ತಾಳಿಕೋಟೆ: ಸ್ಥಳೀಯ ಕನ್ನಡ ಸಂಘದಿಂದ ಮಾಸಿಕ ಕಾರ್ಯಕ್ರಮದಡಿ ಸಂಗೀತ ರಸಸಂಜೆ ಕಾರ್ಯಕ್ರಮ ಭಾನುವಾರ ಸಂಜೆ ಪಟ್ಟಣದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಜರುಗಿತು.

ಸಂಘದ ಸಹಕಾರ್ಯದರ್ಶಿ ಅಪ್ಪಾಸಾಹೇಬ ಮೂಲಿಮನಿ ಅವರು ಮಾತನಾಡಿದರು. ಸಂಗೀತ ಶಿಕ್ಷಕಿ ದೂರದರ್ಶನ ಕಲಾವಿದೆ ವಿಶಾಲಾಕ್ಷಿ ಬಡಿಗೇರ ಅವರು ಎರಡು ಗಂಟೆಗಳ ಕಾಲ ತಮ್ಮ ಸುಮಧುರ ಕಂಠದಿಂದ ವೈವಿಧ್ಯಮಯ ಹಾಡುಗಳಿಂದ ಶ್ರೋತೃಗಳ ಹೃದಯ ತಣಿಸಿದರು.

ಹಿರಿಯರಾದ ಈಶ್ವರ ಬಡಿಗೇರ ಬ.ಸಾಲವಾಡಗಿ ತಬಲ ಸಾಥ್ ನೀಡಿದರು. ಪುಟ್ಟ ಗಾಯಕಿ ದೃಶ್ಯಾ ಅಶೋಕ ಹೊಸಗೌಡರ ಕೂಡ ಸಂಗೀತ ಸಂಜೆಗೆ ಗಂಧ ತೀಡಿದಳು. ಆರಂಭದಲ್ಲಿ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಹಾಗೂ ಲೇಖಕ ಶಿವಣ್ಣ ನೀರಲಗಿ ಅವರಿಗೆ ಕನ್ನಡ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕನ್ನಡ ಸಂಘದ ಅಧ್ಯಕ್ಷ ಹಿರಿಯ ವೈದ್ಯ ಡಾ.ವಿಜಯಕುಮಾರ ಕಾರ್ಚಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಎಂ. ಘಿವಾರಿ, ಶಿವಶರಣೆ ಶಾಂತಮ್ಮತಾಯಿ ಕೋಳೂರ, ಸಂಘದ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಸಾಹೇಬಗೌಡ ಬಿರಾದಾರ, ಉಪಾಧ್ಯಕ್ಷೆ ಸುಮಂಗಲಾ ಕೋಳೂರ, ಉಪಾಧ್ಯಕ್ಷ ಆರ್.ಬಿ.ದಮ್ಮೂರಮಠ, ಸಿ.ಲಿಂಗಪ್ಪ, ದಿನಕರ ಜೋಶಿ, ಗುಂಡುರಾವ ಧನಪಾಲ, ಸಾಹೇಬಗೌಡ ಬಿರಾದಾರ, ಬಿ.ಎಸ್.ದ್ಯಾಪೂರ, ಉಮಾ ಘಿವಾರಿ, ರುದ್ರಮ್ಮ ದೇಸಾಯಿ, ಎಸ್.ಎಸ್.ಗಡೇದ, ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶೇಷಾಚಲ ಹವಾಲ್ದಾರ(ಚೇಚಿ) ನಿರ್ವಹಿಸಿದರು. ಸಾಹೇಬಗೌಡ ಬಿರಾದಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-26-1400196634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.