ಮುಂಬೈ (ಪಿಟಿಐ): ‘ತುಮ್ನೆ ಪುಕಾರಾ’, ‘ ನಾ ನಾ ಕರ್ತೆ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಬಹುಭಾಷಾ ಗಾಯಕಿ ಸುಮನ್ ಕಲ್ಯಾಣಪುರ್(89) ಭಾನುವಾರ ನಿಧನರಾಗಿದ್ದಾರೆ.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಲೋಖಂಡವಾಲಾ ಪ್ರದೇಶದ ನಿವಾಸದಲ್ಲಿ ರಾತ್ರಿ 8ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪುತ್ರಿ ಚಾರು ಇದ್ದಾರೆ.

1960 ಮತ್ತು 1970ರ ದಶಕದಲ್ಲಿ ತಮ್ಮ ಮಧುರ ಗೀತೆಗಳಿಂದ ಮನಸೆಳೆದಿದ್ದ ಕಲ್ಯಾಣಪುರ್ ಅವರು, ಅಂದಿನ ಕಾಲದ ಮೇರುಗಾಯಕಿ ಲತಾ ಮಂಗೇಶ್ಕರ್ ಪ್ರಭಾವದ ನಡುವೆಯೂ ತಮ್ಮದೇ ಸ್ವಂತಿಕೆಯನ್ನು ರೂಪಿಸಿದ್ದರು. ಸುಮನ್ ಅವರ ಧ್ವನಿಯನ್ನು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ದನಿಗೆ ಹೋಲಿಸಲಾಗುತಿತ್ತು. ಆದರೆ, ಸಂದರ್ಶನವೊಂದರಲ್ಲಿ ಇದನ್ನು ಸುಮನ್ ನಿರಾಕರಿಸಿದ್ದರು.

ಹಿಂದಿ, ಕನ್ನಡ, ಮರಾಠಿ, ಅಸ್ಸಾಮಿ, ಬಂಗಾಳಿ, ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ಭಕ್ತಿಗೀತೆ, ಗಜಲ್ ಹೀಗೆ ಹಲವು ಪ್ರಕಾರದ ಹಾಡುಗಾರಿಕೆಯಲ್ಲಿ ಹೆಸರು ಮಾಡಿದ್ದರು.

ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ಮುಂಬೈನ ಪವನ್ ಹನ್ಸ್ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುಮನ್ ಅವರ ತಂದೆ ಶಂಕರರಾವ್ ಹೆಮ್ಮಾಡಿ ಅವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿಯವರು. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈಗೆ ಸ್ಥಳಾಂತರಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-4-275793834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.