ಹೇಳಬೇಕನ್ನಿಸಿದ್ದೆಲ್ಲಾ ಹೇಳದೆ
ಎದೆಯೊಳಗೆ ಬಚ್ಚಿಟ್ಟುಕೊಂಡು
ಹೊಯ್ದಾಡಿ, ತಿಣುಕಾಡಿ
ಒಳಗೊಂದು ಅಗ್ನಿಪರ್ವತವ ಸೃಷ್ಟಿಸಿಕೊಂಡು
ಲಾವಾರಸ ಉಕ್ಕಿ
ಸ್ಪೋಟಗೊಂಡು, ಹರಿದು
ಜೀವಚೈತನ್ಯವ ನುಂಗದಂತೆ
ಕಡು ಜಾಗರೂಕತೆಯಿಂದ ಬದುಕಿ
ಆಗಾಗ, ಅಲ್ಲಲ್ಲಿ ಹುಟ್ಟುವ
ನಿರಾಶೆ, ಅತೃಪ್ತಿ, ಕೋಪ
ಹತಾಶೆಗಳನ್ನೆಲ್ಲಾ ಗಂಟಲೊಳಗೆ
ತಳ್ಳಿಕೊಂಡು
ತಾಳ್ಮೆ, ಸಹನೆ, ಸ್ವಬೂರ್
ಎಂಬ ಏಳು ಸುತ್ತಿನ ಕೋಟೆಯೊಳಗೆ
ಬಂಧಿಯಾಗಿ
ನಗುವಿನ ಮುಖವಾಡದೊಳಗೆ
ಜನ್ಮಾಂತರದ ವಿಷಾದಗಳನ್ನು
ಹುದುಗಿಸಿಕೊಂಡು
ತನ್ನ ತಾನೇ ಕೊಂದುಕೊಳ್ಳುವುದಕ್ಕೆ
ಈ ಜಗದ ಹೆಂಗಳೆಯರು
ಇಟ್ಟುಕೊಂಡ ಚಂದದ ಹೆಸರು
'ಮೌನ'ವೆಂದಾದರೆ,

ಆ ಚಂದಕ್ಕೆ, ಮೌನಕ್ಕೆ
ಧಿಕ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಹೇಳಬೇಕನ್ನಿಸಿದ್ದೆಲ್ಲಾ ಹೇಳದೆ
ಎದೆಯೊಳಗೆ ಬಚ್ಚಿಟ್ಟುಕೊಂಡು
ಹೊಯ್ದಾಡಿ, ತಿಣುಕಾಡಿ
ಒಳಗೊಂದು ಅಗ್ನಿಪರ್ವತವ ಸೃಷ್ಟಿಸಿಕೊಂಡು
ಲಾವಾರಸ ಉಕ್ಕಿ
ಸ್ಪೋಟಗೊಂಡು, ಹರಿದು
ಜೀವಚೈತನ್ಯವ ನುಂಗದಂತೆ
ಕಡು ಜಾಗರೂಕತೆಯಿಂದ ಬದುಕಿ
ಆಗಾಗ, ಅಲ್ಲಲ್ಲಿ ಹುಟ್ಟುವ
ನಿರಾಶೆ, ಅತೃಪ್ತಿ, ಕೋಪ
ಹತಾಶೆಗಳನ್ನೆಲ್ಲಾ ಗಂಟಲೊಳಗೆ
ತಳ್ಳಿಕೊಂಡು
ತಾಳ್ಮೆ, ಸಹನೆ, ಸ್ವಬೂರ್
ಎಂಬ ಏಳು ಸುತ್ತಿನ ಕೋಟೆಯೊಳಗೆ
ಬಂಧಿಯಾಗಿ
ನಗುವಿನ ಮುಖವಾಡದೊಳಗೆ
ಜನ್ಮಾಂತರದ ವಿಷಾದಗಳನ್ನು
ಹುದುಗಿಸಿಕೊಂಡು
ತನ್ನ ತಾನೇ ಕೊಂದುಕೊಳ್ಳುವುದಕ್ಕೆ
ಈ ಜಗದ ಹೆಂಗಳೆಯರು
ಇಟ್ಟುಕೊಂಡ ಚಂದದ ಹೆಸರು
'ಮೌನ'ವೆಂದಾದರೆ,

ಆ ಚಂದಕ್ಕೆ, ಮೌನಕ್ಕೆ
ಧಿಕ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.