ದೀಪಾ ಹಿರೇಗುತ್ತಿ

ಒಂದು ಊರಿನ ಹೊರವಲಯದಲ್ಲಿ ಒಂದು ಆಳವಾದ ಬರಡು ಬಾವಿಯಿತ್ತು. ಆ ಬಾವಿ ಎಷ್ಟು ಆಳವಾಗಿತ್ತೆಂದರೆ ಅದರ ತಳ ಕಾಣುತ್ತಲೇ ಇರಲಿಲ್ಲ. ಒಂದು ದಿನ ಯಾರೋ ಆ ಬಾವಿಯೊಳಗೆ ಸತ್ತ ಪ್ರಾಣಿಯೊಂದನ್ನು ತಂದೆಸೆದರು. ವಾಸನೆಯಿಂದ ವಿಷಯ ತಿಳಿದ ಇಲಿಗಳ ಹಿಂಡು ಬಂದು ಭಡಭಡನೆ ಬಾವಿಯಲ್ಲಿಳಿಯಿತು. ಸುಮಾರು ಎಪ್ಪತ್ತರಿಂದ ಎಂಬತ್ತು ಇಲಿಗಳಿದ್ದವು. ಮನಸೋ ಇಚ್ಛೆ ಆ ಪ್ರಾಣಿಯ ಮಾಂಸವನ್ನು ತಿಂದವು. ತಿಂದು ಹೊಟ್ಟೆ ತುಂಬಿದ ಮೇಲೆ ಬಾವಿಯಿಂದ ಮೇಲೆ ಬರಲು ಪ್ರಯತ್ನಿಸಿದರೆ ಬರಲು ಸಾಧ್ಯವಾಗಲೇ ಇಲ್ಲ.

ಆಗ ಆ ಇಲಿಗಳಿಗೆ ತಾವು ಈ ಆಳವಾದ ಬಾವಿಯಲ್ಲಿ ಸಿಕ್ಕಿಹಾಕಿಕೊಂಡಿರುವುದು ಅರಿವಾಯಿತು. ದಿನಗಳು ಉರುಳಿದವು. ಮಾಂಸ ಪೂರ್ತಿಯಾಗಿ ಖಾಲಿಯಾಯಿತು. ಸ್ವರ್ಗವೆಂದು ಬಂದಿದ್ದ ಬಾವಿ ಈಗ ನರಕವಾಗಿತ್ತು. ಹಸಿವು ತಾಳಲಾರದೇ ಜತೆಗಿರುವ ಇಲಿಗಳನ್ನೇ ತಿನ್ನತೊಡಗಿದವು. ಇಲಿಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತ ಬಂತು. ಕೊನೆಯಲ್ಲಿ ಒಂದೇ ಒಂದು ಇಲಿ ಉಳಿದಿತ್ತು.

ಒಂದು ದಿನ ಆ ಬಾವಿಯೊಳಗೆ ಇದ್ದಕ್ಕಿದ್ದಂತೆ ಒಂದು ಹಗ್ಗ ಬಂದು ನೇತಾಡಿತು. ಇಲಿ ಆ ಹಗ್ಗವನ್ನು ಕಚ್ಚಿ ಹಿಡಿದು ಹತ್ತಿ ಮೇಲೆ ಬಂದಿತು. ಆ ಹಗ್ಗ ಎಸೆದ ವ್ಯಕ್ತಿ ಬೇರೆ ಯಾರೂ ಅಲ್ಲ, ಸತ್ತ ಪ್ರಾಣಿಯನ್ನು ಬಾವಿಯಲ್ಲಿ ಎಸೆದವರೇ. ಇಲಿಯನ್ನು ತೆಗೆದುಕೊಂಡು ಹೋಗಿ ಆ ವ್ಯಕ್ತಿ ತನ್ನ ಗದ್ದೆಯಲ್ಲಿ ಬಿಟ್ಟರು.

ಆ ವ್ಯಕ್ತಿಗೆ ಇಲಿಯ ಮೇಲೆ ಕರುಣೆ ಬಂದಿತ್ತೇ? ಖಂಡಿತ ಇಲ್ಲ. ಆ ಇಲಿ ಈಗ ಬದಲಾಗಿತ್ತು. ತನ್ನದೇ ಜಾತಿಯ ಇಲಿಗಳನ್ನು ತಿನ್ನುವುದು ಅದಕ್ಕೆ ಅಭ್ಯಾಸವಾಗಿತ್ತು, ಹೀಗಾಗಿ ಅದು ಕಾಳು ತಿನ್ನುವುದಿಲ್ಲ ಎಂದು ಆ ವ್ಯಕ್ತಿಗೆ ಗೊತ್ತಾಗಿತ್ತು. ಹೊಲಕ್ಕೆ ಹೋಗುತ್ತಲೇ ಆ ಇಲಿ ಸಿಕ್ಕ ಸಿಕ್ಕ ಇಲಿಗಳ ಮೇಲೆ ದಾಳಿ ಮಾಡಿತು.

ಇದನ್ನು ಡಿವೈಡ್ ಟ್ರ್ಯಾಪ್ ಎನ್ನುತ್ತಾರೆ. ಅಧಿಕಾರದ, ಅಂತಸ್ತಿನ ಮೇಲುಗಡೆ ಇರುವ ಜನರು ಯಾವತ್ತೂ ನೇರವಾಗಿ ಹೋರಾಟ ಮಾಡುವುದಿಲ್ಲ. ಕೆಳಸ್ತರದಲ್ಲಿರುವ ಜನರು ತಮ್ಮ ತಮ್ಮೊಳಗೇ ಹೊಡೆದಾಡಿಕೊಂಡು ಸಂಕಷ್ಟ ಅನುಭವಿಸುತ್ತಾರೆ. ಕೆಲವರಂತೂ ಜೀವನ ಪೂರ್ತಿ ಮತ್ತೊಬ್ಬರನ್ನು ಸೋಲಿಸುವುದರಲ್ಲಿ ಎಷ್ಟು ವ್ಯಸ್ತರಾಗಿರುತ್ತಾರೆಂದರೆ ಅವರಿಗೆ ತಾವು ಯಾರದ್ದೋ ಆಟದ ದಾಳಗಳು ಎಂದು ಕೊನೆಯವರೆಗೂ ಅರ್ಥವೇ ಆಗುವುದಿಲ್ಲ. ಧರ್ಮದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ, ಪ್ರಾದೇಶಿಕತೆಯ ಹೆಸರಿನಲ್ಲಿ, ಅಧಿಕಾರದ ಹೆಸರಿನಲ್ಲಿ, ಜಗತ್ತಿಗೆ ತಾನು ದೊಡ್ಡ ವ್ಯಕ್ತಿ ಎಂಬುದನ್ನು ಸಾಬೀತುಪಡಿಸುವ ಹುಚ್ಚಿನಲ್ಲಿ ಎಷ್ಟೋ ಸಲ ನಾವು ನಮಗೆ ಅರಿವಿಲ್ಲದಂತೆ ಈ ಜಾಲಗಳಲ್ಲಿ ಸಿಕ್ಕಿ ಬೀಳುತ್ತಿರುತ್ತೇವೆ. ಸಾಮಾಜಿಕ ಜಾಲತಾಣದಲ್ಲಂತೂ ಇಹದ ಪರಿವೆ ಇಲ್ಲದಂತೆ ಮುಳುಗಿ ಏಳುತ್ತಿರುತ್ತೇವೆ.

ಹಾಗಂತ ನಮಗಾಗಿ, ನಮ್ಮವರಿಗಾಗಿ, ನಾವು ನಂಬಿದ ವಿಚಾರಗಳಿಗಾಗಿ ದನಿಯೆತ್ತುವುದು ಬೇಡವೇ? ಖಂಡಿತ ಬೇಕು. ಆದರೆ ಅದು ನಮ್ಮ ನಿರ್ಧಾರವಾಗಿರಬೇಕು. ತೋರಿಕೆಯ ಸಮಸ್ಯೆಯಡಿ ನಿಜವಾದ ಸಮಸ್ಯೆಗಳು ಮುಚ್ಚಿಹೋಗದಂತೆ ಜಾಗ್ರತೆ ವಹಿಸಬೇಕು. ನಮ್ಮ ವಿಚಾರದ ವಿರುದ್ಧ ಇರುವವರನ್ನು ಸೈದ್ಧಾಂತಿಕವಾಗಿ ವಿರೋಧಿಸಬೇಕೇ ಹೊರತು ಅವರನ್ನು ದ್ವೇಷಿಸಬಾರದು. ಉದಾಹರಣೆಗೆ ಬೇರೆ ಬೇರೆ ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ಮುಖಂಡರು ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತ, ವೈವಾಹಿಕ ಸಂಬಂಧವನ್ನೂ ಏರ್ಪಡಿಸಿಕೊಳ್ಳುತ್ತ ಇರುವಾಗ ತಳಮಟ್ಟದ ಕಾರ್ಯಕರ್ತರು ಒಬ್ಬರ ಮುಖ ಮತ್ತೊಬ್ಬರು ನೋಡಲಾಗದಂತೆ ದ್ವೇಷಿಸುತ್ತಿರುತ್ತಾರೆ. ಹೀಗಾಗಿ ಯಾರೋ ಬೇರೆಯವರು ಹೆಣೆದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಇಂದಿನ ತುರ್ತು.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-1427908598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.