ಕಲಬುರಗಿ (ನಾಗಯ್ಯಸ್ವಾಮಿ ಅಲ್ಲೂರು ವೇದಿಕೆ): ‘ಕಲ್ಪನೆಗಳು ಕಣ್ಣು ಬಿಟ್ಟು ಎದೆ ತಟ್ಟಿದಾಗ ಹುಟ್ಟುವ ಅಂತರಂಗ ಸ್ಪಂದನದ ಫಲಶ್ರುತಿಯೇ ಕವಿತೆ’ ಎಂದು ಕಲಬುರಗಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಅಧ್ಯಕ್ಷ ನರಸಿಂಗರಾವ ಹೇಮನೂರ ಬಣ್ಣಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಹಾಗೂ ಕಲಬುರಗಿ ತಾಲ್ಲೂಕು ಕಸಾಪ ಘಟಕಗಳು ಭಾನುವಾರ ಆಯೋಜಿಸಿದ್ದ ಕಲಬುರಗಿ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಅಧ್ಯಕ್ಷತೆ ಅವರು ಮಾತನಾಡಿದರು.

‘ಸೂಕ್ಷ್ಮತೆ, ಸ್ವಚ್ಛತೆ, ಧ್ವನಿಪೂರ್ಣತೆ ಶ್ರೇಷ್ಠ ಕಾವ್ಯದ ಲಕ್ಷಣಗಳು. ಅದರೊಟ್ಟಿಗೆ ಸ್ವಂತಿಕೆ ಹಾಗೂ ಸಾಮಾಜಿಕ ಸ್ಪಂದನವೂ ಮುಖ್ಯ. ಕವಿಗೆ ಪ್ರತಿಭೆಯೇ ಮುಖ್ಯ. ಪರಿಸರ, ಸ್ಫೂರ್ತಿ ಮುಂತಾದವೆಲ್ಲವೂ ಸೂಲಗಿತ್ತಿಯಂತೆ ಕೆಲಸ ಮಾಡುತ್ತವಷ್ಟೇ. ಉರಿಯುವಂತೆ ಹಣತೆ, ಒಸರುವಂತೆ ಒರತೆ, ಬರೆಯಬೇಕು ಕವಿತೆ’ ಎಂದು ಯುವಜನರನ್ನು ಹುರಿದುಂಬಿಸಿದರು.

‘ಕವಿ–ಕಾವ್ಯ ಸಂಬಂಧವನ್ನು ತಾಯಿ–ಮಗುವಿನ ಅರ್ಥಪೂರ್ಣ ಬೆಸುಗೆಯಲ್ಲಿ ಕಾಣಬೇಕು. ಭ್ರಮಿತ ಲೋಕದ ಅಪಸವ್ಯಗಳಿಂದ ಕವಿ–ಕಾವ್ಯ ಸಂಬಂಧವನ್ನು ನಿರ್ದೇಶಿಸಲಾಗದು. ಬದಲಾಗಿ ಕವಿಯ ಕಲ್ಪನೆಗಳನ್ನು ತಾಯಿಯ ಬಸಿರು ಮತ್ತರದ ಕುಡಿಗೆ ಹೋಲಿಸಬಹುದಾಗಿದೆ’ ಎಂದರು.

‘ಪದ ಬರೆಯಲು ಹದಬೇಕು. ಗೀಚಿದ್ದೆಲ್ಲ ಕವಿತೆ ಆಗಲ್ಲ. ಪದ್ಯ ರಚನೆಕಾರರು ಬಹಳಷ್ಟಿದ್ದರೂ, ಕವಿಗಳು ಎನಿಸಿಕೊಳ್ಳುವವರು ವಿರಳ. ಕವಿ ಹೃದಯ ಜನರ ದುಃಖ–ದುಮ್ಮಾನಗಳಿಗೆ ಮಿಡಿಯಬೇಕು. ಹೊಸತನ ಕಾಣುವ ಒಳನೋಟ, ಭಾಷಾ ಪ್ರೌಢಿಮೆ, ನಯಗಾರಿಕೆ ಕವಿಗೆ ಅಗತ್ಯ. ಕವನಗಳ ಹುಟ್ಟಿಗೆ ಇಂಥದ್ದೇ ಸಂದರ್ಭಗಳು ಬೇಕೆಂದಿಲ್ಲ. ಜೀವನದ ಸಿಹಿ–ಕಹಿ ಅನುಭವವೇ ಕಾವ್ಯ. ಅನುಭವದ ಮೂಸೆಯಿಂದ ಕಂಡುಂಡ ಸತ್ಯ, ನೋವು, ನಲಿವು, ಸುಖ, ದುಃಖ, ಪ್ರೀತಿ, ಹತಾಶೆ... ಹೀಗೆ ಎಲ್ಲವನ್ನೂ ಸಮಾಜಮುಖಿಗೊಳಿಸುವುದೇ ಕಾವ್ಯ’ ಎಂದರು.

‘ಜಿಲ್ಲೆಯ ಕವಿ–ಕಾವ್ಯ ಪರಂಪರೆಯ ಕುರಿತು ಸಮಗ್ರ ಸಂಪುಟ ಹೊರ ಹೊರತರಬೇಕು. ಜಿಲ್ಲೆಯ ರಿಂಗ್ ರಸ್ತೆಗಳಿಗೆ ಕವಿಗಳ ಹೆಸರಿಡಬೇಕು. ತಾಲ್ಲೂಕು ಮಟ್ಟದಲ್ಲೂ ಕವಿ ಸಾಹಿತ್ಯ ಸಮ್ಮೇಳನ ನಡೆಸಬೇಕು’ ಎಂಬುದು ಸೇರಿದಂತೆ 11 ಹಕ್ಕೊತ್ತಾಯಗಳನ್ನು ಮಾಡಿದರು.

ಸಮ್ಮೇಳನ ಉದ್ಘಾಟಿಸಿ ಶಹಾಪುರದ ಏಕದಂಡಗಿ ಮಠದ ಅನುಭಾವಿ ಅಜ್ಜೇಂದ್ರ ಸ್ವಾಮೀಜಿ, ‘ಜೀವನದ ಸತ್ಯಗಳನ್ನು ಹಿಡಿದಿಡುವವನೇ ಶ್ರೇಷ್ಠ ಕವಿ. ಅಂಥವರ ಸಾಲಿನಲ್ಲಿ ನರಸಿಂಗರಾವ ಹೇಮನೂರ ನಿಲ್ಲುತ್ತಾರೆ’ ಎಂದರು.

‘ಕಾಲೇಜು ದಿನಗಳಲ್ಲಿ ನಾನು, ನನ್ನ ಸ್ನೇಹಿತ ಧಾರವಾಡದಲ್ಲಿ ವರಕವಿ ದ.ರಾ.ಬೇಂದ್ರೆ ಅವರನ್ನು ಭೇಟಿಯಾಗಿದ್ದೆವು. ಆಗ ಕವಿಯಾಗಲು ಏನು ಮಾಡಬೇಕು ಎಂದು ಕೇಳಿದ್ದೆವು. ಕವಿ ಆಗಬೇಕು ಎಂದುಕೊಂಡರೆ ಎಂದೂ ಆಗಲ್ಲ. ಕವಿತ್ವ ಎಂಬುದು ಒಳಗಿನಿಂದ ಬರಬೇಕು ಎಂದಿದ್ದರು’ ಎಂದು ಅಜ್ಜೇಂದ್ರ ಸ್ವಾಮೀಜಿ ಸ್ಮರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿಗಳನ್ನಾಡಿದರು. ಸಿದ್ರಾಮಯ್ಯ ಹಿರೇಮಠ ಮಾತನಾಡಿದರು.

ಸಮ್ಮೇಳನದಲ್ಲಿ ಆರು ಕವಿಗಳಿಗೆ ‘ಕಾವ್ಯ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಹಲವು ಸಾಧಕರಿಗೆ ‘ಸೇವಾ ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಸುರೇಶ ಪಾಟೀಲ ಜೋಗೂರ, ಅಧ್ಯಕ್ಷ ಶಿವಾನಂದ ಹೊನಗುಂಟಿ, ಕಾರ್ಯಾಧ್ಯಕ್ಷೆ ರಾಜೇಶ್ವರಿ ಸಾಹು, ಕಸಾಪ ಕಲಬುರಗಿ ತಾಲ್ಲೂಕು ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ ವೇದಿಕೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-34-508383920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.