ಮಡಿಕೇರಿ: ಸುಂಟಿಕೊಪ್ಪದಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಮಕಾಲೀನ ಸಮಸ್ಯೆಗಳು ಪ್ರತಿಬಿಂಬಿತವಾದವು.

ಹಳೆಯ ನೆನಪುಗಳು, ಮಾನವೀಯ ಸಂಬಂಧಗಳು, ಆನೆ– ಮಾನವ ಸಂಘರ್ಷ, ಬದಲಾದ ಕಾಲ, ಕರ್ನಾಟಕ ಕುರಿತು, ಅಸಹಾಯಕತೆ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರದ ಕುರಿತು ಹಲವು ಕವಿಗಳು ತಮ್ಮ ತಮ್ಮ ಕವನಗಳನ್ನು ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೃಪಾದೇವರಾಜ್ ಮಾತನಾಡಿ, ಕವಿತೆಗಳು ನಮ್ಮೊಳಗಿರುವ ಅಮೂರ್ತ ಭಾವ. ಅದು ಅಂತರಂಗದ ಧ್ವನಿ. ಅದನ್ನು ಸಾರ್ವಜನಿಕಗೊಳಿಸುವಾಗ ಎಚ್ಚರ ವಹಿಸಬೇಕು. ಕವಿತೆಗಳು ಸ್ವತಂತ್ರ ಹಕ್ಕಿಗಳಾಗಬೇಕು. ಯಾವುದೂ ಮೇಲು ಅಲ್ಲ, ಕೀಳು ಅಲ್ಲ, ಪ್ರತಿ ಕವನಗಳು ಸಹ ಮುಖ್ಯ. ಯಾವುದೇ ಪ್ರಾಸ, ಉಪಮೆ ರೂಪಕ ಇರಲೇಬೇಕು ಎಂದು ಇಲ್ಲ. ಕವಿತೆ ಎನ್ನುವುದು ನಮ್ಮ ಅಸ್ಮಿತೆ ಎಂದು ಹೇಳಿದರು.

ಕವಿಗಳಿಗೆ ವೇದಿಕೆ ಕೊಡುವುದೇ ಇಂತಹ ವೇದಿಕೆಗಳು. ಒತ್ತಡಗಳಿಂದ ಹೊರಬರುವುದಕ್ಕೆ ಕವನ ರಚನೆ ಸಾಧನ ಎಂದು ತಿಳಿಸಿದರು.

ರಂಜಿತ್ ಕವಲಪಾರ, ಜಯಲಕ್ಷ್ಮಿ, ಇ.ಸುಲೇಮಾನ್, ಹೇಮಂತ್ ಪಾರೇರ, ವಹಿದ್ ಜಾನ್, ಪಿ.ಎಫ್.ಸಬಾಸ್ಟೀನ್, ದಿಲೀಶ್ ನಾಯರ್, ವಿಜಯಲಕ್ಷ್ಮಿ ಮಂಜುನಾಥ್, ರಾಧಿಕಾ ವಿಶ್ವನಾಥ್, ಗೀತಾಂಜಲಿ ಮಹೇಶ್, ಕೆ.ಭಾಗೀರಥಿ, ಸುನಿತಾ ಮಂಜುನಾಥ್ ಹಾಗೂ ಇತರರು ಕವನ ವಾಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-1745609044

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.