀಗಂಧ ಸಂಸ್ಥೆ ಸಹಯೋಗದೊಂದಿಗೆ ಸಪ್ತಸ್ವರ, ಹಿಂದೂಸ್ತಾನಿ ಸಂಗೀತಸಭಾ ಆಶ್ರಯದಲ್ಲಿ ದಿ.ಅರುಣ್ ಹಂಪಿಹೊಳಿ ಅವರ 67ನೇ ಜನ್ಮದಿನದ ನೆನಪಿಗಾಗಿ ಪ್ರವೀಣ ಗೋಡಕಿಂಡಿ ಮತ್ತು ಜಯತೀರ್ಥ ಮೇವುಂಡಿ ಅವರಿಂದ ‘ನಾದನಿನಾದ’ ವೇಣು-ಗಾನ ಜುಗಲ್ಬಂದಿ ಕಾರ್ಯಕ್ರಮ ಮೇ 17ರಂದು ಭಾನುವಾರ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಖಜಾಂಚಿ ಕೆ.ಈ.ಕಾಂತೇಶ್ ತಿಳಿಸಿದರು.

‘ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಪಂಡಿತ್ ನರೇಂದ್ರನಾಯಕ್, ತಬಲಾದಲ್ಲಿ ಕೇಶವ ಜೋಶಿ, ಪಕ್ಕವಾದ್ಯದಲ್ಲಿ ರಾಘವೇಂದ್ರ ಪ್ರಭು ಮತ್ತು ತಾಳದಲ್ಲಿ ಕಾರ್ತೀಕೇಯ ಪ್ರಭು ಭಾಗವಹಿಸಲಿದ್ದಾರೆ. ಅಧ್ಯಕ್ಷತೆ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಸಪ್ತಸ್ವರ ಸಂಗೀತ ಸಭಾದ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್ ಉಪಸ್ಥಿತರಿರುವರು‘ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯರಾದ ಹೊಸಳ್ಳಿ ವೆಂಕಟರಾಮ್, ವಿದ್ವಾನ್ ಎಚ್.ಎಸ್.ನಾಗರಾಜ್, ಹುಮಾಯೂನ್ ಹರ್ಲಾಪುರ್, ಸಂಗಮೇಶ ಗವಾಯಿ, ಶಿವಮೊಗ್ಗ ವೇಣುಗೋಪಾಲ್, ತುಕಾರಾಮ್ ರಂಗಧೋಳ್ ಹಾಗೂ ರೇಖಾ ಹಂಪಿಹೊಳಿ ಅವರನ್ನು ಅಭಿನಂದಿಸಲಾಗುವುದು ಎಂದರು.ಭಾಸ್ಕರ್ ಜಿ. ಕಾಮತ್, ಕೆ.ಎಸ್.ಈಶ್ವರಪ್ಪ, ಉಮೇಶ್ ಆರಾಧ್ಯ, ಕುಬೇರಪ್ಪ, ದೇವುಕುಮಾರ್, ವಿವೇಕಾನಂದ ನಾಯಕ್, ಶ್ರೀನಿವಾಸ್ ಹಂಪಿಹೊಳಿ, ಕೆ.ಜಿ.ಕುಮಾರಶಾಸ್ತ್ರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-42-502492463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.