ಅಂದು ಸಂಜೆ ಅವಳನ್ನು ಪರೀಕ್ಷಿಸಿದ ವೈದ್ಯರು, ಶೀಘ್ರದಲ್ಲೇ ಸಾವು ಖಚಿತ ಎಂಬ ಸ್ಪಷ್ಟ ಸೂಚನೆ ಕೊಟ್ಟರು. ಆಗ, ಅವಳಿಗೆ ನೀಡಿದ್ದ ಆಕ್ಸಿಜನ್ ಸಂಪರ್ಕವನ್ನು ನರ್ಸ್ಗಳು ತೆಗೆದುಹಾಕಿದರು. ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದಳು. ನಾನು ಅವಳ ಪಕ್ಕದಲ್ಲೇ ಕುಳಿತುಕೊಂಡು, ಅವಳು ಪಡುತ್ತಿದ್ದ ಸಂಕಟವನ್ನು ಅಸಹಾಯಕನಾಗಿ ನೋಡುತ್ತಿದ್ದೆ.

ಒಮ್ಮೆ ಅವಳು ಕಣ್ಣು ತೆರೆದು ನನ್ನತ್ತ ನೋಡಿ, ಮೆಲುದನಿಯಲ್ಲಿ ‘ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ರಿ?’ ಎಂದಳು. ನಾನು ಉತ್ತರಿಸುವಷ್ಟರಲ್ಲಿ ಪುನಃ ಮಂಪರಿಗೆ ಜಾರಿದಳು. ಸ್ವಲ್ಪ ಸಮಯದ ಬಳಿಕ ಮತ್ತೊಮ್ಮೆ ಕಣ್ಣುಗಳನ್ನು ತೆರೆದು ಇನ್ನೂ ಹತ್ತಿರಕ್ಕೆ ಬರುವಂತೆ ಸಂಜ್ಞೆ ಮಾಡಿದಳು. ಅವಳು ಏನು ಹೇಳುತ್ತಾಳೋ ಎಂದು ಬಾಗಿ ಅವಳ ಮುಖದ ಹತ್ತಿರಕ್ಕೆ ಬಂದೆ. ಅವಳು ಅಂತರಂಗದಿಂದ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಆದರೆ ಮಾತುಗಳು ಮಾತ್ರ ಹೊರಗೆ ಬಾರದೆ ಅವಳ ಗಂಟಲಲ್ಲೇ ಉಳಿದವು.

ನಡುರಾತ್ರಿ ಸರಿದು ನಸುಕಿಗೆ ಜಾರುವ ಹೊತ್ತು. ಸಕಲ ಜೀವಜಂತುಗಳೂ ನಿರಾಳವಾಗಿ ನಿದ್ರಿಸುತ್ತಿರುವ ಸಮಯ. ಅವಳ ಪಕ್ಕದಲ್ಲೇ ಕುಳಿತಿದ್ದ ನನಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಸುಳಿಯಲಿಲ್ಲ. ಅವಳ ಅವಸಾನದ ದಯನೀಯ ಸ್ಥಿತಿಯನ್ನು ಕಂಡು ಕಣ್ಣೀರಾಗಿ ಅವಳನ್ನು ತಬ್ಬಿಕೊಂಡೆ. ಹಾಗೆಯೇ ಅವಳ ಕಾಲುಗಳನ್ನು ತಡವಿದೆ. ಅವು ಮಂಜುಗಡ್ಡೆಯಂತೆ ಮರಗಟ್ಟಿಹೋಗಿದ್ದವು. ಅವಳು ನಡೆದಾಡಿ, ಹೊಟ್ಟೆಗೆ ಸರಿಯಾಗಿ ಒಂದಿಷ್ಟು ತಿಂದು ಅದೆಷ್ಟು ದಿನಗಳಾಗಿದ್ದವೋ? ಆಹಾರವಿಲ್ಲದ ಅವಳ ದೇಹವು ಸೊರಗಿಹೋಗಿತ್ತು.

ಜೀವನ್ಮರಣದ ನಡುವೆ ಹೋರಾಡುತ್ತಿದ್ದವಳಿಗೆ ಸಾವಿನಲ್ಲಾದರೂ ಸದ್ಗತಿ ಸಿಗಲಿ ಎಂದು ನನ್ನ ಅಂತರಂಗವು ಭಗವಂತನಲ್ಲಿ ಮೊರೆಯಿಡುತ್ತಿತ್ತು. ‘ಹೇ ಭಗವಂತ, ನೀನು ಕೊಟ್ಟ ಜೀವಾತ್ಮವೊಂದು ನಿನ್ನಲ್ಲಿಗೇ ಮರುಳುತ್ತಿದೆ, ಸ್ವೀಕರಿಸು ದೇವಾ’ ಎಂದು ಬೇಡಿಕೊಂಡೆ. 50 ವರ್ಷ ಆ ದೇಹದಲ್ಲಿ ನೆಲೆಗೊಂಡಿದ್ದ ಜೀವವೊಂದು ಅದನ್ನು ಬಿಟ್ಟು ಅಗಲಿತ್ತು. 30 ವರ್ಷ ನನ್ನ ಜೊತೆ ಅನ್ಯೋನ್ಯ ಪತ್ನಿಯಾಗಿ ಬಾಳಿದವಳು ಇನ್ನಿಲ್ಲವಾದಳು.

ಅವಳು ಕಾಯಿಲೆ ಬಿದ್ದ ಪ್ರಾರಂಭದಲ್ಲಿ ನಾನು ಅವಳಿಗೆ ಮುತುವರ್ಜಿಯಿಂದ ಮಾಡಿದ ಉಪಚಾರಕ್ಕೆ ಮನಸೋತು ‘ರೀ, ನೀವು ನನ್ನನ್ನು ಇಷ್ಟೊಂದು ಪ್ರೀತಿಸುತ್ತೀರಲ್ಲ, ಒಂದು ವೇಳೆ ನಾನೇ ಮೊದಲು ಸತ್ತು ಹೋದರೆ, ಆಗ ನೀವೇನು ಮಾಡುತ್ತೀರಿ? ಏನೇ ಹೇಳಿ ಬದುಕಿನಲ್ಲೂ ಸಾವಿನಲ್ಲೂ ನನ್ನ ಪ್ರೀತಿ ನಿಮಗೆ ಶಾಶ್ವತ’ ಎಂದಿದ್ದಳು. ಅವಳ ಮುದ್ದಾದ ಕೆನ್ನೆಗೆ ನನ್ನ ಅಧರ ತಾಗಿಸಿ ಹನಿಗಣ್ಣಾಗಿದ್ದೆ. ಕೆಲವು ಗಂಟೆಗಳ ಹಿಂದೆ ‘ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದಿರಿ?’ ಎಂದು ಕೇಳಿದ್ದವಳೇ ನನ್ನನ್ನು ಬಿಟ್ಟು ಹೊರಟುಹೋಗಿದ್ದಳು.

ಈಗ ಅವಳು ಸತ್ತು ಎರಡು ದಶಕಗಳೇ ಕಳೆದಿವೆಯಾದರೂ ಅವಳ ನೆನಪು ಮಾತ್ರ ಮಾಸುವುದಿರಲಿ; ಅದೇ ನನ್ನ ಜೊತೆಗಾತಿಯಂತೆ ಆಗಿಬಿಟ್ಟಿದೆ. ಸತ್ತವರ ನೆನಪುಗಳು ಬಾರದಂತೆ ನೆನಪುಗಳ ನಡುವೆ ಭಗವಂತ ಭದ್ರವಾದ ಅಡ್ಡಗೋಡೆಯನ್ನು ನಿರ್ಮಿಸಿ ಬಿಡುತ್ತಾನಂತೆ. ಆದರೆ ನನ್ನ ಪಾಲಿಗೆ ಸಮಯ, ಸಂದರ್ಭಗಳ ಪರಿಗಣನೆಯಿಲ್ಲದೆ ಅವಳ ನೆನಪುಗಳು ಆಗಾಗ ಅಲೆಗಳೋಪಾದಿಯಲ್ಲಿ ತೇಲಿ ಬರುತ್ತಲೇ ಇರುತ್ತವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1792804274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.