ಯಾವುದೇ ಮುನ್ಸೂಚನೆಯಿಲ್ಲದೆ, ನಮ್ಮ ಗುಡಿಸಲುಗಳು ಧಗಧಗಿಸುತ್ತಾ ವೇಗವಾಗಿ ಉರಿಯುತ್ತಿವೆ. ನಮ್ಮ ಹಳ್ಳಿಯ ಎಲ್ಲರೂ ಕಿರುಚುತ್ತಾ ಓಡುತ್ತಿದ್ದಾರೆ. ನಾನು ನನ್ನ ಅಣ್ಣನನ್ನೂ ಹಿಂದಿಕ್ಕಿ ಮರಳಿನ ಕಡೆಗೆ ಓಡುತ್ತಿದ್ದೇನೆ. ಅವನು ಅನ್ನುತ್ತಾನೆ, ‘‘ಈ ಹುಡುಗಿಯರು ಯಾವಾಗಲೂ ನಿಧಾನ...!”

ಅವನೇಕೆ ತುಂಬಾ ನಿಧಾನವಾಗಿ ಓಡುತ್ತಿದ್ದಾನೆ? ಎಂದು ಹಿಂತಿರುಗಿ ನೋಡುತ್ತೇನೆ. ಆಗ, ಮೊಮ್ಮ ಭಯದಿಂದ ಮುಖವನ್ನು ಮುಚ್ಚಿಕೊಂಡಿರುವುದು ಕಾಣಿಸುತ್ತದೆ. ನಾನು ಅವಳ ಸಹಾಯಕ್ಕೆ ಓಡಲೆತ್ನಿಸಿದಾಗ, ನನ್ನ ತೆಳ್ಳಗಿನ ತೋಳನ್ನು ದಪ್ಪ ಕೈಯೊಂದು ಹಿಡಿದ ಅನುಭವ. ಅದು, ಮುಖದ ತುಂಬಾ ಮುಳ್ಳಿನಂತಹ ಬಿಳಿ ಕೂದಲಿದ್ದ ಒಬ್ಬ ಬಿಳಿ ದೈತ್ಯನದ್ದಾಗಿದೆ. ನಾನು ಅವನ ಕಣ್ಣುಗಳನ್ನು ನೋಡುತ್ತೇನೆ. ಅವು ನೀಲಿ!

ನನಗೆ ಆಶ್ಚರ್ಯ, “ಅವನಿಗೆ ಜಗತ್ತು ನೀಲಿಬಣ್ಣದಲ್ಲಿ ಕಾಣುತ್ತದೇಯೇ!?”

ಅವನು ನನ್ನನ್ನು ಪಕ್ಕಕ್ಕೆ ತಳ್ಳುತ್ತಾನೆ; ನಾನು ಜೋಲಿ ತಪ್ಪುವುದರ ಜೊತೆಗೆ, ಕಣ್ಣಿಗೆ ಕಾಣುತ್ತಿದ್ದ ಅಮ್ಮನನ್ನೂ ಕಳೆದುಕೊಳ್ಳುತ್ತೇನೆ. ಅಷ್ಟರಲ್ಲಾಗಲೇ ಬೂದಿ ಮಳೆಯಾಗುತ್ತದೆ. ಅದು, ಈಗಾಗಲೇ ಬೆವರಿನಿಂದ ತೊಯ್ದುಹೋಗಿರುವ ನನ್ನ ಚರ್ಮದ ಮೇಲೆ ಆವರಿಸಿ ನನ್ನನ್ನು ಕಪ್ಪಾಗಿಸುತ್ತದೆ.

ನನಗೆ ಅರ್ಥವಾಗದ ಭಾಷೆಯಲ್ಲಿ ಬಿಳಿಯರೆಲ್ಲಾ ಕಿರುಚುತ್ತಾ ಮಾತನಾಡುತ್ತಿದ್ದಾರೆ. ನಾನು ನನ್ನ ಮೊಮ್ಮನನ್ನು ಕೇಳಿದಾಗಲೆಲ್ಲಾ ಅವರ ಬೆವೆತ ಕೈಯಿಂದ ನನಗೆ ಹೊಡೆತ ಬೀಳುತ್ತದೆ. ನನಗೆ ಅರ್ಥವಾಗುತ್ತಿಲ್ಲ, “ಬೂದಿ ಅವರ ಬಿಳಿ ಚರ್ಮವನ್ನೇಕೆ ಕಪ್ಪಾಗಿಸುವುದಿಲ್ಲ?”

ಹಳ್ಳಿಯ ಎಲ್ಲರಿಗೂ ಬೆತ್ತಲೆಯಾಗುವಂತೆ ಆಜ್ಞಾಪಿಸಲಾಗುತ್ತದೆ. ರಾಶಿ ಬಿದ್ದ ಬಟ್ಟೆಯ ಮೇಲೆ ಮೊಮ್ಮ ತೊಟ್ಟಿದ್ದ ಏಪ್ರನ್ ಕೂಡಾ ಬೀಳುತ್ತದೆ. ಬಿಳಿಯರು ನಮ್ಮ ಕಾಲುಗಳಿಗೆ ಕಬ್ಬಿಣದ ಸರಪಳಿ ಹಾಕುತ್ತಾರೆ. ನನ್ನನ್ನು ದೋಣಿಯ ಕೆಳಭಾಗಕ್ಕೆ ತಳ್ಳಲ್ಪಟ್ಟಂತೆ ಭಾಸವಾಗುತ್ತದೆ. ಅಬ್ಬ ಮತ್ತು ನಾನು ಸ್ನೇಹಿತರಂತೆ, ಅವಳು ನಮ್ಮೊಂದಿಗಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ನಾವು ತೆವಳುವಾಗ ಇಲಿಗಳು ದೋಣಿಯಲ್ಲೆಲ್ಲಾ ಓಡಾಡುತ್ತವೆ. ದೋಣಿ ವೇಗವಾಗಿ ಚಲಿಸುತ್ತಿರುವುದು, ಅದರ ತಳಭಾಗಕ್ಕೆ ಹೊಡೆಯುತ್ತಿರುವ ಅಲೆಗಳಿಂದಲೇ ಗೊತ್ತಾಗುತ್ತದೆ. ಅಳು ಬಂದರೂ ನಾನು ಮೌನವಾಗಿದ್ದೆ. ಅಬ್ಬ ನನ್ನನ್ನು ನೋಡಿದರೂ ನಗುವುದಿಲ್ಲ.

ನಾವು ಮತ್ತಷ್ಟು ಒಳಗೆ ತಳ್ಳಲ್ಪಡುತ್ತೇವೆ. ನವಣೆ ಹೊಲದ ಸಾಲುಗಳಷ್ಟೆ, ನಮ್ಮ ಬೆನ್ನಿನ ಮೇಲೆ ಮಲಗಲು ಮಾತ್ರ ಸ್ಥಳವಿದೆ. ನಾನು ಬೆತ್ತಲೆಯಾಗಿರಲು ಇಷ್ಟಪಡುತ್ತೇನೆ. ಆದರೆ, ಈತರ ಜನರ ಮುಂದೆ ನಾನು ಬೆತ್ತಲಾಗಿರುವುದು... ಇದು ಮೊಮ್ಮನಿಗೆ ಹೇಳದ ವಿಷಯವೆಂದು ತೋರುತ್ತದೆ.

ಕತ್ತಲೆ ಮಾತ್ರವಿದ್ದ ಆ ಜಾಗದಲ್ಲಿ, ನಾನು ಹಸಿರು ಬಣ್ಣದ ಬಗ್ಗೆ ಧ್ಯಾನಿಸುತ್ತೇನೆ.

ಮುಂಜಾನೆಯ ಇಬ್ಬನಿ ಬೆರೆತ ಮಣ್ಣಿನ ವಾಸನೆ ಬೀರುವ ಸೊಂಪಾದ ಹೊಲಗಳ ಹಳದಿ-ಹಸಿರು... ಮಧ್ಯಾಹ್ನದ ವೇಳೆಗೆ ಬಿಳಿ ತುದಿಗಳನ್ನು ಹೊಂದಿರುವ ಉಪ್ಪುನೀರಿನ ನೀಲಿ-ಹಸಿರು... ಅಡುಗೆ ತಯಾರಿಸುವಾಗಿನ ಕಪ್ಪುಕಲೆಗಳಿಂದಾಗಿ ಬಣ್ಣ ಮಾಸಿರುವ ಮೊಮ್ಮನ ಏಪ್ರನ್ ಮೇಲಿದ್ದ ಹೂವಿನ ಕಾಂಡಗಳ ಪ್ರಕಾಶಮಾನವಾದ ಹಸಿರು...

ನಾನು ಹಸಿರು ಬಣ್ಣದ ಬಗ್ಗೆ ಧ್ಯಾನಿಸುತ್ತೇನೆ.

ನನ್ನ ಕಣ್ಣುಗಳು ಬಣ್ಣವನ್ನು ಗುರುತಿಸುವಷ್ಟೂ ಬೆಳಕಿಲ್ಲ. ಎಲ್ಲವೂ ಕಪ್ಪು, ಕಪ್ಪು ಮತ್ತು ಕಪ್ಪು; ನನ್ನ ಚರ್ಮ, ಕೂದಲು ಮತ್ತು ಪಾದದ ಸುತ್ತಲಿನ ಕಬ್ಬಿಣದಂತೆ ಕಪ್ಪು. ನಾನು ಬಣ್ಣಗಳನ್ನು ಕಲ್ಪಿಸಿಕೊಳ್ಳಬಲ್ಲೆನಾದ್ದರಿಂದ ಅವು ನನ್ನಿಂದ ಮರೆಯಾಗುವುದಿಲ್ಲ. ನಾನು ಕಿತ್ತಳೆ ಅಥವಾ ಕೆಂಪು ಬಣ್ಣವನ್ನು ಕಲ್ಪಿಸಿಕೊಳ್ಳದಿರಲು ಪ್ರಯತ್ನಿಸುತ್ತೇನೆ. ಏಕೆಂದರೆ, ನನಗವು ಬೆಂಕಿಯನ್ನು ನೆನಪಿಸುತ್ತವೆ!

ನಾನು ಹಸಿರು ಬಣ್ಣವನ್ನು ಧ್ಯಾನಿಸಿದ ನಂತರ, ಕಬ್ಬಿಣದ ಸರಪಳಿಗಳನ್ನು ಹಾಕುವಾಗ ನೋಡಿದ, ನನ್ನ ಕಾಲುಗಳ ಕೆಳಗಿದ್ದ ಮರಳಿನ ಬಣ್ಣ ನನಗೆ ನೆನಪಾಗುತ್ತದೆ. ಮರಳಿನ ಬಣ್ಣವು, ಮರದಿಂದ ಬಿದ್ದ, ಅತ್ಯಂತ ಸಿಹಿಯಾದ, ಜೇಡಿ ಮಣ್ಣಿನಿಂದ ಮುಚ್ಚಿದ ನಿಂಬೆಹಣ್ಣಿನಂತಿದೆ. ʻಧೂಳಿನ ನಿಂಬೆʼ ನಾನು ಅದಕ್ಕಿಟ್ಟಿದ್ದ ಹೆಸರು. ಅಬ್ಬಾಗೆ ಹೇಳಬೇಕು ಎಂದು ನೋಡಿದರೆ, ಅವಳು ಅಳುತ್ತಿದ್ದಾಳೆ! ಅವಳನ್ನು ಒಂಟಿಯಾಗಿರಲು ಬಿಡುತ್ತೇನೆ.

ಬೆನ್ನ ಮೇಲೆ ಮಲಗಿ, ನಾನು ಕೈಚಾಚಿ ಮುಟ್ಟಬಹುದಾದಷ್ಟು ಸೀಲಿಂಗ್ ಕೆಳಗಿತ್ತು. ಆ ಸೀಲಿಂಗ್ ಬೋರ್ಡ್ಗಳು ನಾನು ಮಲಗಿದ್ದ ಹಲಗೆಗಳಿಗಿಂತ ಮೃದುವಾಗಿದ್ದವು. ಬಿಳಿಯರಿಗೆ, ಇಷ್ಟೊಂದು ಮೃದುವಾದ ಬೋರ್ಡುಗಳು ಬೇಕಾಗುತ್ತವೆ ಅಂದರೆ, ಅವರ ಪಾದಗಳು ಅದಕ್ಕಿಂತ ಮೃದುವಾಗಿ ಇರಬೇಕೆಂದು ನನಗನ್ನಿಸುತ್ತದೆ.

ಬಿಳಿ ಬಣ್ಣದ ಮೃದುವಾದ ದಿಂಬುಗಳ, ಆಕಾಶ ನೀಲಿ ಬಣ್ಣ ಬಳಿದ ನಯವಾದ ಬೋರ್ಡ್ಗಳಿರಬಹುದು. ನಮ್ಮ ದೇಹದ ಉಷ್ಣತೆಯು ಫೆಬ್ರುವರಿ ಮಧ್ಯದ ಬೇಸಗೆಗಿಂತ ಬಿಸಿಯಾಗಿದೆ. ಆದ್ದರಿಂದ, ಉಸಿರುಗಟ್ಟಿಸುವ ಉಬ್ಬುಸೆಕೆಯ ಬದಲು ಹಳದಿಸೂರ್ಯನ ಸುಡುವ ಶಾಖವನ್ನೇ ನಾನು ಊಹಿಸುತ್ತೇನೆ.

ನನ್ನ ಸುತ್ತಲೂ ಇದ್ದ ವಸ್ತುಗಳನ್ನು ನಾನು ಧ್ಯಾನಿಸುತ್ತೇನೆ. ಕತ್ತಲೆಯಲ್ಲಿ ಹೊರಗೆ ಹೋದಾಗ, ಏಳು ಗುಡಿಸಲುಗಳ ದೂರದಲ್ಲಿರುವ ಅಬ್ಬಾಳ ಗುಡಿಸಲಿಗೆ ನನ್ನನ್ನು ಕರೆದೊಯ್ಯಲು, ಬೋಬ್ ಮರಗಳ ತೊಗಟೆ, ಒರಟಾದ ಹಾದಿ ಮತ್ತು ಸಾಸೇಜ್ ಮರದ ಎಲೆಗಳು, ನನ್ನ ಬೆನ್ನಿಗೆ ಕಚಗುಳಿ ಇಡುವುದನ್ನು ನಾನು ಅನುಭವಿಸುತ್ತೇನೆ. ಹಲೋ ಹೇಳಲು ಮಂಗಗಳು ನನ್ನೆಡೆಗೆ ಹಲ್ಲು ಕಿರಿಯುತ್ತಿವೆ.

ನಾನು ಹಲಗೆಗಳ ಸವರುವುದನ್ನು ನಿಲ್ಲಿಸಿ, ನನ್ನ ಕಾಲು, ಹೊಟ್ಟೆ ಮತ್ತು ತೋಳುಗಳಲ್ಲಿನ ಮಾಂಸಖಂಡಗಳನ್ನು ಮುಟ್ಟಿಕೊಳ್ಳುತ್ತೇನೆ. ಅವು ಮಾಗಿದ ಹೊಂಬಣ್ಣದ ಮಾವಿನ ಹಣ್ಣುಗಳಂತೆ ಅಥವಾ ಸುಡುವ ಮೊದಲಿನ ಬಿಳಿಯ ಬ್ರೆಡ್ನಂತೆ ಮೃದುವಾಗಿವೆ...

ನನ್ನ ತಲೆಯ ಕೂದಲಿನಷ್ಟು ಕಪ್ಪಾಗುವಂತೆ ಮಾಡಲು ನಾನು ಬಿಳಿಯರನ್ನು ಒಲೆಯಲ್ಲಿ ಸುಡಲು ಇಡಬಯಸುತ್ತೇನೆ! ನಾನು ಎಲ್ಲರಿಗೂ ಒಳ್ಳೆಯವಳಾಗಿರಬೇಕೆಂದು ಮೊಮ್ಮ ಹೇಳುತ್ತಾಳೆ. ಆದ್ದರಿಂದ, ನನ್ನ ತಲೆಯಲ್ಲಿ ಕೆಟ್ಟ ಯೋಚನೆಗಳಿದ್ದುದನ್ನು ಎಂದೂ ನಾನು ಅವಳಿಗೆ ಹೇಳುವುದಿಲ್ಲ.

ಯಾರೂ ಮಾತನಾಡುವುದಿಲ್ಲವಾದರೂ ವಾಕರಿಸುವ, ನರಳುವ ಸದ್ದಂತೂ ಇದೆ. ಮಾತನಾಡುವುದೇ ತಪ್ಪು ಎಂದು ಭಾಸವಾಗುವಂತಿದೆ. ದೋಣಿಯ ಮೇಲ್ಮಾಳಿಗೆಯಲ್ಲಿ ಕಾವಲುಗಾರರು ಗೊಣಗುವುದು ನನಗೆ ಕೇಳಿಸುತ್ತದೆ. ನನಗೆ ನೀರು ಕೇಳಬೇಕೆನ್ನಿಸಿದರೂ ಸಹ ಹೆಚ್ಚು ತೊಂದರೆ ಕೊಡಲು ನಾನು ಹೆದರುತ್ತೇನೆ.

ವಾಕರಿಕೆ. ನರಳಾಟ. ಗೊಣಗಾಟ...

ಜನರು ಆರಾಮವಾಗಿರಲು ಪ್ರಯತ್ನಿಸುತ್ತಿರುವಾಗ, ಸಮುದ್ರದ ಅಲೆಗಳ ಲಯಬದ್ಧವಾದ ಹೊಡೆತ ಮತ್ತು ಕಬ್ಬಿಣದ ಬಡಿಯುವಿಕೆಯ ಮೇಲೆ ನಾನು ಗಮನ ಹರಿಸುತ್ತೇನೆ. ಮೇಲ್ಮಾಳಿಗೆಯಲ್ಲಿ ಭಾರೀ ಹೆಜ್ಜೆಗಳ ಗುಡುಗು ಸಂಗೀತಕ್ಕೆ ಸಂಗೀತವನ್ನು ಸೇರಿಸಿದಂತಿದೆ. ಅಣ್ಣ ಕೇಳುತ್ತಾನೆಂಬ ಚಿಂತೆಯಿಂದ ನನ್ನ ಹೃದಯ ತುಂಬಾ ಜೋರಾಗಿ ಬಡಿದುಕೊಳ್ಳುತ್ತದೆ. ಬೆವರು ಮೇಲಿನ ತುಟಿಯನ್ನು ತಲುಪಿದಾಗ, ನನ್ನ ಉದ್ವಿಗ್ನತೆಯನ್ನು ಶಾಂತಗೊಳಿಸಲು ನಾನು ಅದನ್ನು ನೆಕ್ಕಿ ಅದರ ಉಪ್ಪಿನಂಶವನ್ನು ಅನುಭವಿಸುತ್ತೇನೆ. ಅಮ್ಮ ಯಾವಾಗಲೂ "ಇನ್ನಷ್ಟು ಉಪ್ಪು ತಿನ್ನು" ಎಂದು ಹೇಳುತ್ತಾಳೆ. ಮೊಮ್ಮನ ಅಡುಗೆ ಚೆನ್ನಾಗಿರುತ್ತದೆ, ಆದ್ದರಿಂದ ಮೊಮ್ಮ ಎಂದರೆ ಉಪ್ಪು ಅಮ್ಮ, ಉಪ್ಪಮ್ಮ! ನಾನು ಅವಳ ರುಚಿಯನ್ನು ಇನ್ನಷ್ಟು ಪಡೆಯಲು ಕಣ್ಣಿರಿಗಾಗಿ ಮತ್ತೆ ಅಳಲು ಪ್ರಯತ್ನಿಸಿ ವಿಫಲಳಾಗುತ್ತೇನೆ; ನಾನು ಒಣಗಿ ಹೋಗಿದ್ದೇನೆ.

ಹೊಡಿ ಬಡಿ ಗಲಾಟೆ ಸದ್ದು...

ನಾವು ದೋಣಿಯೊಳಗೆ ಬಂದಾಗಲೇ, ಗಾಲಿಕುರ್ಚಿಯಲ್ಲಿ ಬಂದೂಕನ್ನು ಹಿಡಿದ ಬಿಳಿಯನೊಬ್ಬ ಕುಳಿತಿರುವುದನ್ನು ನಾನು ಗಮನಿಸಿದ್ದೆ. ಈಗ ನಾನು ಚಕ್ರವೋ ಏನೋ ಉರುಳುವ ಶಬ್ದವನ್ನು ಕೇಳುತ್ತೇನೆ. ಅದು ನಿಧಾನವಾದಂತೆ ಆ ಶಬ್ದವೂ ದೂರವಾಗುವುದನ್ನು ಗಮನಿಸುತ್ತೇನೆ. ಚಕ್ರಗಳು ಬಂದು ಹೋಗುವುದನ್ನು ಊಹಿಸುವುದು ಮತ್ತು ನನ್ನ ಬೆರಳುಗಳನ್ನು ಮಡಿಸಿ ಎಣಿಸುವ ಆಟದಿಂದಾಗಿ ನನ್ನ ಮನಸ್ಸಿನ ತೊಳಲಾಟ ಕಡಿಮೆ ಮಾಡಲು ಯತ್ನಿಸುತ್ತೇನೆ. ಮೊಮ್ಮನಿಗೂ ಉರುಳುವ ಕುರ್ಚಿ ಬೇಕು. ಬಿಳಿಯರ ಪಾದಗಳಂತೆ ಮೊಮ್ಮನವೂ ಮೃದುವಾಗಿರಲು, ನಾನು ನನ್ನ ಅಣ್ಣ ಸೇರಿ ಅವಳಿಗೂ ಒಂದು ಗಾಲಿ ಕುರ್ಚಿ ಮಾಡಿಸಬೇಕು...

ಏನೋ ಸರ ಸರ ಹರಿದ ಸದ್ದು.

ಮೊಮ್ಮ ಅಡುಗೆ ಮಾಡುವಾಗ ಹಾಡುತ್ತಿದ್ದ ಹಾಡಿನ ಲಯಕ್ಕೆ ತಕ್ಕಂತೆ ನಾನು ನನ್ನ ಬೆರಳುಗಳನ್ನು ನೆಲಕ್ಕೆ ತಟ್ಟುತ್ತೇನೆ. ಅವಳು ಅಡುಗೆ ಮಾಡುವಾಗ, ಇತರ ಹೆಂಗಸರೊಂದಿಗೆ ಸೇರಿಕೊಂಡು ಯಾವಾಗಲೂ ಗುನುಗುತ್ತಾಳೆ. ಇನ್ನು ಮೊಮ್ಮ ಗುನುಗುವುದನ್ನು ನಾನು ಎಂದಿಗೂ ಕೇಳುವುದಿಲ್ಲ, ಅವಳ ಹೊಳೆಯುವ ನಗುವಿನಿಂದ ನನಗೆ ಬೆಚ್ಚನೆಯ ಅನುಭವವಾಗುವುದಿಲ್ಲ ಅಥವಾ ಅವಳ ಕಪ್ಪು ಕೈಗಳು ಮತ್ತೆ ಬೀನ್ಸ್ ಬಿಡಿಸುವುದನ್ನು ನೋಡುವುದಿಲ್ಲ ಎಂದು ನಾನು ಚಿಂತಿತಳಾಗುತ್ತೇನೆ. ಮೊಮ್ಮ ನನ್ನೊಂದಿಗೆ ಗುನುಗುತ್ತಾರೆಯೇ ಎಂದು ನೋಡಲು, ನಾನು ಅವಳ ಹಾಡನ್ನು ಜೋರಾಗಿ ಗುನುಗಲು ಪ್ರಯತ್ನಿಸುತ್ತೇನೆ. ಆದರೆ, ತಕ್ಷಣ ಒಬ್ಬ ಮಹಿಳೆ ನನಗೆ ಹಾಡು ನಿಲ್ಲಿಸಲು ಹೇಳುತ್ತಾಳೆ:

"ಇದು ಹಾಡಲು ಸಮಯವಲ್ಲ ಮಗು."

ನಾನು ಮೌನವಾಗುತ್ತೇನೆ. ಮೊಮ್ಮ ʻಹಾಡಲು ಯಾವಾಗಲೂ ಸಮಯವಿದೆʼ ಎಂದು ಹೇಳುತ್ತಿದ್ದಳು. ನನಗೆ ಮೊಮ್ಮ ಬೇಕು. ನನ್ನ ಕಣ್ಣುಗಳು ಅವಳನ್ನು ಹುಡುಕಬಹುದೇ ಎಂದು ನೋಡಲು ಅವಸರಿಸುತ್ತೇನೆ. ರಾತ್ರಿಯಲ್ಲಿ ಅಲೆದಾಡುವ ಸಮುದ್ರದಂತೆ ಕಪ್ಪು ಬಣ್ಣದ ಸಾಲುಗಳು.

ನಾನು ಮೊಮ್ಮನನ್ನು ನೋಡುತ್ತಿಲ್ಲ. ನಾನು ಮುಚ್ಚಿಟ್ಟ ಹಾಡು ನನ್ನ ಎದೆಯಲ್ಲಿ ಸಿಲುಕಿಕೊಂಡು, ಕಿರುಚಾಟದ ಮೂಲಕ ಸ್ಫೋಟಗೊಳ್ಳಲು ಬಯಸುತ್ತಿದೆ. ಶಬ್ದ ಬರದಂತೆ ತಡೆಯಲು ನಾನು ನನ್ನ ಗಲ್ಲವನ್ನು ನನ್ನ ಎದೆಯ ಮೇಲೆ ಹುದುಗಿಸಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಲೆ, ಮೇಲಿನ ನಯವಾದ ಹಲಗೆಗಳಿಗೆ ಬಡಿದು ಹಿಂದಕ್ಕೆ ಬೀಳುತ್ತೇನೆ.

ಯಾವುದೋ ವಾದ್ಯದ ಸದ್ದು.

ಮತ್ತೆ ಬೆನ್ನ ಅಡಿಯಾಗಿ ಮಲಗಿ, ತೋರು ಬೆರಳಿನಿಂದ ತೊಡೆಯ ಮೇಲೆ ತಾಳ ಹಾಕುತ್ತೇನೆ. ಅದಕ್ಕೆ ತಕ್ಕನಾಗಿ ನನ್ನ ತಲೆಯಲ್ಲಿ ಶಬ್ದಗಳಿಂದ ಹಾಡುಗಳನ್ನು ಹೆಣೆಯುತ್ತೇನೆ. ನಾನು ಮೊಮ್ಮಳಿಗೆ, ಬಿಳಿ ಪುರುಷರ ನೀಲಿ ಪ್ರಪಂಚದ ಬಗ್ಗೆ ಹೇಳಬೇಕು. ನಾನು ಅವಳ ನಗುವನ್ನು ಕೇಳಬೇಕು. ನನ್ನ ಅಣ್ಣ ನನ್ನ ಜಡೆ ಕೂದಲಿನ ಬಗ್ಗೆ ಕೀಟಲೆ ಮಾಡುವುದನ್ನು ಕೇಳಬೇಕು. ನನ್ನ ಕಣ್ಣುರೆಪ್ಪೆಗಳು ಕಪ್ಪು ಬಣ್ಣವನ್ನು ತಡೆಯುವಂತೆ, ಅಳುವುದನ್ನು ಕೇಳದಂತೆ ಕಿವಿಗಳು ಮುಚ್ಚಿಕೊಳ್ಳಬೇಕು.

ರೇಷ್ಮೆಯಂತಹ ನಯವಾದ ಬೂದಿ ಮಳೆ ಈಗ ನನ್ನ ದೇಹದ ಮೇಲಿದೆಯೇ ಎಂದು ಕಂಡುಹಿಡಿಯಲು ನಾನು ಕತ್ತಲೆಯಲ್ಲಿ ನನ್ನ ಚರ್ಮವನ್ನು ಸವರಿಕೊಳ್ಳುತ್ತೇನೆ. ನಾನು ಒಣಗಿ ಹೋಗಿರುವುದು ಸ್ಪರ್ಷ ಮಾತ್ರದಿಂದಲೇ ತಿಳಿಯುತ್ತದೆ. ನನ್ನ ತುಟಿ, ನಾಲಿಗೆ ಮತ್ತು ಚರ್ಮದ ಮೇಲೆ ನೀರಿರುವಂತೆ ಕನಸು ಕಾಣುತ್ತೇನೆ. ನಾನು ಮೊಮ್ಮನಿಗೆ ಹೇಳುವುದಿಲ್ಲ; ಮೂತ್ರ ವಿಸರ್ಜಿಸಿ ನನ್ನ ಬೆರಳುಗಳಿಂದ ಅದನ್ನು ನೆಕ್ಕಲು ಪ್ರಯತ್ನಿಸಿದೆ ಎಂದು!

ಹೀಗೆ, ಈ ಎಲ್ಲಾ ಬಣ್ಣಗಳು ಮತ್ತು ಹಾಡುಗಳನ್ನು ಕಲ್ಪಿಸಿಕೊಳ್ಳುವುದರಿಂದ ನನಗೆ ಆಯಾಸವಾಗುತ್ತದೆ. ಆದರೂ ನಿದ್ರೆ ಮಾಡದಿರಲು ಪ್ರಯತ್ನಿಸುತ್ತೇನೆ. ಬಹುಶಃ ನಾನು ಕಣ್ಣು ಮುಚ್ಚಿ ಹಲವು ದಿನಗಳಾಗಿರಬಹುದಾದರೂ ಈ ಕಪ್ಪು ಬಣ್ಣದಲ್ಲಿ ಎಷ್ಟು ಎಂದು ಹೇಳುವುದು ಕಷ್ಟ. ಗೊರಕೆ ಮತ್ತು ರಾತ್ರಿಯ ಕೂಗುಗಳಲ್ಲಿಯೇ ದಿನಗಳು ಕಳೆದಿವೆ ಎಂದು ನನಗೆ ಅನಿಸುತ್ತದೆ.

ಕಣ್ಣು ಮುಚ್ಚಿದಾಗ ಕಾಣುವ ಕಪ್ಪು ಬಣ್ಣ ನನಗೆ ಇಷ್ಟವಿಲ್ಲ; ಕಣ್ಣು ತೆರೆದಿರುವಾಗ ಕಾಣುವ ಕಪ್ಪು ಬಣ್ಣ ನನಗೆ ಇಷ್ಟ!

ನನ್ನ ಕಣ್ಣುಗಳು ನನ್ನನ್ನು ವಂಚಿಸಿ ಮುಚ್ಚಿಕೊಳ್ಳುತ್ತವೆ. ನಾನು ಒಂಟಿಯಾಗಿದ್ದೇನೆ. ನನ್ನ ಹಳ್ಳಿಯ ನೂರಾರು ಜನರು ಮತ್ತು ಅವರ ಶಬ್ದಗಳೊಂದಿಗೆ ಒಂಟಿಯಾಗಿದ್ದೇನೆ. ನಾನು ಕಣ್ಣು ಮುಚ್ಚಿಕೊಂಡಿರುವುದರಿಂದ ಅವರು ನನ್ನನ್ನು ನೋಡಲು ಸಾಧ್ಯವಿಲ್ಲ. ನನ್ನ ಕಣ್ಣುಗಳ ಕೆಂಪು, ನನ್ನ ಅಂಗೈಗಳ ಕಿತ್ತಳೆ ನನ್ನ ಹಣೆಯನ್ನು ಬೆಂಕಿಯಂತೆ ಬಿಸಿ ಮಾಡುತ್ತದೆ. ನನ್ನ ಮನಸ್ಸು ಬಿಸಿಯಾಗಿರುತ್ತದೆ.

ನಾನು ಈ ಎಲ್ಲಾ ಕಲ್ಪನೆಗಳ ನಡುವೆ ನರಳುವಿಕೆಯಿಂದ ಬೆಳೆದಿದ್ದೇನೆ. ಊಟವನ್ನು ತಯಾರಿಸಿ, ಉಪ್ಪು ಸೇರಿಸಿ, ಮೊಮ್ಮನನ್ನು ಮರದ ಬುಡದ ಮೇಲೆ ಕೂರಿಸಲು ಸಿದ್ಧರಾದಾಗ, ಮೃದುವಾದ ಕುರ್ಚಿಯನ್ನು ಪಡೆಯಲು ನಿರ್ಧರಿಸುತ್ತೇನೆ. ನಾನು ನಯವಾದ ಹಲಗೆಗಳ ಮೇಲೆ ಕುಳಿತು ಅಣ್ಣನೊಂದಿಗೆ ಹಾಡಬಹುದು. ನಾವು ಬಿಸಿಲಿನಲ್ಲಿ ಇರಬಹುದು. ಬಿಸಿಲು...

ತುಂಬಾ ಬಿಸಿಲು.

ನಾಳೆ ಗುಲಾಬಿ ಬಣ್ಣವನ್ನು ಕಲ್ಪಿಸಿಕೊಂಡು, ಚಕ್ರಗಳಿರುವ ಕುರ್ಚಿಯ ಬಗ್ಗೆ ಒಂದು ಹಾಡನ್ನು ಹಾಡುತ್ತೇನೆ. ನನ್ನ ತಲೆಯಲ್ಲಿ ಗುನುಗುವ ಶಬ್ದ ಜೋರಾಗುತ್ತಿದೆ. ಅದು ನನ್ನ ತಲೆಯ ಹೊರಗೆಯೂ ಕೇಳಿಸುತ್ತದೆ.

ಗೊಣಗುವುದು. ನರಳುವುದು. ಬಡಿಯುವುದು. ಸದ್ದು ಮಾಡುವುದು. ಗೋಳಾಟ. ಉಷ್....

ನಂತರ ಮೌನ.

ಸೂರ್ಯನ ಬೆಳಕಿನ ಬಿಸಿ ಹಳದಿ ಬಣ್ಣದಿಂದಾಗಿ, ಮೊಮ್ಮನ ಮುಖದ ಸೌಂದರ್ಯ ಕಣ್ಣೀರಿನ ಕಲೆಯಾಗಿದೆ ಎಂದು ನನಗೆ ಅನಿಸುತ್ತದೆ. ಅವಳು ದುಃಖಿತಳಾಗಿ ಕಾಣುತ್ತಾಳೆ. ಅವಳು ಮತ್ತೆ ಸಂತೋಷವಾಗಿರಲು ʻಅಣ್ಣ ಅವಳಿಗೆ ಕುರ್ಚಿ ಮಾಡುತ್ತಾನೆʼ ಎಂದು ನಾನು ಅವಳಿಗೆ ಹೇಳಲು ಬಯಸುತ್ತೇನೆ.

ನಾನು ಮೊಮ್ಮಳಿಗಾಗಿ ನನ್ನ ಹಾಡನ್ನು ಹಾಡಲು ಪ್ರಯತ್ನಿಸುತ್ತೇನೆ. ಆದರೆ ನನಗೆ ಶಬ್ದ ಬರುತ್ತಿಲ್ಲ. ಬಿಳಿ ಬಣ್ಣವು ನನ್ನನ್ನು ವಿನಾಶಕ್ಕೆ ಒಯ್ಯುತ್ತಿದೆ, ಮತ್ತು ನಾನು ನೀರಿನ ತಣ್ಣನೆಯ ನೀಲಿ ಬಣ್ಣವನ್ನು ಮುಟ್ಟಿದ್ದೇನೆ.

ನೀರಿಗೇನೋ ಬಿದ್ದ ಸಣ್ಣ ಸದ್ದು...

ನನ್ನ ಕಣ್ಣುಗಳು ತೆರೆದಾಗ, ನೀರಿನ ನೀಲಿ ಬಣ್ಣವು ಕಪ್ಪು ಬಣ್ಣವಾಗಿತ್ತು!!!

ಇಂಗ್ಲಿಷ್ ಮೂಲ: ಕ್ರಿಸ್ಟೀನ್ ಲ್ಯಾಕೊ, ಕನ್ನಡ ಅನುವಾದ: ಬಿ.ಆರ್. ಸತ್ಯನಾರಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.