ಶಹಾಪುರ: ‘ಕವಿ ಕೇವಲ ಪ್ರೀತಿ, ಪ್ರಣಯ ಎಂದು ಕನವರಿಸದೆ ಮನುಕಲಕ್ಕೆ ಆತಂಕ ಹಾಗೂ ಸಂಕಷ್ಟವನ್ನು ತಂದು ಒಡ್ಡುವ ವಾಸ್ತವ ಸಮಸ್ಯೆಗಳಿಗೆ ಜವಾಬ್ ನೀಡಲಿ. ಜನ ಸಾಮಾನ್ಯರ ನೋವಿನ ಬವಣೆಯನ್ನು ಅನಾವರಣಗೊಳಿಸಿ. ಸಾಮಾನ್ಯ ವ್ಯಕ್ತಿಯು ನನ್ನ ಪರಿ ಪಾಟೀಲು ಅನುಭವಿಸುತ್ತಿರುವ ಕುರಿತು ಬರೆದ ಸಾಲುಗಳು ನನ್ನ ನೋವಿನ ಮಾತುಗಳು ಆಗಿವೆ ಎನ್ನುವಂತೆ ಭಾಸವಾಗಬೇಕು’ ಎಂದು ಸಾಹಿತಿ ಅಬ್ದುಲ ಕರೀಂ ಕನ್ಯಾಕೊಳ್ಳೂರ ಯುವ ಕವಿಗಳಿಗೆ ಸಲಹೆ ನೀಡಿದರು.

ಇಲ್ಲಿನ ಮಾತೋಶ್ರೀ ಸಭಾಂಗಣದಲ್ಲಿ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಹಾಪುರ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಸಂಶೋಧಕ ಎಂ.ಎಸ್ ಶಿರವಾಳ ಮಾತನಾಡಿ, ‘ಸಾಹಿತಿಗಳು ಬರವಣಿಗೆಯ ಮೂಲಕ ಸೃಜನಶೀಲತೆ ಮತ್ತು ಪರಿಕಲ್ಪನೆ ಸ್ಪರ್ಶವನ್ನು ಟಚ್ ಮಾಡಿದಾಗ ಸಾಹಿತ್ಯ ಮತ್ತಷ್ಟು ರಸದೌತಣ ನೀಡಬಲ್ಲದು’ ಎಂದರು.

ಸಾಹಿತಿ ಶಿವಣ್ಣ ಇಜೇರಿ, ಶ್ರೀಶೈಲ್ ಬಿರಾದಾರ, ಬಸವರಾಜ ವನದುರ್ಗ, ಭೀಮರಾಯ ಭಂಡಾರಿ, ಶರಣಗೌಡ ಜೈನಾಪುರ, ಪಾರ್ವತಿ ಬೂದೂರ, ಮಾಳಿಂಗ ಗಂಗನಾಳ, ದುರ್ಗಪ್ಪ ಪೂಜಾರ, ಬಸವರಾಜ ಮಾನೆಗಾರ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನ ವಾಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-971922051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.