ನನ್ನವರು ಬರೀ

ಮೈಯ್ಯವರು
ಮಾನವಷ್ಟೇ ಮುಚ್ಚಿ

ಉಳಿದೆಲ್ಲ ತೆರೆದಿಟ್ಟು

ಮಣ್ಣ ಭಾಷೆಯಲ್ಲಿ

ಕರುಳು ಬಳ್ಳಿಯ ಬೆಸೆದವರು

ಹದ ಮಳೆಗೆ ಕಾದು

ಒಂದೊಂದೆ ಪದ ಬಿತ್ತಿ

ಬುಡಕೆ ನೀರೆರೆದು

ಹಂದರ ಕಟ್ಟಿದವರು

ಬೀಸಿ ಕುಟ್ಟಿ

ಅರೆದು ಮುರಿದು

ನುರಿದು ಪದಗಳ

ಹದಗೊಳಿಸಿದವರು

ಇರಲಿಲ್ಲ ಎಂದಲ್ಲ

ಅಲ್ಲೊಂದು ಇಲ್ಲೊಂದು

ಅಪಸ್ವರ

ಗತಿ

ಬದಲಾಯಿಸುವ ವಿಷಮ ಲಯ

ಅಲ್ಲಲ್ಲೇ

ಗದ್ಯಗಂಧದಲ್ಲೇ

ಅವುಗಳ ಹಾಡಾಗಿಸಿದವರು

ಮಾತು ಕತೆ ಎಲ್ಲವೂ ಹುಟ್ಟಿದ್ದು

ಬೆವರಿನೊಂದಿಗೆ

ಕೊನೆಗೊಂಡದ್ದು ಬಿಸಿಯುಸಿರಿನೊಂದಿಗೆ

ಅವರು

ನಿಮ್ಮಂತೆ ಪಂಚ ಭಕ್ಷ್ಯ

ಪರಮಾನ್ನ ಉಂಡು

ತೇಗುತ್ತ

ಕಗ್ಗ ಹೊಸೆದವರಲ್ಲ

ಟೀಕೆ ಬರೆದವರಲ್ಲ

ನನ್ನವರ ಸ್ವರ್ಗ ನಿಮಗೆ

ಕಾಣಲಿಲ್ಲ

ನಿಮ್ಮ ಸ್ವರ್ಗದಲಿ

ನನ್ನವರು ಸಿಗುವುದಿಲ್ಲ

ಹಾಗಾಗಿ

ನನಗೆ ನಿಮ್ಮ ಸ್ವರ್ಗ ಬೇಕಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನನ್ನವರು ಬರೀ

ಮೈಯ್ಯವರು
ಮಾನವಷ್ಟೇ ಮುಚ್ಚಿ

ಉಳಿದೆಲ್ಲ ತೆರೆದಿಟ್ಟು

ಮಣ್ಣ ಭಾಷೆಯಲ್ಲಿ

ಕರುಳು ಬಳ್ಳಿಯ ಬೆಸೆದವರು

ಹದ ಮಳೆಗೆ ಕಾದು

ಒಂದೊಂದೆ ಪದ ಬಿತ್ತಿ

ಬುಡಕೆ ನೀರೆರೆದು

ಹಂದರ ಕಟ್ಟಿದವರು

ಬೀಸಿ ಕುಟ್ಟಿ

ಅರೆದು ಮುರಿದು

ನುರಿದು ಪದಗಳ

ಹದಗೊಳಿಸಿದವರು

ಇರಲಿಲ್ಲ ಎಂದಲ್ಲ

ಅಲ್ಲೊಂದು ಇಲ್ಲೊಂದು

ಅಪಸ್ವರ

ಗತಿ

ಬದಲಾಯಿಸುವ ವಿಷಮ ಲಯ

ಅಲ್ಲಲ್ಲೇ

ಗದ್ಯಗಂಧದಲ್ಲೇ

ಅವುಗಳ ಹಾಡಾಗಿಸಿದವರು

ಮಾತು ಕತೆ ಎಲ್ಲವೂ ಹುಟ್ಟಿದ್ದು

ಬೆವರಿನೊಂದಿಗೆ

ಕೊನೆಗೊಂಡದ್ದು ಬಿಸಿಯುಸಿರಿನೊಂದಿಗೆ

ಅವರು

ನಿಮ್ಮಂತೆ ಪಂಚ ಭಕ್ಷ್ಯ

ಪರಮಾನ್ನ ಉಂಡು

ತೇಗುತ್ತ

ಕಗ್ಗ ಹೊಸೆದವರಲ್ಲ

ಟೀಕೆ ಬರೆದವರಲ್ಲ

ನನ್ನವರ ಸ್ವರ್ಗ ನಿಮಗೆ

ಕಾಣಲಿಲ್ಲ

ನಿಮ್ಮ ಸ್ವರ್ಗದಲಿ

ನನ್ನವರು ಸಿಗುವುದಿಲ್ಲ

ಹಾಗಾಗಿ

ನನಗೆ ನಿಮ್ಮ ಸ್ವರ್ಗ ಬೇಕಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.