ಮುಕೇಶ್ ಅಂಚೆ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾನೆ. ನಿವೃತ್ತಿಯಾಗಲು ಇನ್ನೂ ಹನ್ನೆರಡು ವರ್ಷಗಳು ಬಾಕಿ ಇವೆ. ಏಕಮಾತ್ರ ಪುತ್ರ ಹಾಗೂ ಸೊಸೆ ಜರ್ಮನಿಯಲ್ಲಿದ್ದಾರೆ. ಅವನು ಮತ್ತು ಅವನ ಹೆಂಡತಿ ಕರ್ನಾಟಕದಲ್ಲಿದ್ದಾರೆ.

ಮುಕೇಶ್ ಕಾದಂಬರಿಕಾರ ಸಹ. ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಾನೆ. ಇದುವರೆಗೆ ನಾಲ್ಕು ಕಾದಂಬರಿಗಳು ಬರೆದಿದ್ದಾನೆ. ಓದುಗರು ಅವನ ಕಾದಂಬರಿಗಳನ್ನು ಮೆಚ್ಚಿದ್ದಾರೆ. ಇದೀಗ ಅವನು ಐದನೇ ಕಾದಂಬರಿ ಬರೆಯುವುದಕ್ಕೆ ಆರಂಭಿಸಿದ್ದಾನೆ.

ಎರಡು ವರ್ಷಗಳ ಹಿಂದೆ ಅವನು ಹಾಸನದಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿದ್ದ. ಅಲ್ಲಿ ಅವನು ಕೆಂಗೇರಿ ಉಪನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಆ ಮನೆ ಅವನಿಗೆ ತುಂಬಾ ಮೆಚ್ಚುಗೆಯಾಗಿತ್ತು. ಅಲ್ಲಿ ಓದಲು ಬರೆಯಲು ಒಳ್ಳೆಯ ವಾತಾವರಣವಿತ್ತು. ಮನೆಯ ಮುಂದೆ ಚಿಕ್ಕ ಅಂಗಳದಲ್ಲಿ ಗುಲ್ಮೊಹರ್ ಮರವಿತ್ತು. ಬಿಡುವಿನ ವೇಳೆಯಲ್ಲಿ ಅವನು ಅಂಗಳದಲ್ಲಿ ಮೇಜು, ಕುರ್ಚಿ ಹಾಕಿಕೊಂಡು ಓದುವುದರಲ್ಲಿ, ಬರೆಯುತ್ತಾ ಕಾಲ ಕಳೆಯುತ್ತಿದ್ದ. ಆಮೇಲೆ ಕೆಲವು ಸಂದರ್ಭಗಳಲ್ಲಿ ಮೇಜಿನ ಮೇಲೆ ಚೆಸ್ ಬೋರ್ಡ್ ಇಟ್ಟು, ಅದರ ಮೇಲೆ ಎದುರುಬದುರು ಚೆಸ್ ಕಾಯಿಗಳನ್ನು ಜೋಡಿಸಿ ಅತಿ ಗಂಭೀರವಾಗಿ ಬೋರ್ಡ್ ನೋಡುತ್ತಾ ಕುಳಿತುಕೊಳ್ಳುತ್ತಿದ್ದ. ಅವನಿಗೆ ಚೆಸ್ ಆಟ ಬರುತ್ತಿರಲಿಲ್ಲ.

ಎರಡು ವರ್ಷಗಳ ಹಿಂದೆ ಅವನು ಈ ಮನೆಗೆ ಬಂದಾಗ ಚೆಸ್ ಬೋರ್ಡ್ ಇಲ್ಲೇ ದೊರೆತಿದ್ದು. ಈ ಹಿಂದೆ ಈ ಮನೆಯಲ್ಲಿ ಬಾಡಿಗೆಗೆ ಇದ್ದವರು ಇದನ್ನು ಬಿಟ್ಟು ಹೋಗಿದ್ದರು. ಬಹುಶಃ ಅವರಿಗೂ ಚೆಸ್ ಆಡಲು ಬರುತ್ತಿರಲ್ಲಿವೋ ಏನೋ?

ಬೆಂಗಳೂರಿನಲ್ಲಿ ಎರಡು ವರ್ಷ ಇದ್ದ ಬಳಿಕ ಅವನ ಟ್ರಾನ್ಸ್ಫರ್ ಮೈಸೂರಿಗೆ ಆಯಿತು. ಮನೆ ಬಿಡುವಾಗ ಅವನು ಚೆಸ್ ಬೋರ್ಡ್ ಅಲ್ಲೇ ಬಿಟ್ಟು ಹೋಗಿದ್ದ.

ಮೈಸೂರಿಗೆ ಬಂದ ಒಂದು ತಿಂಗಳ ನಂತರ ಅವನ ಗಮನಕ್ಕೆ ಬಂದ ವಿಷಯ ಏನೆಂದರೆ ಅವನ ಇನ್ನೂರು ಪುಟದ ನೋಟ್ಬುಕ್ ಕಳೆದು ಹೋಗಿದೆ ಎಂದು. ಆ ಬುಕ್ನಲ್ಲೇ ಅವನು ತನ್ನ ಐದನೇ ಕಾದಂಬರಿ ಬರೆಯುವುದಕ್ಕೆ ಪ್ರಾರಂಭಿಸಿದ್ದ. ಏನಾದರೂ ಬರೆಯಬೇಕೆಂದರೆ ಅವನು ಮೊದಲು ನೋಟ್ಬುಕ್ನಲ್ಲಿ ಬರೆಯುತ್ತಿದ್ದ. ಆಮೇಲೆ ಟೈಪ್ ಮಾಡುತ್ತಿದ್ದ. ಟೈಪ್ ಮಾಡುವಾಗ ಅಲ್ಪಸ್ವಲ್ಪ ಬದಲಾವಣೆ ಸಹ ಮಾಡುತ್ತಿದ್ದ.

ಎಷ್ಟೇ ಹುಡುಕಿದರೂ ನೋಟ್ಬುಕ್ ಸಿಗದೇ ಇದ್ದಾಗ ಮತ್ತೊಂದು ನೋಟ್ಬುಕ್ನಲ್ಲಿ ಹೊಸದಾಗಿ ಕಾದಂಬರಿ ಬರೆಯುವುದಕ್ಕೆ ಪ್ರಾರಂಭಿಸಿದ್ದ.

ಆಮೇಲೆ ಒಂದು ದಿನ ಅವನಿಗೆ ನೋಟ್ಬುಕ್ ಅನ್ನು ಬೆಂಗಳೂರುನಲ್ಲಿ ಬಿಟ್ಟು ಬಂದಿದ್ದು, ಮನೆ ಬಿಡುವಾಗ ಚೆಸ್ ಬೋರ್ಡ್ನ ಕೆಳಗೆ ಅದನ್ನು ಇಟ್ಟಿದ್ದು ನೆನಪು.

ಬೆಂಗಳೂರಿಗೆ ಹೋಗಿ ನೋಡಬೇಕು. ಆ ಮನೆಗೆ ಹೊಸದಾಗಿ ಬಾಡಿಗೆಗೆ ಬಂದವರನ್ನು ವಿಚಾರಿಸಬೇಕು. ಅವರೇನಾದರೂ ಬುಕ್ ಇಟ್ಟಿದ್ದರೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿರಾಸೆಯಾಗದೆ ಹಿಂತಿರುಗಬೇಕು.

ಬಿಡುವಿನ ಒಂದು ದಿನ ಅವನು ಬೆಂಗಳೂರುಗೆ ಹೊರಟ.

ತಾನು ವಾಸವಿದ್ದ ಮನೆ ಮುಂದೆ ಹೋದಾಗ ಅಲ್ಲಿ ನೇಮ್ಪ್ಲೇಟ್ ಮೇಲೆ ಎಐ ಎಂದು ಬರೆಯಲಾಗಿತ್ತು. ಅವನು ಗೇಟ್ ಬಳಿ ನಿಂತುಕೊಂಡು ನೋಡಿದ. ಮನೆಯ ಅಂಗಳದಲ್ಲಿ ಗುಲ್ ಮೊಹರು ಮರದಡಿಯಲ್ಲಿ ಮೇಜು, ಅದರ ಮೇಲೆ ಚೆಸ್ ಬೋರ್ಡ್ ಇಟ್ಟು, ಅದರಲ್ಲಿ ಎದುರುಬದುರು ಚೆಸ್ ಕಾಯಿಗಳನ್ನು ಜೋಡಿಸಿ, ಕುರ್ಚಿ ಮೇಲೆ ರೋಬೊಟ್ ಕುಳಿತುಕೊಂಡಿತ್ತು. ಇನ್ನೊಂದು ಕಡೆ ಖಾಲಿ ಕುರ್ಚಿ ಇತ್ತು. ರೋಬೊಟ್ ಚೆಸ್ ಬೋರ್ಡ್ ತುಂಬಾ ಎಚ್ಚರಿಕೆಯಿಂದ ಯಾವ ರೀತಿ ನೋಡುತ್ತಿತ್ತು ಎಂದರೆ, ಅದರ ಎದುರಿಗೆ ಇನ್ನೊಂದು ಚೆಸ್ ಚಾಂಪಿಯನ್ ರೋಬೊಟ್ ಕುಳಿತುಕೊಂಡು ಆಟ ಆಡುತ್ತಿರುವಂತೆ.

ಇದ್ದಕ್ಕಿದ್ದಂತೆ ರೋಬೊಟ್ನ ದೃಷ್ಟಿ ಮುಕೇಶ್ ಮೇಲೆ ಹೋಯಿತು. ರೋಬೊಟ್ ಮುಕೇಶ್ನನ್ನು ಒಳಗೆ ಬರಲು ಸೂಚಿಸಿತು. ಮುಕೇಶ್ ಒಳಗೆ ಹೋದಾಗ ರೋಬೊಟ್ ಅವನಿಗೆ ತನ್ನ ಎದುರು ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳಿತು. ಮುಕೇಶ್ ಕುಳಿತುಕೊಂಡ.

‘ನಿಮಗೆ ಚೆಸ್ ಆಡಲು ಬರುತ್ತಾ? ರೋಬೊಟ್ ಕೇಳಿತು.

‘ಇಲ್ಲ’ ಎಂದ ಮುಕೇಶ್.

‘ನಾನು ನಿಮಗೆ ಕೇವಲ ಕೆಲವೇ ಕ್ಷಣದಲ್ಲಿ ಚೆಸ್ ಆಡಲು ಕಲಿಸುತ್ತೇನೆ, ನಿಮಗೆ ಚೆಸ್ ಆಡಲು ಆಸಕ್ತಿ ಇದ್ದರೆ’

‘ನನಗೆ ಆಸಕ್ತಿ ಇಲ್ಲ. ಚೆಸ್ ಕಲಿಯಲು ನನ್ನ ಬಳಿ ಸಮಯ ಸಹ ಇಲ್ಲ. ನಾನು ಮೈಸೂರುನಿಂದ ಬಂದಿದ್ದೇನೆ. ವಿಷಯ ಏನೆಂದರೆ, ಒಂದು ತಿಂಗಳ ಹಿಂದೆ ನಾವು ಇದೇ ಮನೆಯಲ್ಲಿ ಬಾಡಿಗೆಗೆ ಇದ್ದಿದ್ದು.

‘ಹಾಗಿದ್ದರೆ ಈ ಚೆಸ್ ಬೋರ್ಡ್ ನಿಮಗೆ ಸೇರಿದ್ದೇನು?’

‘ಇಲ್ಲ ಎರಡು ವರ್ಷಗಳ ಹಿಂದೆ ನಾವು ಈ ಮನೆಗೆ ಬಂದಾಗ ಈ ಚೆಸ್ ಬೋರ್ಡ್ ಇಲ್ಲೇ ಇತ್ತು. ನಮಗಿಂತ ಹಿಂದೆ ಬಾಡಿಗೆಗೆ ಇದ್ದವರು ಇದನ್ನು ಬಿಟ್ಟು ಹೋಗಿದ್ದರು. ಆಮೇಲೆ ನಾವು ಮನೆ ಬಿಡುವಾಗ ಇದನ್ನು ಇಲ್ಲೇ ಬಿಟ್ಟು ಹೋಗಿಬಿಟ್ಟೆವು’.

‘ಈಗ ನೀವು ಬಂದ ಕಾರಣ?’

‘ನಾನೊಬ್ಬ ಕಾದಂಬರಿಕಾರ. ನಾನು ಹೊಸದಾಗಿ ಬರೆಯುತ್ತಿದ್ದ ಕಾದಂಬರಿಯನ್ನು ಇಲ್ಲೆ ಬಿಟ್ಟು ಹೋಗಿದ್ದೇನೆ ಎಂದು ನನ್ನ ಅನಿಸಿಕೆ. ಇನ್ನೂರು ಪುಟದ ನೋಟ್ಬುಕ್ನಲ್ಲಿ ಬರೆಯುತ್ತಿದ್ದೆ’ ಮುಕೇಶ್ ಹೇಳಿದ.

‘ಅದೃಷ್ಟಕ್ಕೆ ನಿಮ್ಮ ಅಪೂರ್ಣ ಕಾದಂಬರಿ ನನ್ನ ಕೈಗೆ ಸಿಕ್ಕಿ, ನಾನದನ್ನು ಹೊಸಶೈಲಿಯಲ್ಲಿ ಬರೆದು ಪ್ರಕಟಿಸಲು ಕಳುಹಿಸಿಬಿಟ್ಟೀದ್ದೇನೆ’.

‘ನೀವು ಅದನ್ನು ಪೂರ್ಣವಾಗಿ ಬೇರೆ ದಿಕ್ಕಿನಲ್ಲಿ ಬರೆದಿರುವುದು ಸಂತೋಷದ ಸಂಗತಿ’.

‘ಶುಭ ಹಾರೈಕೆಗಳು. ಈಗ ನನಗೆ ನನ್ನ ನೋಟ್ಬುಕ್ ಹಿಂತಿರುಗಿಸಿ. ನಾನು ಮತ್ತೊಮ್ಮೆ ಯೋಚಿಸಿ ಹೂಸರೀತಿ ಬರೆಯುತ್ತೇನೆ’.

ರೋಬೊಟ್ ಮನೆಯೊಳಗೆ ಹೋಗಿ, ನೋಟ್ಬುಕ್ ನೀಡಿತು.

ಮುಕೇಶ್ ಕಾದಂಬರಿಯನ್ನು ತುಂಬಾ ಯೊಚನೆ ಮಾಡಿ, ಹೊಸ ಹೊಸ ವಿಷಯಗಳನ್ನು ಸೇರಿಸಿ ಬರೆಯಲು ಪ್ರಾರಂಭಿಸಿದ. ತಾನು ರಚಿಸುತ್ತಿರುವ ಕಾದಂಬರಿ ರೋಬೊಟ್ ಬರೆದಿರುವ ಕಾದಂಬರಿಗಿಂತ ಚೆನ್ನಾಗಿ ಮೂಡಿಬರಬೇಕೆಂದು ಅವನ ಆಸೆಯಾಗಿತ್ತು.

ಮುಕೇಶ್ ಬರೆದಿರುವ ಕಾದಂಬರಿ ಮತ್ತು ರೋಬೊಟ್ ರಚಿಸಿರುವ ಕಾದಂಬರಿ ಒಂದೇ ಶೀರ್ಷಿಕೆಯಲ್ಲಿ ಒಂದೇ ಸಮಯದಲ್ಲಿ ಪ್ರಕಾಟವಾಗಿ ಓದುಗರ ಕೈ ಸೇರಿದವು. ಆದರೆ ವಿಚಿತ್ರವೆಂದರೆ ಓದುಗರು ರೋಬೊಟ್ ಬರೆದಿರುವ ಕಾದಂಬರಿಯನ್ನು ತುಂಬಾ ಮೆಚ್ಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.