ಕೋಲಾರ: ತಾಲ್ಲೂಕಿನ ಮಂಗಸಂದ್ರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುವರ್ಣಗಂಗೆ ಸ್ನಾತಕೋತ್ತರ ಕೇಂದ್ರದಲ್ಲಿ ಬುದ್ಧ ಜಯಂತಿ ಪ್ರಯುಕ್ತ ಕಾವ್ಯ ಬೆಳದಿಂಗಳು ಹಾಗೂ ಕವಿಗೋಷ್ಠಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ‘ಬುದ್ಧ, ಕಾವ್ಯ ಮತ್ತು ಬೆಳದಿಂಗಳ ನಡುವೆ ಅವಿನಾಭಾವ ಸಂಬಂಧವಿದೆ. ಇಂದಿನ ಯುದ್ಧದ ಕಾರ್ಮೋಡಗಳ ನಡುವೆ ಬುದ್ಧ ಹೆಚ್ಚು ಪ್ರಸ್ತುತನಾಗಿದ್ದಾನೆ. ಬುದ್ಧನ ಬದುಕು ಲೌಕಿಕ ಜಗತ್ತಿಗೆ ಅಗತ್ಯವಿರುವ 'ಕಾವ್ಯ ಔಷಧ'ದಂತಿದೆ’ ಎಂದರು.

ಪದ ಪಾಂಡಿತ್ಯಕ್ಕಿಂತ ಸತ್ಯ ಮತ್ತು ಸರಳತೆಯೇ ಬುದ್ಧನ ದೃಷ್ಟಿಯಾಗಿತ್ತು. ಕವಿಗಳ ಲೇಖನಿಯಿಂದ ಬರುವ ಪ್ರತಿ ಸಾಲು ಜಗತ್ತಿಗೆ ಪ್ರೀತಿಯನ್ನು ಹಂಚಲಿ ಎಂದು ಆಶಿಸಿದರು.

ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನೆಲಕುಂಟೆ ವೆಂಕಟೇಶಯ್ಯ ಮಾತನಾಡಿ, ‘ಬುದ್ಧ ಎನ್ನುವ ವ್ಯಕ್ತಿತ್ವ ಮನುಷ್ಯ ಲೋಕವು ಲಕ್ಷಾಂತರ ವರ್ಷಗಳ ನಂತರ ಕಂಡುಕೊಂಡ ಅತ್ಯಂತ ಅದ್ಭುತವಾದ ಶಕ್ತಿ. ಆತ ಕೇವಲ ಏಷ್ಯಾದ ಬೆಳಕಲ್ಲ, ಇಡೀ ಮಾನವ ಕುಲದ ಅರಿವಿನ ಬೆಳಕು’ ಎಂದು ಬಣ್ಣಿಸಿದರು.

ಬೌದ್ಧ ಪರಂಪರೆ ಮತ್ತು ಸಮಕಾಲೀನ ಸಮಾಜದ ಕುರಿತು ಮಾತನಾಡಿದ ಅವರು, ಕೋಲಾರದ ನೆಲಕ್ಕೂ ಬೌದ್ಧ ಧರ್ಮಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.

ಮುಖ್ಯ ಅತಿಥಿಯಾಗಿದ್ದ ಕೆ. ಶರೀಫಾ ಮಾತನಾಡಿ, ‘ಬುದ್ಧನನ್ನು ಅವತಾರಪುರುಷನನ್ನಾಗಿ ಮಾಡುವ ಈ ಕಾಲದಲ್ಲಿ ಆತನ ನೈಜ ತತ್ವಗಳನ್ನು ಉಳಿಸಿಕೊಳ್ಳಬೇಕಿದೆ. ಬೌದ್ಧ ಧರ್ಮ ಮಹಿಳೆಯರಿಗೆ ಲಿಂಗ ಸಮಾನತೆ ಮತ್ತು ಗೌರವ ನೀಡಿದ ಶ್ರೇಷ್ಠ ಧರ್ಮ’ ಎಂದರು.

ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ, ‘ಅಹಿಂಸೆಯ ಹರಿಕಾರರಾದ ಬುದ್ಧ ಮತ್ತು ಮಹಾವೀರ ಭೇಟಿಯಾಗಿದ್ದರೆ ಜಗತ್ತಿಗೆ ಮತ್ತೊಂದು ಮಹಾಕಾವ್ಯ ದೊರೆಯುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಲಕ್ಷ್ಮಿಪತಿ ಕೋಲಾರ ಮಾತನಾಡಿ, ‘ಕಾವ್ಯದ ಬಗ್ಗೆ ಜಗತ್ತಿನಲ್ಲಿ ಈಗಾಗಲೇ ಸಾವಿರಾರು ವ್ಯಾಖ್ಯಾನಗಳಿವೆ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಚೌಕಟ್ಟುಗಳನ್ನು ಮತ್ತು ವ್ಯಾಖ್ಯಾನಗಳನ್ನು ತಿರಸ್ಕರಿಸುವುದೇ ನಿಜವಾದ ಕಾವ್ಯ’ ಎಂದು ಹೇಳಿದರು.

ಬೆಳದಿಂಗಳ ರಾತ್ರಿಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಅವರ ಕಾವ್ಯದ ವಿವಿಧ ಆಯಾಮಗಳ ಕುರಿತು ನಡೆದ ಚರ್ಚೆಯು ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಬಿ.ಕೆ.ರವಿ, ಇಂದಿನ ವಿಷಮ ಪರಿಸ್ಥಿತಿಯಲ್ಲಿ ಅತಿ ಅಗತ್ಯವಿರುವ ಮೂರು ಮಹತ್ವದ ಮಂತ್ರಗಳನ್ನು ಪ್ರತಿಪಾದಿಸಿದರು.

ಬುದ್ಧನ ಶಾಂತಿಯ ಸಂದೇಶ, ಬಸವಣ್ಣನವರ ಕಾಯಕ ಮಂದಿರದ ತತ್ವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನ ಮಂತ್ರ ಬೇಕಿದೆ. ಜಗತ್ತಿನಲ್ಲಿ ಶಾಂತಿ ಕಣ್ಮರೆಯಾಗುತ್ತಿರುವ ಈ ಆತಂಕಕಾರಿ ಸಂದರ್ಭದಲ್ಲಿ ನಾವು ಈ ಮೂರು ಮಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾಗಿದೆ. ಈ ಮೂಲಕ ಸಮಾಜದಲ್ಲಿ ಹೊಸ ಬೆಳಕನ್ನು ಮೂಡಿಸಬೇಕಿದೆ’ ಎಂದರು.

ಕಾವ್ಯದ ಆಶಯ ಕುರಿತು ಅವಧಿ ಪತ್ರಿಕೆಯ ಸಂಪಾದಕ ಜಿ.ಎನ್.ಮೋಹನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಂತಕರು, ಅಧಿಕಾರಿಗಳು ಹಾಗೂ ಕವಿಗಳಿಗೆ ಕುಲಪತಿ ಅಭಿನಂದನೆ ಸಲ್ಲಿಸಿದರು. 50ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಗಾಯತ್ರಿ ದೇವಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.

ಪ್ರೊ.ಎನ್.ಲೋಕನಾಥ್, ಹಣಕಾಸು ಅಧಿಕಾರಿ ವಸಂತಕುಮಾರ್ ಬಿ. ವಿ., ಕ್ಯಾಂಪಸ್ ನಿರ್ದೇಶಕಿ ಪ್ರೊ.ಡಿ.ಕುಮುದಾ, ರಮೇಶ್ ಎಂ.ಎನ್. ಸೇರಿದಂತೆ ಹಲವು ಗಣ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-18-140988973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.