ಬ್ರಹ್ಮಾವರ: ಇಲ್ಲಿಗೆ ಸಮೀಪದ ಅಚ್ಲಾಡಿಯ ಸನ್ಶೈನ್ ಗೆಳೆಯರ ಬಳಗ, ಕ್ರೀಡಾ ಸಂಘದ ಆಶ್ರಯದಲ್ಲಿ ‘ಸನ್ಶೈನ್ ಉತ್ಸವ 2026’ ಏ. 26ರಂದು ಇಲ್ಲಿನ ಸನ್ಶೈನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾತ್ರಿ 7ರಿಂದ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಅನಾರೋಗ್ಯ ಪೀಡಿತರು, ಆರ್ಥಿಕ ಅಶಕ್ತರಿಗೆ ಧನಸಹಾಯ, ಸಾಧಕರಿಗೆ ‘ಸನ್ಶೈನ್ ಗೌರವ ಪುರಸ್ಕಾರ’ ನಡೆಯಲಿದೆ.

ಸಮಾಜಸೇವಕ ಚಂದ್ರಶೇಖರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಎಎಸ್ಐ ಚಂದ್ರಶೆಟ್ಟಿ, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಿಕ್ಷಕಿ ವಿಜಯ ಟೀಚರ್ ಅವರಿಗೆ ಸನ್ಶೈನ್ ಗೌರವ ನೀಡಲಾಗುವುದು.

ಕಿರುತೆರೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಗಿಣಿ ರಾಘು, ಹುಲಿ ಕಾರ್ತಿಕ್, ಜಗ್ಗಪ್ಪ ತಂಡದಿಂದ ನಗೆ ಹಬ್ಬ. ಗಾಯಕರಾದ ಸುಪ್ರೀತ್ ಫಲ್ಗುಣಿ, ಮಲ್ಲಿಕಾ ಮಟ್ಟ ತಂಡದವರಿಂದ ಗಾನ ಸುಧೆ, ಕರಾವಳಿಯ ಖ್ಯಾತ ಕೋಟ ಡ್ಯಾನ್ಸ್ ಕ್ರೂ ತಂಡದವರಿಂದ ‘ಡ್ಯಾನ್ಸ್ ಧಮಾಕ’ ನೃತ್ಯ ಪ್ರದರ್ಶನ ನಡೆಯಲಿದೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಆನಂದ ಸಿ. ಕುಂದರ್, ರಾಜೇಶ್ ಕಾರಂತ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-28-1712484025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.