ಕನಸುಗಳ ಹಬ್ಬ ಮುಗಿದಂತೆ
ನಿನ್ನ ಬಣ್ಣದ ಕೊಡೆ
ಇನ್ನೂ ಎಲ್ಲೋ ಮರೆತುಹೋದಂತೆ–
ಮತ್ತೆ ತರಬಹುದೇ ನೀನು?

ಆ ಕೊಡೆಯ ಅಡಿಯಲ್ಲಿ
ಆ ಅನಾಥ ಬೆಂಚಿನ ಮೇಲೆ
ಅತಿಥಿಗಳಂತೆ ಕುಳಿತು
ನಾವಿಬ್ಬರೂ ಮತ್ತೆ ನಗಬೇಕಿದೆ;
ಮಳೆಯಿಗೂ ಮತ್ತೆ
ಜೀವ ತುಂಬಬೇಕಿದೆ...

ನಗುವಿನಿಂದಲೇ
ನಗುವಿನ ಹುಟ್ಟು–
ಎತ್ತಲೋ ಏನನ್ನೋ ತೋರುವ
ನನ್ನ ಬೆರಳುಗಳಿಗೆ
ನಿನ್ನ ಮುಂಗುರುಳ ಸರಿಸುವ
ಕೆಲಸ ಇನ್ನೂ ಬಾಕಿಯಿದೆ.

ತಂಪು ಗಾಳಿಗೂ
ನಮ್ಮ ಮೈಬಿಸಿಯ ರುಚಿ ಬೇಕಿದೆ;
ಒಂದಿಷ್ಟು ಸುಳ್ಳುಗಳನ್ನು ಖರೀದಿಸಿ
ಅಪ್ಪುಗೆಯ ನಡುವೆ
ಒಂದು ಪುಟ್ಟ ಜಗತ್ತನ್ನು
ಮತ್ತೆ ಅರಳಿಸಬೇಕಿದೆ...

ತುಂತುರು ಮಳೆಯ ನಾದಕ್ಕೆ
ಬೆಟ್ಟಗಳೂ ಮೈಮರೆತು,
ಹಸಿರು ಹೊದಿಕೆ ತೊಟ್ಟು
ಮನವನ್ನೇ ಕದಡುತ್ತಿವೆ.

ಬಯಲಿನ ಮೇಲೆ
ಮಳೆಹನಿಗಳ ಕವಿತೆ ಬರೆದು
ನಿನಗಾಗಿ ಮತ್ತೆ
ಓದಬೇಕಿದೆ ನಾನು...

ಬಾನಿಂದ ಇಳಿಯುವ ಮಿಂಚು
ಭೂಮಿಯ ಒಡಲ ಸೇರುವ ಸೊಗಸು–
ನಿಸರ್ಗದ ಸವಿಗೆ
ನಾವೇ ಸಾಕ್ಷಿಗಳು.

ಎಲ್ಲವೂ ಮಳೆಯಾಟ,
ಬದುಕೂ ಅದೇ ಆಟ–
ನಾಳೆಗಳ ಹಸಿವಿಗೆ
ಇಂದೇ ಬಲಿಯಾಗಬೇಕೇ?

ಬಾ…
ಮಾಯದ ಮಳೆಯೊಳಗೆ
ಮತ್ತೆ ನಗುವನ್ನು ಅರಳಿಸಿ,
ಮತ್ತೆ
ಒಬ್ಬರೊಳಗೆ ಒಬ್ಬರು
ಮರೆಯಾಗೋಣ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಕನಸುಗಳ ಹಬ್ಬ ಮುಗಿದಂತೆ
ನಿನ್ನ ಬಣ್ಣದ ಕೊಡೆ
ಇನ್ನೂ ಎಲ್ಲೋ ಮರೆತುಹೋದಂತೆ–
ಮತ್ತೆ ತರಬಹುದೇ ನೀನು?

ಆ ಕೊಡೆಯ ಅಡಿಯಲ್ಲಿ
ಆ ಅನಾಥ ಬೆಂಚಿನ ಮೇಲೆ
ಅತಿಥಿಗಳಂತೆ ಕುಳಿತು
ನಾವಿಬ್ಬರೂ ಮತ್ತೆ ನಗಬೇಕಿದೆ;
ಮಳೆಯಿಗೂ ಮತ್ತೆ
ಜೀವ ತುಂಬಬೇಕಿದೆ...

ನಗುವಿನಿಂದಲೇ
ನಗುವಿನ ಹುಟ್ಟು–
ಎತ್ತಲೋ ಏನನ್ನೋ ತೋರುವ
ನನ್ನ ಬೆರಳುಗಳಿಗೆ
ನಿನ್ನ ಮುಂಗುರುಳ ಸರಿಸುವ
ಕೆಲಸ ಇನ್ನೂ ಬಾಕಿಯಿದೆ.

ತಂಪು ಗಾಳಿಗೂ
ನಮ್ಮ ಮೈಬಿಸಿಯ ರುಚಿ ಬೇಕಿದೆ;
ಒಂದಿಷ್ಟು ಸುಳ್ಳುಗಳನ್ನು ಖರೀದಿಸಿ
ಅಪ್ಪುಗೆಯ ನಡುವೆ
ಒಂದು ಪುಟ್ಟ ಜಗತ್ತನ್ನು
ಮತ್ತೆ ಅರಳಿಸಬೇಕಿದೆ...

ತುಂತುರು ಮಳೆಯ ನಾದಕ್ಕೆ
ಬೆಟ್ಟಗಳೂ ಮೈಮರೆತು,
ಹಸಿರು ಹೊದಿಕೆ ತೊಟ್ಟು
ಮನವನ್ನೇ ಕದಡುತ್ತಿವೆ.

ಬಯಲಿನ ಮೇಲೆ
ಮಳೆಹನಿಗಳ ಕವಿತೆ ಬರೆದು
ನಿನಗಾಗಿ ಮತ್ತೆ
ಓದಬೇಕಿದೆ ನಾನು...

ಬಾನಿಂದ ಇಳಿಯುವ ಮಿಂಚು
ಭೂಮಿಯ ಒಡಲ ಸೇರುವ ಸೊಗಸು–
ನಿಸರ್ಗದ ಸವಿಗೆ
ನಾವೇ ಸಾಕ್ಷಿಗಳು.

ಎಲ್ಲವೂ ಮಳೆಯಾಟ,
ಬದುಕೂ ಅದೇ ಆಟ–
ನಾಳೆಗಳ ಹಸಿವಿಗೆ
ಇಂದೇ ಬಲಿಯಾಗಬೇಕೇ?

ಬಾ…
ಮಾಯದ ಮಳೆಯೊಳಗೆ
ಮತ್ತೆ ನಗುವನ್ನು ಅರಳಿಸಿ,
ಮತ್ತೆ
ಒಬ್ಬರೊಳಗೆ ಒಬ್ಬರು
ಮರೆಯಾಗೋಣ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.