ಅಪರೂಪಕ್ಕೊಮ್ಮೆ ಹಣಕಿ ಹಾಕುವ

ಹಳದಿ ಬಿಸಿಲ ನಡುವೆ ಅರಳಿ ನಿಂತ

ಹಳದಿ ಬುಗುಡಿ ಹೂವು

ಅದರ ಸಲಾಕೆ ತುದಿಯ ಕೇಸರದ ಮೇಲೆ

ಧೇನಿಸುವ ಹಳದಿ ಚಿಟ್ಟೆ.

ಬೇಸಿಗೆಯ ಕೊನೆಯಲ್ಲಿ ಬಿತ್ತಿದ್ದು

ಮಳೆಗಾಲದ ನಡುವಲ್ಲಿ ಚಿಗುರಿ

ಬರುವ ಸಾಲು ಹಬ್ಬಗಳ ಮೆರವಣಿಗೆಗೆ

ಹೂ ತೇರು ಹೊತ್ತು ಕಾದಿದೆ.

ಯಾವ ಊರಿನ ಯಾವ ದೇಶದ

ಯಾವ ಮಾಯಕದ ಅಮೂರ್ತ

ನಂಟು

ಅಕೋ…ಕೂತಿದೆ

ಹಳದಿ ಚಿಟ್ಟೆ; ಮುಟ್ಟಿದರೆ ಮುರಿಯುವ

ರೆಕ್ಕೆ

ಹೂದಳಗಳ ಮೇಲೆ ದಳವೇ ಆದ

ಬೆಡಗಿನಂತೆ.

ಹೂ ಬಿಸಿಲಲ್ಲಿ ತೊನೆದಾಡುತ್ತಾ

ನಿಂತ ಹೂವೆದೆಯ ಬದುವಿನಲಿ

ರೆಕ್ಕೆ ಕುಣಿಸುತ್ತಾ ತೆಕ್ಕೆಗೆ ಬೀಳುತ್ತದೆ

ಚಿಟ್ಟೆ ಹೂವಿಗೆ ಬಣ್ಣ ತುಂಬುವುದಾ?

ಬಣ್ಣ ತುಂಬಿದ ದಳಗಳನ್ನು ಹೂ ಚಿಟ್ಟೆಗೆ

ಕಟ್ಟುವುದಾ?

ಕರುಬುವ ನೂರು ನೋಟಗಳು ಹಾದು

ಹೋಗುತ್ತಿವೆ ಮೃದು ಹೂವಿನ ಮೇಲೆ

ಮರುಳು ಮಾಯಗಾರ!

ಸುಖಾ ಸುಮ್ಮನೆ ಹೊರಿಸಲಾಗಿದೆ

ಆರೋಪ ಚಿಟ್ಟೆಗೆ!

ಜಗದ ಗೊಡವೆಯ ಬದಿಗಿಟ್ಟು

ಅದರ ದಳಗಳನ್ನು ಇದಕೆ ಜೋಡಿಸುತ್ತಾ

ಇದರ ಬಣ್ಣವನ್ನು ಅದಕೆ ಬಳಿಯುತ್ತಾ

ಚಿಟ್ಟೆ ಹೂ, ಹೂ ಚಿಟ್ಟೆ

ಒಂದರ ಕನಸಿನೊಳಗೊಂದು

ಬೆರೆತು ಬೆಳೆಯುವ ಸುಖಕ್ಕೆ ಬಿದ್ದಿವೆ

ಮಬ್ಬು ಕವಿಯುವ ಹೊತ್ತಲ್ಲಿ

ಗಿಡದ ಬುಡದಲ್ಲಿ ರಾಶಿ ಪಕಳೆಗಳು

ಏನವು?

ಹಳದಿ ದಳ, ಹಳದಿ ರೆಕ್ಕೆ?

ಮರು ಬೆಳಗಿನಲಿ

ಗಿಡದ ಮೇಲೆ ಮತ್ತೆ ಹೂವ ಜಾತ್ರೆ

ಚಿಟ್ಟೆ ಸಂತೆ.

ಒಲವು ಹೂ ಹಗುರ; ಹೊಸಕಿ ಹಾಕಿದಷ್ಟೂ

ರೆಕ್ಕೆ ಬಿಡಿಸುತ್ತವೆ

ಹೂಪ್ರೀತಿ ಹುಡಿಯ ಬೆರಳ ತುದಿಗೆ

ಅಂಟಿಸುತ್ತಾ ಜಗದಗಲ ಹಾರುತ್ತವೆ

ಹೂ ಚಿಟ್ಟೆ

ರೆಕ್ಕೆ ಬಿಚ್ಚಿ

ಪ್ರೀತಿ ನೆಚ್ಚಿ

ಜತೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಅಪರೂಪಕ್ಕೊಮ್ಮೆ ಹಣಕಿ ಹಾಕುವ

ಹಳದಿ ಬಿಸಿಲ ನಡುವೆ ಅರಳಿ ನಿಂತ

ಹಳದಿ ಬುಗುಡಿ ಹೂವು

ಅದರ ಸಲಾಕೆ ತುದಿಯ ಕೇಸರದ ಮೇಲೆ

ಧೇನಿಸುವ ಹಳದಿ ಚಿಟ್ಟೆ.

ಬೇಸಿಗೆಯ ಕೊನೆಯಲ್ಲಿ ಬಿತ್ತಿದ್ದು

ಮಳೆಗಾಲದ ನಡುವಲ್ಲಿ ಚಿಗುರಿ

ಬರುವ ಸಾಲು ಹಬ್ಬಗಳ ಮೆರವಣಿಗೆಗೆ

ಹೂ ತೇರು ಹೊತ್ತು ಕಾದಿದೆ.

ಯಾವ ಊರಿನ ಯಾವ ದೇಶದ

ಯಾವ ಮಾಯಕದ ಅಮೂರ್ತ

ನಂಟು

ಅಕೋ…ಕೂತಿದೆ

ಹಳದಿ ಚಿಟ್ಟೆ; ಮುಟ್ಟಿದರೆ ಮುರಿಯುವ

ರೆಕ್ಕೆ

ಹೂದಳಗಳ ಮೇಲೆ ದಳವೇ ಆದ

ಬೆಡಗಿನಂತೆ.

ಹೂ ಬಿಸಿಲಲ್ಲಿ ತೊನೆದಾಡುತ್ತಾ

ನಿಂತ ಹೂವೆದೆಯ ಬದುವಿನಲಿ

ರೆಕ್ಕೆ ಕುಣಿಸುತ್ತಾ ತೆಕ್ಕೆಗೆ ಬೀಳುತ್ತದೆ

ಚಿಟ್ಟೆ ಹೂವಿಗೆ ಬಣ್ಣ ತುಂಬುವುದಾ?

ಬಣ್ಣ ತುಂಬಿದ ದಳಗಳನ್ನು ಹೂ ಚಿಟ್ಟೆಗೆ

ಕಟ್ಟುವುದಾ?

ಕರುಬುವ ನೂರು ನೋಟಗಳು ಹಾದು

ಹೋಗುತ್ತಿವೆ ಮೃದು ಹೂವಿನ ಮೇಲೆ

ಮರುಳು ಮಾಯಗಾರ!

ಸುಖಾ ಸುಮ್ಮನೆ ಹೊರಿಸಲಾಗಿದೆ

ಆರೋಪ ಚಿಟ್ಟೆಗೆ!

ಜಗದ ಗೊಡವೆಯ ಬದಿಗಿಟ್ಟು

ಅದರ ದಳಗಳನ್ನು ಇದಕೆ ಜೋಡಿಸುತ್ತಾ

ಇದರ ಬಣ್ಣವನ್ನು ಅದಕೆ ಬಳಿಯುತ್ತಾ

ಚಿಟ್ಟೆ ಹೂ, ಹೂ ಚಿಟ್ಟೆ

ಒಂದರ ಕನಸಿನೊಳಗೊಂದು

ಬೆರೆತು ಬೆಳೆಯುವ ಸುಖಕ್ಕೆ ಬಿದ್ದಿವೆ

ಮಬ್ಬು ಕವಿಯುವ ಹೊತ್ತಲ್ಲಿ

ಗಿಡದ ಬುಡದಲ್ಲಿ ರಾಶಿ ಪಕಳೆಗಳು

ಏನವು?

ಹಳದಿ ದಳ, ಹಳದಿ ರೆಕ್ಕೆ?

ಮರು ಬೆಳಗಿನಲಿ

ಗಿಡದ ಮೇಲೆ ಮತ್ತೆ ಹೂವ ಜಾತ್ರೆ

ಚಿಟ್ಟೆ ಸಂತೆ.

ಒಲವು ಹೂ ಹಗುರ; ಹೊಸಕಿ ಹಾಕಿದಷ್ಟೂ

ರೆಕ್ಕೆ ಬಿಡಿಸುತ್ತವೆ

ಹೂಪ್ರೀತಿ ಹುಡಿಯ ಬೆರಳ ತುದಿಗೆ

ಅಂಟಿಸುತ್ತಾ ಜಗದಗಲ ಹಾರುತ್ತವೆ

ಹೂ ಚಿಟ್ಟೆ

ರೆಕ್ಕೆ ಬಿಚ್ಚಿ

ಪ್ರೀತಿ ನೆಚ್ಚಿ

ಜತೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.