ಬೀದರ್: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘ ಬೀದರ್ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಯುಗಾದಿ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕವಯತ್ರಿಯೂ ಆದ ಎ.ಎಸ್.ಐ. ಮಲ್ಲೇಶ್ವರಿ, ಸ್ವಾತಂತ್ರ್ಯ ಸಿಕ್ಕರೂ, ನಾನು ಪೋಲಿಸಾದರೂ ಇವತ್ತಿಗೂ ರಕ್ಷಣೆ ಇಲ್ಲದಂತಿದೆ. ಮಹಿಳೆ ಎನ್ನುವ ಕಾರಣಕ್ಕೆ ಭಯವಿದೆ ಎಂದು ಸಮಕಾಲೀನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲುವ ಕವಿತೆ ವಾಚಿಸಿದರು.

ಸಾಹಿತಿ ಪಾರ್ವತಿ ಸೋನಾರೆ, ಮೈಗಂಟಿದ ಮಲಿನ ತೊಳೆದರೇನು? ಸ್ವಚ್ಛ ಸುಂದರ ಉಡುಗೆ ಉಟ್ಟರೇನು? ಮನ ಶುದ್ಧವಿರಬೇಕು. ಎಲ್ಲ ಭೇದಗಳ ಬಿಟ್ಟು ಸುಜ್ಞಾನ, ಸುವಿಚಾರ ಬೆಳೆಸಿಕೊಳ್ಳಬೇಕು ವಿನಃ ಮೌಢ್ಯತೆಗೆ ಒಳಗಾಗಬಾರದು ಎಂದು ಕವಿತೆ ಓದಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಬ್ಬದ ಸಂಭ್ರಮವೇನೋ ಇತ್ತು. ಯುದ್ಧದ ಭೀತಿ ಕೂಡ ಇತ್ತು. ಗ್ಯಾಸ್ ಅಭಾವ ಇತ್ತು. ಬೇವು ಕಮ್ಮಿ ಇದ್ದರೂ ಬೆಲ್ಲ ಜಾಸ್ತಿ ಇತ್ತು. ಆದರೂ ಯಾಕೋ ವರ್ಷದ ಯುಗಾದಿ ಹಬ್ಬ ಕಹಿನೆ ಇತ್ತು ಅಂತ ಸದ್ಯದ ಸ್ಥಿತಿ ಮೇಲೆ ಬೆಳಕು ಚೆಲ್ಲುವ ಕವಿತೆ ವಾಚಿಸಿದರು.

ಕಿತ್ತೂರು ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಮಲ್ಲಮ್ಮ ಪಾಟೀಲ ಅವರನ್ನು ಗೌರವಿಸಲಾಯಿತು. ಪುಣ್ಯವತಿ ವಿಸಾಜಿ, ಸಿದ್ದಮ್ಮ ಸಂಗ್ರಾಮ, ಲೀಲಾ ಸಂಗ್ರಾಮ, ಮಲ್ಲಮ್ಮ ಪಾಟೀಲ ಕೂಡ ಕವನ ವಾಚಿಸಿದರು. ರೂಪಾ ಸಂಗಮಕರ್, ಲೀಲಾವತಿ ನಿಂಬೂರೆ, ಪ್ರತಿಭಾ ಚಾಮಾ, ಭಾಗೀರಥಿ ಕೊಂಡ, ಸಂಧ್ಯಾ ಬಿದ್ರಿ, ಶ್ರೀದೇವಿ ಪಾಟೀಲ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-33-807457122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.