ಅಪ್ಪನ ಹೆಗಲ ಮೇಲೆ
ಅದೇಷ್ಟೋ ಸಲ ಕುರಿಮರಿಯಂತೆ
ಕುಳಿತು ಜಾತ್ರೆಯಲ್ಲಿ ಎಳೆಯುವ
ತೇರನ್ನು ನೋಡಿದ್ದೇನೆ.
ಆಗಲೂ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ದುಡಿದು ಸಣ್ಣಾಗಿ
ಬಾಳ ಚಕ್ರಕ್ಕೆ ನೊಗ ಹೊತ್ತ ಎತ್ತಿನಂತೆ,
ಬೆನ್ನಿಗೆ ಸಂಸಾರ ಕಟ್ಟಿಕೊಂಡು
ಒಳಗೊಳಗೆ ಕೊರಗುತ್ತಿದ್ದ
ಅಪ್ಪನ ಹರಿದ ಬನಿಯನ್
ಕಾಣಿಸಲೇ ಇಲ್ಲ…

ಹಬ್ಬ–ಹರಿದಿನ, ಜಾತ್ರೆ, ಪಲ್ಲಕ್ಕಿಗೆ
ಕೂಡಿಟ್ಟ ಪುಡಿಗಾಸಿನಲ್ಲಿ
ಮಕ್ಕಳಿಗೆ ಹೊಸಬಟ್ಟೆ ಕೊಡಿಸಿ,
ತನಗಾಗಿ ಏನನ್ನೂ ಕೊಳ್ಳದ
ಆ ತ್ಯಾಗಜೀವಿ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ಸತಿಸುತರ ಸಂತಸದಲ್ಲಿ
ತನ್ನ ಸಂಭ್ರಮ ಕಂಡುಕೊಳ್ಳುತ್ತ,
ಸಿಕ್ಕ ಕ್ಷಣಗಳಲ್ಲಿ ಒಳಗೊಳಗೆ
ನೋವನ್ನು ನುಂಗಿ
ಶಿವನಂತೆ ಮೌನವಾಗಿದ್ದ
ಅಪ್ಪನ ಹರಿದ ಬನಿಯನ್
ಕಾಣಿಸಲೇ ಇಲ್ಲ…

ವೀರ ವಿರಾಗಿ, ಭಾವನಾಜೀವಿ,
ಎದುರಿಗಿರುವ ಮೌನಮೂರ್ತಿ;
ಒಡಲಲ್ಲಿ ದಳ್ಳುರಿಯಿದ್ದರೂ
ಸಹನೆಯಲಿ ನಗುವ ಶಾಂತಿದೂತ—
ಆ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ಇಂದು ನೆನಪುಗಳ ಬೀದಿಯಲ್ಲಿ
ಹಿಂದಿರುಗಿ ನೋಡಿದಾಗ ಮಾತ್ರ
ಅರ್ಥವಾಗುತ್ತಿದೆ—
ನಮ್ಮ ಬಾಲ್ಯದ ಹಬ್ಬಗಳ ಹಿಂದೆ
ನಿಂತಿದ್ದದು
ಅಪ್ಪನ ಅದೇ
ಹರಿದ ಬನಿಯನ್…!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಅಪ್ಪನ ಹೆಗಲ ಮೇಲೆ
ಅದೇಷ್ಟೋ ಸಲ ಕುರಿಮರಿಯಂತೆ
ಕುಳಿತು ಜಾತ್ರೆಯಲ್ಲಿ ಎಳೆಯುವ
ತೇರನ್ನು ನೋಡಿದ್ದೇನೆ.
ಆಗಲೂ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ದುಡಿದು ಸಣ್ಣಾಗಿ
ಬಾಳ ಚಕ್ರಕ್ಕೆ ನೊಗ ಹೊತ್ತ ಎತ್ತಿನಂತೆ,
ಬೆನ್ನಿಗೆ ಸಂಸಾರ ಕಟ್ಟಿಕೊಂಡು
ಒಳಗೊಳಗೆ ಕೊರಗುತ್ತಿದ್ದ
ಅಪ್ಪನ ಹರಿದ ಬನಿಯನ್
ಕಾಣಿಸಲೇ ಇಲ್ಲ…

ಹಬ್ಬ–ಹರಿದಿನ, ಜಾತ್ರೆ, ಪಲ್ಲಕ್ಕಿಗೆ
ಕೂಡಿಟ್ಟ ಪುಡಿಗಾಸಿನಲ್ಲಿ
ಮಕ್ಕಳಿಗೆ ಹೊಸಬಟ್ಟೆ ಕೊಡಿಸಿ,
ತನಗಾಗಿ ಏನನ್ನೂ ಕೊಳ್ಳದ
ಆ ತ್ಯಾಗಜೀವಿ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ಸತಿಸುತರ ಸಂತಸದಲ್ಲಿ
ತನ್ನ ಸಂಭ್ರಮ ಕಂಡುಕೊಳ್ಳುತ್ತ,
ಸಿಕ್ಕ ಕ್ಷಣಗಳಲ್ಲಿ ಒಳಗೊಳಗೆ
ನೋವನ್ನು ನುಂಗಿ
ಶಿವನಂತೆ ಮೌನವಾಗಿದ್ದ
ಅಪ್ಪನ ಹರಿದ ಬನಿಯನ್
ಕಾಣಿಸಲೇ ಇಲ್ಲ…

ವೀರ ವಿರಾಗಿ, ಭಾವನಾಜೀವಿ,
ಎದುರಿಗಿರುವ ಮೌನಮೂರ್ತಿ;
ಒಡಲಲ್ಲಿ ದಳ್ಳುರಿಯಿದ್ದರೂ
ಸಹನೆಯಲಿ ನಗುವ ಶಾಂತಿದೂತ—
ಆ ಅಪ್ಪನ
ಹರಿದ ಬನಿಯನ್
ಕಾಣಿಸಲೇ ಇಲ್ಲ…

ಇಂದು ನೆನಪುಗಳ ಬೀದಿಯಲ್ಲಿ
ಹಿಂದಿರುಗಿ ನೋಡಿದಾಗ ಮಾತ್ರ
ಅರ್ಥವಾಗುತ್ತಿದೆ—
ನಮ್ಮ ಬಾಲ್ಯದ ಹಬ್ಬಗಳ ಹಿಂದೆ
ನಿಂತಿದ್ದದು
ಅಪ್ಪನ ಅದೇ
ಹರಿದ ಬನಿಯನ್…!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.