ನಾಡು ಪಣಕ್ಕಿಟ್ಟು ದಾಳ ಎಸೆದಿರಿ

ನಾಡಬಾಂಬುಗಳ ಹೊಸ ಫ್ಯಾಕ್ಟರಿ ತೆರೆದಿರಿ

ಅಯಕಟ್ಟಿಗೆ ಸಿಡಿಮದ್ದು ಇಟ್ಟಿರಿ

ಪೆನ್ಸಿಲ್ಲಿಗೆ ಗಾಂಜಾ ತುಂಬಿಸಿ

ರಬ್ಬರಿನಲ್ಲಿ ಚರಸ್ಸು ಅಂಟಿಸಿ…

ನೂರು ಕೋಟಿ ಆದಾಯದ

ವಹಿವಾಟು ತೋರಲು

ಸರ್ಕಲ್ಲಿನಲ್ಲಿ ರಿಪೇರಿ

ಅಂಗಡಿ ತೆರೆದಿರಿ

ಕೋಟಿ ಹೊಡೆದು

ತೋಟದಿಂದ ಮಾಡಿದ್ದು ಎಂದಿರಿ

ಚೌರದ ಅಂಗಡಿಯೋ ಮೀನು ಮಂಡಿಯೋ

ಬದಲಿ ಲೆಕ್ಕಕ್ಕೆ ಮಜಬೂತು

ಮುಖಾಬಿಲೆ ಮಾಡಿದಿರಿ

ಸಮಸಮಾಜ ಎನ್ನುತ್ತಾ ಜಾತಿ ಓಲೈಸಿ

ಸಮಾಜವಾದದ ನೆರಳಲ್ಲಿ ನರನರರ ನಡುವೆ

ವಿಷದ ಸೂಜಿ ಚುಚ್ಚಿ

ಮಾತುಮಾತಿಗೂ ಮಾತೃಭೂಮಿಯ

ಸೆರಗು ಎಳೆದು

ಗೋಡೆ ಬೆಳೆಸಿದಿರಿ ಕಾಡು ಸವರಿದಿರಿ

ದೂರದ ದೇಶ ಹೊಗಳಿ

ಮೂರು ಹೊತ್ತಿಗೆ ಮುವತ್ತು ಬಾರಿ

ಮರೆಯದಂತೆ ಸಂಖ್ಯೆ

ವ್ರತವೂ ತಪ್ಪದಂತೆ

ಗಾಂಧಿ ಬಾಬಾ ಬಸವ ಗಳ ಎದೆ ತಡವಿದಿರಿ

ಆಗಲೇ ಆಗಿದ್ದು ನೀವು ಜನನಾಯಕ

ಬಂದಿದ್ದು ದಿನದಿನವೂ ಭಾಷಣಕ್ಕೆ ಕರೆ

ಉದ್ಘಾಟನೆಗೂ ನೀವೆ ಸೂಕ್ತ

ಮುಖ್ಯ ಅತಿಥಿಯೂ ನೀವೇ

ನೀವೇ ಸಂಪನ್ಮೂಲ ವ್ಯಕ್ತಿ

ಹಕ್ಕಿಗೆ ಮಾತು ಕಲಿಸುತ್ತಾ

ಹಸಿದ ಚಿಟ್ಟೆಗೆ ಹೂವಿನ ಹಾದಿ ತೋರುತ್ತ

ಮುರಿದ ಹರೆಯ ಗಿಡಕ್ಕೆ ಮರಳಿ ಕಟ್ಟುತ್ತಾ

ಬದುಕುವವಳ ಮಾತು ನನ್ನವು

ಸರಿಯೇ

ನಿಮಗವು ಪ್ರಲಾಪವೇ ಹೌದು

ನೀವಿನ್ನೂ ಚಾಲ್ತಿಯಲ್ಲಿದ್ದೇನೆಂದು

ಹೇಳಿಕೊಳ್ಳುವ ನಿಮ್ಮಿರಾದೆ ನೆರವೇರಿದೆ

ಆತಂಕ ಬೇಡ

ಸಂಜೆಗೆ ಬರಲಾಗದು ನಿಮ್ಮ

ಸುಡು ಭಾಷಣಕ್ಕೆ

ನನ್ನ ಮುದಿಹಸುವಿನ ಕೆಚ್ಚಲಿಗೆ

ವೃಣವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನಾಡು ಪಣಕ್ಕಿಟ್ಟು ದಾಳ ಎಸೆದಿರಿ

ನಾಡಬಾಂಬುಗಳ ಹೊಸ ಫ್ಯಾಕ್ಟರಿ ತೆರೆದಿರಿ

ಅಯಕಟ್ಟಿಗೆ ಸಿಡಿಮದ್ದು ಇಟ್ಟಿರಿ

ಪೆನ್ಸಿಲ್ಲಿಗೆ ಗಾಂಜಾ ತುಂಬಿಸಿ

ರಬ್ಬರಿನಲ್ಲಿ ಚರಸ್ಸು ಅಂಟಿಸಿ…

ನೂರು ಕೋಟಿ ಆದಾಯದ

ವಹಿವಾಟು ತೋರಲು

ಸರ್ಕಲ್ಲಿನಲ್ಲಿ ರಿಪೇರಿ

ಅಂಗಡಿ ತೆರೆದಿರಿ

ಕೋಟಿ ಹೊಡೆದು

ತೋಟದಿಂದ ಮಾಡಿದ್ದು ಎಂದಿರಿ

ಚೌರದ ಅಂಗಡಿಯೋ ಮೀನು ಮಂಡಿಯೋ

ಬದಲಿ ಲೆಕ್ಕಕ್ಕೆ ಮಜಬೂತು

ಮುಖಾಬಿಲೆ ಮಾಡಿದಿರಿ

ಸಮಸಮಾಜ ಎನ್ನುತ್ತಾ ಜಾತಿ ಓಲೈಸಿ

ಸಮಾಜವಾದದ ನೆರಳಲ್ಲಿ ನರನರರ ನಡುವೆ

ವಿಷದ ಸೂಜಿ ಚುಚ್ಚಿ

ಮಾತುಮಾತಿಗೂ ಮಾತೃಭೂಮಿಯ

ಸೆರಗು ಎಳೆದು

ಗೋಡೆ ಬೆಳೆಸಿದಿರಿ ಕಾಡು ಸವರಿದಿರಿ

ದೂರದ ದೇಶ ಹೊಗಳಿ

ಮೂರು ಹೊತ್ತಿಗೆ ಮುವತ್ತು ಬಾರಿ

ಮರೆಯದಂತೆ ಸಂಖ್ಯೆ

ವ್ರತವೂ ತಪ್ಪದಂತೆ

ಗಾಂಧಿ ಬಾಬಾ ಬಸವ ಗಳ ಎದೆ ತಡವಿದಿರಿ

ಆಗಲೇ ಆಗಿದ್ದು ನೀವು ಜನನಾಯಕ

ಬಂದಿದ್ದು ದಿನದಿನವೂ ಭಾಷಣಕ್ಕೆ ಕರೆ

ಉದ್ಘಾಟನೆಗೂ ನೀವೆ ಸೂಕ್ತ

ಮುಖ್ಯ ಅತಿಥಿಯೂ ನೀವೇ

ನೀವೇ ಸಂಪನ್ಮೂಲ ವ್ಯಕ್ತಿ

ಹಕ್ಕಿಗೆ ಮಾತು ಕಲಿಸುತ್ತಾ

ಹಸಿದ ಚಿಟ್ಟೆಗೆ ಹೂವಿನ ಹಾದಿ ತೋರುತ್ತ

ಮುರಿದ ಹರೆಯ ಗಿಡಕ್ಕೆ ಮರಳಿ ಕಟ್ಟುತ್ತಾ

ಬದುಕುವವಳ ಮಾತು ನನ್ನವು

ಸರಿಯೇ

ನಿಮಗವು ಪ್ರಲಾಪವೇ ಹೌದು

ನೀವಿನ್ನೂ ಚಾಲ್ತಿಯಲ್ಲಿದ್ದೇನೆಂದು

ಹೇಳಿಕೊಳ್ಳುವ ನಿಮ್ಮಿರಾದೆ ನೆರವೇರಿದೆ

ಆತಂಕ ಬೇಡ

ಸಂಜೆಗೆ ಬರಲಾಗದು ನಿಮ್ಮ

ಸುಡು ಭಾಷಣಕ್ಕೆ

ನನ್ನ ಮುದಿಹಸುವಿನ ಕೆಚ್ಚಲಿಗೆ

ವೃಣವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.