ಸಾಗರ: ‘ನಿವೃತ್ತ ಯೋಧ ಜಿ.ಎಸ್. ವೆಂಕಟೇಶ್ ರಚಿಸಿರುವ ‘ಪಾಂಚಜನ್ಯ’ ಕವನ ಸಂಕಲನದಲ್ಲಿನ ಕವಿತೆಗಳು ವಾಸ್ತವಿಕ ನೆಲೆಗಟ್ಟಿನಿಂದ ಕಸುವು ಹೆಚ್ಚಿಸಿಕೊಂಡಿವೆ’ ಎಂದು ಶಿಕ್ಷಣ ಸಂಯೋಜಕ ಶಂಕರ ಶಾಸ್ತ್ರಿ ಹೇಳಿದರು.

ಇಲ್ಲಿನ ಪ್ರಗತಿ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಪಾಂಚಜನ್ಯ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

‘ವೆಂಕಟೇಶ್ ಅವರ ಜೀವನಾನುಭವದ ಪ್ರತಿಬಿಂಬಗಳು ಕವಿತೆಗಳಲ್ಲಿ ದಟ್ಟವಾಗಿ ಅಭಿವ್ಯಕ್ತಗೊಂಡಿವೆ. ವಿವಿಧ ಬಗೆಯ ತಾತ್ವಿಕ ನೆಲೆಗಟ್ಟುಗಳಿಗೆ ಕವಿತೆಗಳು ಮುಖಾಮುಖಿಯಾಗಿವೆ’ ಎಂದು ವಿಶ್ಲೇಷಿಸಿದರು.

ಲೇಖಕ ತಿರುಮಲ ಮಾವಿನಕುಳಿ ಮಾತನಾಡಿದರು. ಸುಶೀಲ ವೆಂಕಟೇಶ್, ಜಿ.ಎಸ್. ವೆಂಕಟೇಶ್ ಹಾಜರಿದ್ದರು. ರಾಜೇಂದ್ರ ಪ್ರಸಾದ್ ಕವಿತೆಗಳನ್ನು ವಾಚಿಸಿದರು.

ವಿದುಷಿ ವಸುಧಾ ಶರ್ಮ, ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ವಿದ್ವಾನ್ ನರಸಿಂಹಮೂರ್ತಿ ತಬಲಾ ಸಾಥ್ ನೀಡಿದರು. ರಕ್ಷಾ, ಸುಪ್ರಿತಾ, ಅಂಶುಮತಿ ನೃತ್ಯ ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-42-293991593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.