ವಿಜಯಪುರ: ‘ಕಾವ್ಯಕ್ಕೆ ಸಂಗೀತ ಮತ್ತು ದೃಶ್ಯದ ಸ್ಪರ್ಶ ನೀಡಿದರೆ ಜನಮನ ತಲುಪುತ್ತದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಕುಶಾಲ ಬರಗೂರು ಹೇಳಿದರು.

ನಗರದ ಗಾನಬನದ ಶ್ರೀಗುರು ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಹಾಗೂ ಸಿದ್ಧರಾಮೇಶ್ವರ ಟೆಲಿಫಿಲಂ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೋಮು ಹಿಪ್ಪರಗಿ ಅವರ ‘ವಿಜಯಪುರ’ ಕನ್ನಡ ಅಲ್ಬಮ್ ಸಾಂಗ್ ಲೋಕಾರ್ಪಣೆ ಹಾಗೂ ವರ್ತಮಾನ ಕಾವ್ಯ ಸಿಂಚನ ಎಂಬ ವಿಶೇಷ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಾಹಿತ್ಯದ ಓದು ವ್ಯಕ್ತಿಯ ಚಿಂತನೆಯ ಹರಿವನ್ನು ಹೆಚ್ಚಿಸುವುದರ ಜೊತೆಗೆ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದಿವ್ಯ ಶಕ್ತಿಯಾಗಿದೆ. ಕವಿತೆ ಗಟ್ಟಿಗೊಳ್ಳಲು ಅಧ್ಯಯನ ಅಗತ್ಯವಾಗಿದೆ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ದಾಕ್ಷಾಯಣಿ ಹುಡೇದ, ಲಾಯಪ್ಪ ಇಂಗಳೆ, ರಾಜೇಶ್ವರಿ ಮೋಪಗಾರ, ಗೀತಾ ಸನದಿ, ಮುರುಗೇಶ ಸಂಗಮ, ಭೀಮರಾವ ಉಪ್ಪಾರ, ಭರತಕುಮಾರ ಎಚ್.ಟಿ., ಕಲ್ಲಪ್ಪ ಶಿವಶರಣ, ಲಕ್ಷ್ಮೀ ಗೋಡೆಕರ, ಪ್ರಶಾಂತ ಬಿಳೆಭಾವಿ, ಜಯಶ್ರೀ ಚಲವಾದಿ, ಮಲ್ಲಿಕಾರ್ಜುನ ನಾಟೀಕಾರ, ಧಾನೇಶ್ವರಿ ಆಲಾಳೆ, ಶಿವಾಜಿ ಮೋರೆ, ರೇಣುಕಾ ಕೋಟ್ಯಾಳ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಹೋರಾಟಗಾರರಾದ ನೀಲಾಂಬಿಕಾ ಕಟ್ಟಿಮನಿ, ಶಿವರಂಜಿನಿ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-26-1874357200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.