ವಾಡಿ: ‘ಜಡ ಹಾಗೂ ಕಠಿಣವಾದ ಕಲ್ಲನ್ನು ಸುಂದರ ಮೂರ್ತಿಯನ್ನಾಗಿ ಬದಲಾಯಿಸುವ ಶಕ್ತಿ ಶಿಲ್ಪಕಲೆಗೆ ಇರುವಂತೆ ಮನುಷ್ಯನ ಹೃದಯದ ಕಠಿಣತೆಯನ್ನು ಕೋಮಲವಾಗಿಸುವ ಶಕ್ತಿ ಸಂಗೀತ ಮತ್ತು ಸಾಹಿತ್ಯಕ್ಕಿದೆ’ ಎಂದು ಜನಧ್ವನಿ ಜಾಗೃತಿ ವೇದಿಕೆಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ಹೇಳಿದರು.

ಈಚೆಗೆ ಪಟ್ಟಣದ ನ್ಯೂ ವಿಜ್ಡಂ ಶಾಲೆಯಲ್ಲಿ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋಮು ಭಾವನೆ ಕೆರಳಿಸುವಂತಹ ಹಾಡುಗಳಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು, ಜನರು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಒಡೆದುಹೋಗುವ ಅಪಾಯವಿರುತ್ತದೆ. ಪ್ರಭಾವಶಾಲಿ ಮಾಧ್ಯಮಗಳಾಗಿರುವ ಚಿತ್ರಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಮಾಜಮುಖಿಯಾಗಿದ್ದರೆ ಜನರಲ್ಲಿ ಏಕತೆ ಮೂಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಹಿರಿಯ ಮುಖಂಡ ಮಹ್ಮದ್ ಯುಸೂಫ್ ಸಾಬ್ ಮುಲ್ಲಾ ಕಮರವಾಡಿ, ‘ಸಾರ್ವಜನಿಕರಿಗೆ ಸಿಗಬೇಕಾದ ಮೂಲಸೌಕರ್ಯಗಳಿಗಾಗಿ ಹೋರಾಟಕ್ಕೆ ಜನಧ್ವನಿ ಜಾಗೃತ ಸಮಿತಿ ನಾಯಕತ್ವ ನೀಡುತ್ತಿದ್ದು, ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಕಾಲೇಜು, ಉದ್ಯಾನವನ, ಕ್ರೀಡಾಂಗಣ, ಗ್ರಂಥಾಲಯ ಹೀಗೆ ನಾನಾ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿದೆ’ ಎಂದು ಹೇಳಿದರು.

ಸಮಿತಿಯ ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ ಅಧ್ಯಕ್ಷತೆ ವಹಿಸಿದ್ದರು. ನ್ಯೂ ವಿಜ್ಡಂ ಶಾಲೆಯ ಮುಖ್ಯಸ್ಥ ಅನಿತ ಅಗರವಾಲ ಅತಿಥಿಯಾಗಿದ್ದರು.

ಮುಖಂಡರಾದ ಶಿವಪ್ಪ ಮುಂಡರಗಿ, ಭೀಮಸಿಂಗ ಚವ್ಹಾಣ, ಸುರೇಶ ನಾಟೇಕರ, ಕಾಶೀನಾಥ ಶಟಗಾರ, ಮಲ್ಲಯ್ಯಸ್ವಾಮಿ ಮಠಪತಿ, ಮಡಿವಾಳಪ್ಪ ಹೇರೂರ, ಅಮೃತಪ್ಪ ದಿಗ್ಗಾಂವ, ವಿಠ್ಠಲ ರಾಠೋಡ, ದೇವಿಂದ್ರ ಕರದಳ್ಳಿ, ಭೀಮಣ್ಣ ಹವಾಲ್ದಾರ, ಸಂಗೀತ ಗಾಯಕರಾದ ಈರಣ್ಣ ಯಲಗಟ್ಟಿ, ಸುರೇಶ ಬನಸೋಡೆ, ಬಸವರಾಜ ಕೇಶ್ವಾರ, ಸುನೀಲ ರಾಠೋಡ, ಗುಂಡಪ್ಪ ಭಂಕೂರ, ದಯಾನಂದ ಖಜೂರಿ, ರವಿ ಕೋಳಕೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಜನಧ್ವನಿಯ ಪ್ರಧಾನ ಕಾರ್ಯದರ್ಶಿ ಶೇಖ್ ಅಲ್ಲಾಬಕ್ಷ್ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರಿ ನಂದೂರುಮಠ ನಿರೂಪಿಸಿದರು. ರಮೇಶ ಮಾಶಾಳ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-31-24284315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.