ಸಿಂಧನೂರು: ‘ಸಂಗೀತ ಕೇಳುವುದರಿಂದ ಅಂತರಂಗದ ಕಲುಷಿತ ಭಾವನೆಗಳು ದೂರವಾಗಿ ಮನಸ್ಸು ಶುದ್ಧೀಕರಣಗೊಳ್ಳುತ್ತದೆ’ ಎಂದು ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಶಿ ಅಭಿಪ್ರಾಯಪಟ್ಟರು.

ನಗರದ ಎಪಿಎಂಸಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯಿಂದ ಯುಗಾದಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಭಕ್ತಿ ಸುಧೆ ಮಾಸಿಕ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಂಗೀತ ಕಾರ್ಯಕ್ರಮದಿಂದ ಮಾನಸಿಕ ನೆಮ್ಮದಿ ಲಭಿಸುವುದಲ್ಲದೆ ದೇಶದ ಪರಂಪರೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ಸಿಂಧನೂರಿನ ಸಂಗೀತಗಾರ ವಿಜಯಕುಮಾರ ಜಿ.ಹಿರೇಮಠ ಅವರು ಧಾರವಾಡದಲ್ಲಿ 7 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಪ್ರಸ್ತುತ ಸಿಂಧನೂರಿನಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದ್ದಾರೆ. ಅವರು ಸಂಗೀತ ತರಬೇತಿ ನೀಡುತ್ತಿರುವುದರಿಂದ ಸಿಂಧನೂರಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಹೇಳಿದರು.

ಬಾಲ ಕಲಾವಿದರಾದ ಸ್ವರ, ಅನಿರುದ್ಧ, ರಿತಿಕಾ, ಸಾನ್ವಿ, ನಿಸರ್ಗ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದರು.

ನಂತರ ಸಂಗೀತಗಾರ ವಿಜಯಕುಮಾರ ಹಿರೇಮಠ ವಿವಿಧ ಹಾಡುಗಳನ್ನು ಹಾಡಿದರು. ಇದೇ ವೇಳೆ ವಿರಾಟ್ ಬದಿ ಕೊಳಲು, ಮಹಾಂತಯ್ಯ ಗೊನವಾರ ಹಾರ್ಮೋನಿಯಂ, ಗಣಪತಿ ಪೂಜಾರ್ ದಿನ್ನಿ ತಬಲಾ ಸಾಥ್ ನೀಡಿದರು.

ಮುಖಂಡರಾದ ಗವಿಸಿದ್ದಯ್ಯ ಹಿರೇಮಠ, ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-32-505893088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.