ಮಧ್ಯಾಹ್ನದ ಸಣ್ಣ ಜೊಂಪು ನಿದ್ದೆ ಹತ್ತಿತ್ತಷ್ಟೆ, ಅಷ್ಟರಲ್ಲಿ ಸಾವಿಯಕ್ಕನ ಫೋನು ಜೋರು ಬಡಿದುಕೊಳ್ಳಲು ಶುರುವಾಗುತ್ತದೆ. ಸತತವಾಗಿ ಎರಡನೇ ಬಾರಿಗೆ ಜೋರಾಗಿ ಬಡಿದುಕೊಂಡು ಸ್ತಬ್ಧವಾದದ್ದು ಗಮನಿಸಿದ ರೇಣು,

‘ಇದೇನಪ್ಪಾ.. ಇವತ್ತು ಸುದ್ದಿಯಿಲ್ಲ! ಈಗ ಒಂದು ಗಂಟೆ ಮುಂದೆ ಕೊಕ್ಕರ್ಸಿಯ ಹಾಗೆ ಕಿರುಚಿ ಗಲಾಟೆ ಮಾಡಿತ್ತಲ್ಲವಾ?, ಮತ್ತೆ ಯಥಾಪ್ರಕಾರದಂತೆ ಒಂದು ರೌಂಡು ಪೂರ ಎಲ್ಲರಿಗೂ ಕೇಳಿಸುವಂತೆ ಬಾಯಿ ಬಡಿಬೇಕಿತ್ತಲ್ಲವಾ?’

‘ನಾನು ಇವತ್ತು ಸರೀ ಬಾಯಿಗೆ ಬಾಯಿ ಬೇರೆ ಕೊಟ್ಟಿದ್ದೆ. ಏನಾದರೂ ಹೆಚ್ಚು ಕಡಿಮೆ ಆಗಿರಬಹುದಾ?’ ರೇಣುವಿಗೆ ಒಮ್ಮೆಗೆ ಭಯ ಹತ್ತಿಕೊಂಡಿತು. ಹಾಗೇ ಸಣ್ಣಕೆ ಡವಗುಟ್ಟುವ ಎದೆಯ ಬಡಿತ ಇಟ್ಟುಕೊಂಡು ಕೋಣೆಯಿಂದ ಹೊರಗೆ ಬಂದಿದ್ದಳು .

ಸಾವಿಯಕ್ಕನ ಬೊಂಬಾಯಿ ಬಾಯಿಯಿಂದಾಗಿ ರೇಣುವಿಗೂ ನೆರೆಕರೆಯವರ ಜೊತೆ ಸಂಪರ್ಕ ಅಷ್ಟಕ್ಕಷ್ಟೇ. ಯಾರೂ ಈಚೆ ಬೇಲಿ ಬದಿಯಲ್ಲಿ ಬಿದ್ದು ಹುಟ್ಟಿದ ಒಂದು ಕರಿಬೇವು ಸಪ್ಪುಗೂ ಕೈ ಮುಟ್ಟಿಸುವಂತಿಲ್ಲ. “ಕೊಯ್ದ ಕೈಗೆ ಉಪ್ಪು ಕೂಡ ಹಾಕುವವಳಲ್ಲ ಈ ಸಾವಿಯಕ್ಕ” ಅಂತ ಹಿಂದೆಯಿಂದ ಜನರು ಆಡಿಕೊಳ್ಳುತ್ತಿದ್ದು ರೇಣುವಿನ ಕಿವಿಗೂ ಮುಟ್ಟಿತ್ತು. ಅವಳೇನು ಮಾಡೋದಿಕ್ಕೆ ಸಾಧ್ಯ? ಯಾರೇ ಕೆಲಸದವರು ಬರಲಿ, ಅವರಿಗೆ ಒಂಚೂರು ಸೊಂಟ ನಿಮಿರಿಸಲು ಸಾವಿಯಕ್ಕ ಬಿಡುತ್ತಿರಲಿಲ್ಲ. ಇತ್ತೀಚಿನವರೆಗೂ ಅವಳೇ ತೋಟಕ್ಕೆ ಹೋಗಿ ಕೆಲಸದವರನ್ನು ಮೇಯಿಸುತ್ತಿದ್ದದ್ದು. ಈ ಎರಡು ವರ್ಷದಿಂದೀಚೆ ಸಾವಿಯಕ್ಕನ ಗಂಟು ನೋವು ಜಾಸ್ತಿ ಆಗಿ, ಹತ್ತಿ ಇಳಿಯಲು ಸಾಧ್ಯವಾಗದೆ ತೋಟಕ್ಕೆ ಇಳಿಯುವುದು ಬಂದ್ ಮಾಡಿದ ಮೇಲೆ ಅವಳ ಬಾಯಿಯ ಸದ್ದು ಮತ್ತಷ್ಟು ಹೆಚ್ಚಾಗಿ ಅಂಗಳದ ಬದಿಯಿಂದಲೇ ತೋಟದವರೆಗೂ ಮದ್ದುಗುಂಡಿನಂತೆ ತೂರಿ ಹೋಗುತ್ತಿದ್ದದ್ದು.

ಆವತ್ತು ಮಕ್ಕಳನ್ನು ಶಾಲೆಗೆ ಕಳುಹಿಸಿ, ಬಟ್ಟೆ ಪಾತ್ರೆ ದನ ಕರು ಅಷ್ಟಾಗುವಾಗ ರೇಣುವಿಗೆ ತೋಟ ಕಡೆ ಮುಖ ಮಾಡಲು ಒಂಚೂರೂ ಪುರುಸೊತ್ತು ಸಿಕ್ಕಿರಲಿಲ್ಲ. ಹೊತ್ತೇರಿದರೂ ಸೊಸೆ ಮನೆಯೊಳಗೆ ಗಣಮಣ ಮಾಡಿಕೊಂಡಿರುವುದು ಸಾವಿಯಕ್ಕನ ಸಿಟ್ಟಿಗೆ ಮತ್ತಷ್ಟು ಉರಿ ತಾಗಿಸಿದಂತಾಯಿತು.

“ನಾನು ಯಾರಿಗೆ ಇಷ್ಟೆಲ್ಲ ಬಡಕೊಳ್ಳುವುದು? ನಾನೇನು ಹೋಗುವಾಗ ಹೊತ್ತುಕೊಂಡು ಹೋಗುತ್ತೇನಾ? ಇಷ್ಟು ದಿನ ಜತನದಲ್ಲಿ ಕಾಪಾಡಿದ್ದು, ನೀರಿನಲ್ಲಿ ಹುಣಸೆ ತೊಳೆದಂತಾಗಿ ಬಿಡುತ್ತದೆ ”

ಎಂದಿನಂತೆ ವರಾತ ಶುರು ಮಾಡುತ್ತಾ ಒಂದು ಸುತ್ತು ಗಸ್ತು ತಿರುಗುತ್ತಾ,

“ಹೇ ರೇಣು ಎತ್ತ ಹೋದನೇ?”

ಕರೆದುಕೊಂಡು ಹಿತ್ತಲವರೆಗೂ ಬಂದಾಗ, ಅವಳಿನ್ನೂ ನೇಕೆಯ ಮೇಲೆ ಬಟ್ಟೆ ಹರವಿ ಹಾಕುತ್ತಿದ್ದಳು.

“ಒಂದು ತೋಟದಲ್ಲಿ ಕೆಲಸ ಆಗಿಲ್ಲ, ತೋಟಕ್ಕೆ ಇಳಿಯುವವರಿಲ್ಲ. ಹೀಗಾದರೆ ಮಂಗ ತೋಟವನ್ನು ಗುತ್ತಿಗೆ ತಕೊಳುತ್ತದೆ, ಅವರಿವರು ಉಳಿದದ್ದನ್ನ ನುಂಗಿ ನೀರು ಕುಡಿತಾರೆ ಅಷ್ಟೇ”

ವಟವಟಗುಟ್ಟುತ್ತಾ ಬರುವಾಗ,

ಅಂಗಳದ ಈ ತುದಿಯಲ್ಲಿ ಇದ್ದ ನಿಂಬೆ ಹಣ್ಣಿನ ಗಿಡದಲ್ಲಿ ಅರ್ಧಕರ್ಧ ನಿಂಬೆ ಹಣ್ಣು ಮಾಯವಾದದ್ದು ಕಂಡದ್ದು.
ಅರೆ! ಮೊನ್ನೆಯವರೆಗೆ ರಾಶಿ ಹಣ್ಣು ಜಾಲರಿಯಂತೆ ತೂಗಿಕೊಂಡು ಇತ್ತಲ್ಲವಾ?!
ನಿನ್ನೆಯೊಂದೇ ನಾನು ಮನೆಯಲ್ಲಿ ಇಲ್ಲದ್ದು!
ಸಾವಿಯಕ್ಕನ ಪಿತ್ತ ನೆತ್ತಿಗೇರಿತು!
ಎರಡು ವರ್ಷದ ಹಿಂದೆ ಬಿದ್ದು ಹುಟ್ಟಿದ ನಿಂಬೆ ಗಿಡ ಅದು. ಇತ್ತೀಚೆಗೆ ಸೊಂಪಾಗಿ ಬೆಳೆದು ಹೂ ಬಿಟ್ಟು, ಕಾಯಿ ಕಚ್ಚಿ ಕುಳಿತ್ತಿದ್ದವು. ಈಗ ನೋಡಿದರೆ ಅದರಲ್ಲಿ ಎಲೆಯೇ ಮುಚ್ಚಿ ಹೋಗುವಷ್ಟು ರಾಶಿ ರಾಶಿ ನಿಂಬೆ ಹಣ್ಣು. ತಾನೇ ಹೋಗಿ ಹಣ್ಣನ್ನೆಲ್ಲಾ ಕೊಯಿದು ಎರಡು ಭರಣಿ ಉಪ್ಪಿನಲ್ಲಿ ಹಾಕಿಟ್ಟಿದ್ದಳು. ದಾರಿ ಬದಿಯ ಬೇಲಿಗೆ ಅಂಟಿಕೊಂಡಿದ್ದರಿಂದ ಈ ನಿಂಬೆ ಗಿಡ ದಾರಿ ಹೋಕರ ಕಣ್ಣು ಕುಕ್ಕುವಂತ್ತಿತ್ತು.

ಆ ದಿನ ಬೇಲಿ ಬದಿಯಲ್ಲಿ ಸೊಪ್ಪೇ ಕಾಣದಷ್ಟು ತುಂಬಿಕೊಂಡ ಹಳದಿ ನಿಂಬೆ ಹಣ್ಣು ನೋಡಿ ಆಚೆಮನೆ ನಳಿನಿಗೆ ಆಸೆ ಆಗಿ ಬಾಯಲ್ಲಿ ನೀರು ಬಂದಿತ್ತು. ಪೇಟೆಯಲ್ಲಿ ಒಂದು ನಿಂಬೆ ಹಣ್ಣಿಗೀಗ ಹತ್ತು ರುಪಾಯಿ! ಅಷ್ಟು ಕೊಟ್ಟು ಉಪ್ಪಿನಕಾಯಿ ಹಾಕಿದರೆ ಅಸಲು ಆಗಲಿಕ್ಕೆ ಉಂಟಾ?

ಒಂದು ಸಲ ಸಾವಿಯಕ್ಕನ ಮನೆಗೆ ಹೋದರೇನು? ಹೋಗಿ ಮಾತಾಡಿಸಿದ ಹಾಗೂ ಆಯಿತು, ನಿಂಬೆ ಹಣ್ಣು ಕೇಳಿದ ಹಾಗೂ ಆಯಿತು ಅಂತ ಮನೆಯಲ್ಲಿದ್ದ ಒಂದು ಪಾಡ ಬಾಳೆಹಣ್ಣು ತಕೊಂಡು ಸಾವಿಯಕ್ಕನ ಮನೆಗೆ ಬಂದಿದ್ದಳು. ಗಂಡ ರಾಘುವಿಗೆ ಹೇಳಿದರೆ, “ನೀನು ಅಲ್ಲಿಗೆ ಹೋಗುದೇ ಬೇಡ !”

ಅಂತ ವರಾತ ತೆಗಿತಾನೆ ಅಂತ ಚೆನ್ನಾಗಿ ಗೊತ್ತಿದ್ದ ಕಾರಣ ಗಂಡನಿಲ್ಲದ ವೇಳೆಯೇ ನೋಡಿ ಬಂದಿದ್ದಳು.
ಗೇಟು ತೆಗೆದು ಒಳಗೆ ಬಂದಾಗ ಸಾವಿಯಕ್ಕ ಜಗಲಿಯ ತಿಣೆಯಲ್ಲಿ ಕುಳಿತು ಕಾಲು ಅಲ್ಲಾಡಿಸುತ್ತಾ ತೋಟ ಕಡೆಗೆ ನೋಡುತ್ತಿದ್ದಳು.

“ಹೋ..ಏನು ಅಪರೂಪ ನಳಿನಿ.. ಸುಮ್ಮಗೆ ಬರಲಿಕ್ಕಿಲ್ಲ ಅಲಾ ನೀ..?”

“ಓಯ್..ರೇಣು ನೋಡಿಲ್ಲಿ ನಳಿನಿ ಬಂದಿದಾಳೆ “

ಸೊಸೆಯನ್ನು ಕರೆದಳು.
“ ಹೀಂಗೆ ಸುಮ್ಮಗೆ ನಿಮ್ಮನ್ನ ನೋಡಿಕೊಂಡು ಹೋಗುವ ಹೇಳಿ ಬಂದೆ, ಬೇರೇನಿಲ್ಲ.”
‘ನಾನು ಮಂಗ ತೋಟಕ್ಕೆ ಬಂದರೆ ಗೊತ್ತಾಗಲಿ ಅಂತ ಹೀಗೆ ಜಗಲಿಯಲ್ಲಿ ಕೂತದ್ದು. ಅದರ ದೆಸೆಯಿಂದ ತೋಟದಲ್ಲಿ ಒಂದು ಬೊಂಡ ಉಂಟಾ? ಬಾಳೆ ಉಂಟಾ?’

ಸಾವಿಯಕ್ಕ ಔಪಚಾರಿಕವೆಂಬಂತೆ ಮಾತಾಡತೊಡಗಿದಳು.

ನಾನು ತೋಟಕ್ಕೆ ಹೋದರೆ ನನ್ನ ವಾಸನೆಯಿಂದಲೇ ಮಂಗಕ್ಕೆ ಗೊತ್ತಾಗಿಬಿಡುತ್ತಿತ್ತು. ಒಂದೇ ಒಂದು ಮಂಗ ತೋಟಕ್ಕೆ ನುಗ್ಗುವ ಸಾಹಸ ಮಾಡುತ್ತಿರಲಿಲ್ಲ. ಇಲ್ಲದಿದ್ದರೆ ಆಚೆ ತೋಟದ ವಾಸಣ್ಣ ಅವರ ತೋಟದ ಮಂಗಗಳ ಓಡಿಸಿ ಸೀದ ಕಳಿಸುವುದೇ ನಮ್ಮ ತೋಟಕ್ಕೆ. ಬೋ… ಮಗ. ಅವ ಅನ್ನ ತಿನ್ನುದಾ.. ಹೇ.. ತಿನ್ನುದಾ ಅಂತ ಅನುಮಾನ ನಂಗೆ. ಹೊಟ್ಟೆಲಿ ಒಂದಿಷ್ಟಾದರೂ ಕೈಂಪೆ ಉಂಟಾ ಅವನಿಗೆ? ನಾನು ಆದಷ್ಟು ಪಾರ ಕಾದು ಮಂಗಗಳ ಓಡಿಸಿದ ಕಾರಣ ಒಂದೆರಡು ಗೊನೆ ಬಾಳೆಹಣ್ಣು ಸಿಗ್ತಿತ್ತು! ಈಗ ತೋಟಕ್ಕೆ ಇಳಿಯದೆ ವರ್ಷ ಎರಡಾಯಿತು.

ಹಾಗಂತ ಈ ಶುಗರ್ನಿಂದ ನಂಗೇನಾದರೂ ಬಾಳೆ ಹಣ್ಣು ತಿನ್ನಲಿಕ್ಕೆ ಉಂಟಾ? ಇಷ್ಟು ಕಷ್ಟಪಟ್ಟು ಮಾಡಿದ್ದು ಹಾಳಾಗಬಾರದಲ್ಲ! ಅಷ್ಟೇ ನನ್ನ ಕಕ್ಕುಲಾತಿ.

“ಬಾಳೆ ಹಣ್ಣು ಯಾಕೆ ತರೋಕೆ ಹೋದೆ? ನಾನಂತೂ ತಿನ್ನುದಿಲ್ಲ. ಮನೆ ಖರ್ಚಿಗೆ ಕುರೆ ತಿಂದು ಬಿಟ್ಟದ್ದು ಸಿಗ್ತದೆ. ಅದಕ್ಕೇನು ತೊಂದರೆ ಇಲ್ಲ.

ಹೋಗು..ರೇಣು ಕರೀತಿದ್ದಾಳೆ. ಬಾಯಾರಿಕೆ ಕುಡಿ.” ಅನ್ನುತ್ತಾ, ಅದಾ…ಚ್ಚೂ..ಚ್ಚೂ..ಅಂತ ಕುರೆ ಬರದಿದ್ದರೂ ಸಾವಿಯಕ್ಕ ಸದ್ದು ಮಾಡತೊಡಗಿದಳು.
ರೇಣು ಕೊಟ್ಟ ನಿಂಬೆ ಶರಬತ್ತು ಕುಡಿಯುತ್ತಾ,

“ಈ ಸಲದ ಉಪ್ಪಿನಕಾಯಿಗೆ ಮಾವಿನ ಮಿಡಿಯೇ ಸಿಕ್ಕಿಲ್ಲ. ಒಂದಷ್ಟು ನಿಂಬೆ ಹಣ್ಣು ಸಿಗಬಹುದಾ ರೇಣು?”

ಅಡುಗೆ ಮನೆಗೆ ಬಂದು ಮೆಲ್ಲನೆ ಪಿಸಿಪಿಸಿ ಸ್ವರದಲ್ಲಿ ನಳಿನಿ ಕೇಳಿದ್ದಳು.

ಅತ್ತೆಯ ಕಣ್ಣು ಎಷ್ಟು ಸೂಕ್ಷ್ಮ? ಎಂತ ಮಾಡುದು ಈಗ? ಮನೆಯವರೆಗೆ ಕೇಳಿಕೊಂಡು ಬಂದವರನ್ನು ಬರಿಗೈಲಿ ಕಳಿಸುದು ಹೇಗೆ? ಸಾಯಲಿ ಒಂದತ್ತು ಕೊಟ್ಟು ಕಳಿಸುವಾ ಅಂತ ಮನಸಾದರೂ, ಗಿಡದಲ್ಲಿ ಒಂದು ನಿಂಬೆ ಹಣ್ಣು ಕಾಣೆ ಆದರೂ ಸಾವಿಯಕ್ಕಂಗೆ ಗೊತ್ತಾಗಿ ರಣರಂಪ ಮಾಡಿ ಬಿಡುತ್ತಿದ್ದಳು. ನೆರೆಮನೆಯವರಿಗೆ ಉಪಕಾರ ಮಾಡಲು ಹೋಗಿ ನಾನು ಅತ್ತೆಯ ಬೈಗುಳಕ್ಕೆ ಯಾಕೆ ಗುರಿಯಾಗ ಬೇಕೆಂದು ಹೆದರಿ,

“ನನ್ನದೇನು ಇಲ್ಲಿ ನಡಿಯುದಿಲ್ಲ ನಳಿನಿಯಕ್ಕ ಅತ್ತೆಯನ್ನೇ ಒಮ್ಮೆ ಕೇಳಿ ನೋಡಿ ಅಯ್ತಾ” ಅಂತ ಸದ್ದು ಹೊರಡಿಸದೇ ಮೂಕಾಭಿನಯ ಮಾಡಿ ಸಾಗ ಹಾಕಿದ್ದಳು.

ನೋಡುವ, ಹೇಗೂ ಬಂದಾಗಿದೆ. ಒಂದು ಮಾತು ಕೇಳಿಯೇ ಹೋಗುವಾ ಅಂತ ಗಟ್ಟಿ ಮನಸು ಮಾಡಿ,

“ಸಾವಿಯಕ್ಕ ಈ ಸಲ ನಿಂಬುಳಿ ಒಳ್ಳೆ ಹಿಡಿದಿದೆ ಅಲ? ಅಂಗಡಿಗೆ ಕೊಡುವುದಿದ್ದರೆ ನಂಗೊಂದೆರಡು ಕೆ.ಜಿ. ಬೇಕಿ… ತ್ತು..’’

ಇನ್ನೂ ಮಾತು ಪೂರ್ತಿ ಆಗಿರಲಿಲ್ಲ,
ಹೋ.. ನಂಗೆ ಆಗಲೇ ಅಂದಾಜಿ ಆಯಿತು. ನೀವೆಲ್ಲ ಕೆಲಸ ಇಲ್ಲದೆ ಬರುವ ಅಸಾಮಿಗಳು ಅಲ್ಲ ಅಂತ. ವಿಷಯ ಇದು? !

ನೋಡಿ, ಹೀಗೆ ಗೊಂಚಲು ಹಿಡಿಯುವುದಕ್ಕೂ ಒಂದು ಪೊಲ್ಸು ಬೇಕು ಅಂತಾರೆ. ಹಿಂಗೆ ಧಾರಾಳ ಕೊಟ್ಟು ಬೋಳು ಆದವರ ಕತೆ ನಂಗೆ ಗೊತ್ತಿಲ್ಲದ್ದೇನಲ್ಲ. ಕೈಚಾಚಿ ಕೊಟ್ಟರೆ ಅಷ್ಟೇ ತಗೊಳಬೇಕು, ಇದು ನನ್ನ ಗುಣಪ್ಪ. ಇದರಿಂದ ಯಾರು ನಿಷ್ಟುರ ಆದರೂ ನಾ ಏನು ಮಾಡುದು?!

ಸಾವಿಯಕ್ಕ ಹೇಳುತ್ತಲೇ ಇದ್ದಳು.. ಬಂದ ದಾರಿಗೆ ಸುಂಕ ಇಲ್ಲವೆನ್ನುವಂತೆ, ಹೋಗಿ ಹೋಗಿ ಬಾಯಿ ಬಡುಕಿಯ ಬಾಯಿಗೆ ಕೈ ಹಾಕಿದೆ ಅಲ ಅಂತ ತನಗೆ ತಾನೆ ಬೈದು ಕೊಳ್ಳುತ್ತಾ ಅಂಗಳ ದಾಟಿ ನಳಿನಿ ಹೋಗುವುದನ್ನು ರೇಣು ಬೇಸರದಿಂದ ನೋಡತೊಡಗಿದಳು.

ಛೆ! ಮೆಲ್ಲಗೆ ಒಂದು ತೊಟ್ಟೆಯಷ್ಟು ನಿಂಬೆ ಹಣ್ಣುಕೊಯಿದು ಕೊಡಬಹುದಿತ್ತು. ಗೊತ್ತಾದರೆ ಬಿದ್ದು ಕರಗಿದೇ ಅಂತ ಹೇಳಿಬಿಡಬಹುದಿತ್ತೇನೋ ಅಂತ ಒಮ್ಮೆ ಅನ್ನಿಸಿದರೂ,

‘ಬೇಡ..ಬೇಡ..!ಒಮ್ಮೆ ಹೀಗೆ ಕದ್ದುಮುಚ್ಚಿ ಕೊಟ್ಟು ಅಭ್ಯಾಸ ಆಗಿ ಬಿಟ್ಟರೆ, ಮತ್ತೆ ಅದನ್ನೇ ಅವರು ಅಭ್ಯಾಸ ಮಾಡಿಕೊಂಡು ಬಿಟ್ಟರೆ..? ಸಸಾರ ಆಗ್ತದೆ ಮತ್ತೆ’

ಬೇಡ ! ಕೊಡದ್ದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು ಅಂತ ತನ್ನನ್ನು ಸಮಾಧಾನ ಮಾಡಿಕೊಂಡಳು.
‘ಛೆ! ಅಂತೂ ಈ ಹೆಂಗಸಿನ ವಯಿವಾಟಿಂದ ನೆರೆಕರೆಯವರು ಯಾರೂ ಆಗಿ ಬರಲಿಕ್ಕಿಲ್ಲ. ನಾಡಿದ್ದು ಇದು ಸತ್ತರೆ ಅದರ ಬಾಯಿಗೆ ಒಂದು ಬೊಟ್ಟು ನೀರೂ ಯಾರು ಕೊಡಲಾರರು. ಎಂತ ಒಂದು ಘಾಟಿ ಹೆಂಗಸಪ್ಪ.. ! ಇದರ ದೆಸೆಯಿಂದ ನನಗೂ ನೆರೆಕರೆ ಇಲ್ಲದಾಗಿದೆ. ಇತ್ತ ಅತ್ತೆನ ದೂರುವ ಹಾಗೂ ಇಲ್ಲ, ವಹಿಸಿಕೊಳ್ಳುವ ಹಾಗೂ ಇಲ್ಲ, ಒಟ್ಟಿನಲ್ಲಿ ನನಗೊಂದು ಇಕ್ಕಟ್ಟು. ಇವರಿಗೊಂದು ಮನೇಲಿ ಏನು ಎತ್ತ ನಡೀತುಂಟು ಒಂದೂ ಬೇಕಿಲ್ಲ. ಏನಾದರೂ ಹೇಳಿದರೆ ಅಮ್ಮನಿಗೆ ಎದುರಾಡಲು ಒಪ್ಪುವುದಿಲ್ಲ. ತನ್ನ ಅಸಾಹಯಕತೆಗೆ ತನ್ನನ್ನೇ ಹಳಿದುಕೊಳ್ಳುತ್ತಾ, ಮಕ್ಕಳು ಶಾಲೆಯಿಂದ ಬರುವ ಮುಂಚೆ ಹಾಲು ಕರೆದುಕೊಂಡು ಬರುವೆ , ಮತ್ತೆ ಈ ಅಜ್ಜಿನ ಪಿರಿಪಿರಿ ಯಾರು ಕೇಳುವುದು?’

ಅಂತ ಅಂದುಕೊಳ್ಳುತ್ತಾ ರೇಣು ಚೆಂಬು ಹಿಡಿದುಕೊಂಡು ಹಟ್ಟಿ ಕಡೆ ಹೊರಟಳು.
ಆ ದಿನ ಸಣ್ಣಕೆ ಮಳೆ ಹನಿಯುತ್ತಿತ್ತು. ಜೋರು ಮಳೆ ಬಂದು ಗಾಳಿಗೆ ಮರ ಬಿದ್ದರೆ ಮನೆಯ ಮಾಡಿಗೆ ಬೀಳಬಹುದು. ಯಾಕೆ ಸುಮ್ಮಗೆ ರಿಸ್ಕ್ ಅಂತ ಪಕ್ಕದ ಮನೆಯ ರಾಘಣ್ಣ ಅವರ ಅಂಗಳದ ತುದಿಯಲ್ಲಿದ್ದ ಮರದ ಗೆಲ್ಲನ್ನು ಕಡಿಯುತ್ತಿದ್ದರು. ಅವರದ್ದು ಸಾವಿಯಕ್ಕನ ಜಾಗೆಗೆ ಅಂಟಿಕೊಂಡಿರುವ ಜಾಗೆ. ಜಗಲಿಯಲ್ಲಿ ಕುಳಿತ್ತಿದ್ದ ಸಾವಿಯಕ್ಕನಿಗೆ ಮರಕಡಿಯುವ ಸದ್ದು ಕೇಳಿಸಿತು. ಮಗ ಆಫೀಸಿಗೆ ಹೋದ ಮೇಲೆಯೇ ಇವರು ನಮ್ಮ ತೋಟದ ಮರ ಕಡಿಯುತ್ತಿದ್ದಾರೆಂಬ ಗುಮಾನಿಯಲ್ಲಿ ಜೋರು ಬೊಬ್ಬೆ ಹೊಡೆಯತೊಡಗಿದಳು. ಸೊಸೆ ಬೇರೆ ಮಕ್ಕಳ ಶಾಲೆಗೆ ಹೋಗಿ ಬರುತ್ತೇನೆ ಅಂತ ಹೋಗಿದ್ದಳು. ಮನೆಲಿ ಸಾವಿಯಕ್ಕ ಒಬ್ಬಳೆ.
“ಯಾರದು ಸೊಯಗೆಟ್ಟವರು ನಮ್ಮ ಮರಕಡಿಯೋದು,ನಿಮ್ಮ ಕುಲೆ ಹಿಡಿಯೋಕೆ” ಅಂತ ಮಾಮೂಲಿನ ರೆಕಾರ್ಡೆಡ್ ಬೈಗುಳ ಓತಪ್ರೋತವಾಗಿ ಹರಿಯತೊಡಗಿತು. ಅವಳ ಬೊಬ್ಬೆಯನ್ನು ಮೀರಿ ಮರ ಕಡಿಯುವ ಸದ್ದು ಕೇಳಿಸುತ್ತಲೇ ಇತ್ತು. ಅವಳಿಗೆ ಮತ್ತೆ ಸುಮ್ಮನೆ ಕೂರಲಾಗಲಿಲ್ಲ. ಬಾಗಿಲು ಮುಂದು ಮಾಡಿ ದೊಣ್ಣೆ ಊರಿಕೊಂಡು ತೋಟದ ತುದಿಯವರೆಗೂ ಬಾಯಿ ಬಡಿದುಕೊಂಡೇ ಹೋಗತೊಡಗಿದಳು.
ಮರ ನಮ್ಮದಲ್ಲ ಅಂತ ಗೊತ್ತಾದ ತಕ್ಷಣ ಅವಳ ಸ್ವರ ತಗ್ಗಿತು.

ಇಷ್ಟೊತ್ತು ಬೊಬ್ಬೆ ಹೊಡೆದದ್ದು ತಾನು ಅಲ್ಲ ಅನ್ನುವಂತೆ, ಕ್ಷೀಣ ಸ್ವರದಲ್ಲಿ,

“ಹೋ.. ಇದು ನಿಮ್ಮ ಮರ ಕಡಿಯೋದ? ನಾ ನಮ್ಮ ಮರ ಅಂತ ಗ್ರೇಸಿದೆ. ನಾವು ನೆರೆಕರೆಯವರು ಚೆಂದ ಇರಬೇಕಲ? ಯಾಕೆ ಯಾವಾಗಲೂ ಜಗಳ ಜಟ್ಟಿ, ಹೀಗೇ ನೋಡಿ ಹೋಗುವ ಹೇಳಿ ಬಂದೆ” ಅಂತ ತೇಪೆ ಹಾಕಲು ಶುರು ಮಾಡಿದ್ದಳು.

“ನೀವು ಹೀಗೆ ಬಾಯಿ ಬಡಕೊಳ್ಳುವುದು ಎಷ್ಟು ಸರ್ತಿ ಆಯಿತು? ನಿಮ್ಮ ಮಾತಿನ ಮೇಲೆ ನಿಮಗೆ ನಿಗಾ ಉಂಟಾ? ಮಾತಾಡುವಾಗ ಸ್ವಲ್ಪ ಹಿಂದೆ ಮುಂದೆ ನೋಡಿಕೊಳ್ಳಬೇಕು. ನೆರೆಕರೆಯವರು ಚೆನ್ನಾಗಿರಬೇಕು ಅಂದರೆ ನಿಮ್ಮ ಬಾಯಿ ಮೊದಲು ಚೆನ್ನಾಗಿಟ್ಟುಕೊಳ್ಳಿ, ನಮಗೂ ಮಾತಾಡಲಿಕ್ಕೆ ಬರ್ತದೆ ಸಾವಿಯಕ್ಕ!”

ಮೊದಲೇ ಮರದ ಗೆಲ್ಲು ಕಡಿದು ಸುಸ್ತು ಬೇರೆ ಆಗಿತ್ತು. ಅದರ ಜೊತೆಗೆ ಸಾವಿಯಕ್ಕನ ಬಾಯಿ ಕೇಳಿ ರಾಘಣ್ಣನ ಸಿಟ್ಟು ಏರಿತ್ತು.

“ಸುಡಲಿ, ಆ ಅಜ್ಜಿಯೊಟ್ಟಿಗೆ ಎಂತ ಮಾತು?, ಅದರ ಬುದ್ದಿ ಗೊತ್ತುಂಟಲ”

ಹೆಂಡತಿ ನಳಿನಿ ಎಡೆಗೆ ಬಾಯಿ ಹಾಕಿ ಸಂಧಾನ ಮಾಡತೊಡಗಿದಳು.
ಸದ್ಯ! ಮರ ನಮ್ಮದಲ್ಲ. ಹೀಗೆ ಒಮ್ಮೊಮ್ಮೆ ಬಾಯಿ ಮಾಡಿಕೊಂಡು ಅಕ್ಕಪಕ್ಕದವರನ್ನು ಎಲ್ಲಿ ಬೇಕೋ ಅಲ್ಲಿ ಇಟ್ಟಿರಬೇಕು. ಆಗ ಅವರಿಗೂ ಕ್ಷೇಮ, ನಮಗೂ ಕ್ಷೇಮ ಅಂತ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾ ಸಾವಿಯಕ್ಕ ವಾಪಾಸು ಬಂದವಳೇ ತಿಣೆಯಲ್ಲಿ ಉಸ್ಪಪ್ಪಾ! ಅನ್ನುತ್ತಾ ಕೂತು ತುಸು ಸುಧಾರಿಸಿಕೊಂಡಳು. ಅಂಗಳದ ತುಳಸಿ ಕಟ್ಟೆಯ ತುಳಸಿ ಗಿಡದ ತುಂಬಾ ಹೂ ಬಿಟ್ಟಿತ್ತು. ಅದನ್ನು ಹಾಗೇ ಬಿಟ್ಟರೆ ಹುಳ ಮೇದು ಗಿಡವೇ ಸತ್ತು ಹೋಗಿ ಬಿಡುತ್ತದೆ. ಅದನ್ನು ಚಿವುಟ ಬೇಕು ಅನ್ನುತ್ತಾ ಎದ್ದು ಬರುವಾಗ, ಆಗಷ್ಟೇ ಶಾಲೆಯಿಂದ ಬಂದ ರೇಣುವಿಗೆ ವಿಷಯ ಗೊತ್ತಾಗಿ,

“ನಿಮಗೆ ಇದೆಲ್ಲ ಬೇಕಿತ್ತಾ ಅತ್ತೆ? ಯಾವಾಗ ನೋಡಿದರೂ ನೆರೆಕರೆಯವರೊಂದಿಗೆ ಕಾಲು ಕೆರೆದುಕೊಂಡು ಯಾಕೆ ಜಗಳಕ್ಕೆ ಹೋಗುತ್ತೀರಿ?ಏನಾದರೂ ಹೆಚ್ಚು ಕಮ್ಮಿ ಆದರೆ ಅವರೇ ಆಗಬೇಕು ತಾನೇ?”

ಸಹನೆ ಮೀರಿ ತುಟಿ ಹಾರಿ ಮಾತು ಹೊರಕ್ಕೆ ಬಿದ್ದಿತ್ತು.

“ಹಾ..ಹಾ..ಬಂದು ಬಿಟ್ಟಳು ನೋಡು! ನೀನು ನಾಕು ಜನರ ಮುಂದೆ ಒಳ್ಳೆಯವಳಾಗು.. ನಾನೀಗ ಕೆಟ್ಟವಳು. ನಿಮಗೆರಡಕ್ಕೂ ಆಸೆ ಬಾಸೆ ಒಂದೂ ಇಲ್ಲ. ಹಿಟ್ಟುನೂ ಬೂದಿನೂ ಎರಡು ಒಂದೇ, ತುಳಸಿ ಗಿಡದಲ್ಲಿ ಹೂ ತುಂಬಿ ಹುಳ ಹತ್ತಿದರೂ ಯಾರಿಗೂ ಕಣ್ಣಿಲ್ಲ, ಅಂಗಳದ ಕಡೆಯೇ ಗೇನ ಇಲ್ಲದವರಿಗೆ ಮನೆ ಮಾರು ಬೇಕಾ” ಅಂತ ಬುಸು ಬುಸು ಮಾಡುತ್ತಾ ತುಳಸಿ ಗಿಡದ ಹೂವನ್ನು ಚಿವುಟ ತೊಡಗಿದಳು.
ಇದಾಗಿ ಒಂದು ವಾರ ಕಳೆದಿರಲಿಲ್ಲ. ಸಾವಿಯಕ್ಕನ ಸೊಂಟ ನೋವು ಜಾಸ್ತಿ ಆಗಿತ್ತು. ಚೆಕಪ್ಪಿಗೆ ಅಂತ ಮಗ ಆಸ್ಪತ್ರೆಗೆ ಕರೆದುಕೊಂಡು ಹೋದ್ದು ಆಚೆ ಮನೆ ನಳಿನಿ ನೋಡಿದ್ದಳು. ಮೊನ್ನೆ ಹೇಗೂ ಕೇಳಿಯೂ ನಿಂಬೆ ಹಣ್ಣು ಕೊಟ್ಟಿರಲಿಲ್ಲ. ಇದೇ ಸರಿಯಾದ ಸಮಯ. ಪಕ್ಕದ ಮನೆಯ ತನ್ನ ಭಾವನ ಸೊಸೆಯನ್ನು ಕರೆಯ ಹತ್ತಿದಳು…

“ಏಯ್… ಸೋಮಿ.. ಬಾರೇ ಇಲ್ಲಿ.”

“ಎಂತತ್ತೆ…?”

ಅಡುಗೆ ಮನೇಲಿ ಯಾವುದೋ ಕೆಲಸದ ತುರ್ತಿನಲ್ಲಿದ್ದ ಸೌಮ್ಯ ಅಲ್ಲಿಂದಲೇ ಕೇಳಿದಳು.
“ಹೇ.. ಬಾರೇ.ಇಲ್ಲಿ ಬೇಗ.”
ಸಣ್ಣತ್ತೆ ಕರೆಯುವುದು ಕೇಳಿ.. ವಿಷಯ ಗಂಭೀರ ಇರಬೇಕು ಅಂದುಕೊಂಡು ಒಂದೇ ಗಳಿಗೆಯಲ್ಲಿ ಅಲ್ಲಿದ್ದಳು.

ವಿಷಯ ಕೇಳಿದ ಸೌಮ್ಯ ಅರೆಗಳಿಗೆಲಿ ಪ್ಲಾಸ್ಟಿಕ್ ತೊಟ್ಟೆ ಹಿಡಿದುಕೊಂಡು ನೆಗೆನೆಗೆಯುತ್ತಾ ಬಂದಳು.
ರೇಣುವಿನ ಅಡುಗೆ ಕೋಣೆಯಲ್ಲಿ ಮಿಕ್ಸರ್ ಗರ್ರ್.. ಅಂತ ದೊಡ್ಡಕೆ ಸದ್ದು ಮಾಡುತ್ತಿತ್ತು.

‘ಒಳ್ಳೆಯ ಸಮಯಕ್ಕೆ ಬಂದಿದ್ದೇವೆ ನಳಿನಿಯತ್ತೆ’ ಸೌಮ್ಯಗೆ ತುಸು ಧೈರ್ಯ ಬಂತು.

ಬೇಗ ಬೇಗ ಕೊಯಿದು ತೊಟ್ಟೆಗೆ ಹಾಕಿದಂತೆ ಒಂದು ಗಳಿಗೆಲಿ ತೊಟ್ಟೆ ಭರ್ತಿ ಆಯಿತು.
ಹೇಗೆ ಹಿಡ್ದಿದೆ ನೋಡು!,

“ಈ ಸಲ ದೀಪಾವಳಿಗೆ ಸಾವಿಯಕ್ಕನ ಮನೆಗೆ ಲೈಟಿಂಗ್ ಬೇಡ, ಬಲ್ಬು ಕೂರಿಸಿದಂತೆ ಉಂಟಲಾ” ಅಂತ ನಳಿನಿ ನಕ್ಕಳು.
ಅಲ್ಲ, ನಳಿನಿಯತ್ತೆ.. ಒಂದು ನಿಂಬೆ ಹಣ್ಣು ಯಾರಿಗೂ ಈ ಪಿಟ್ಟಾಸಿ ಅಜ್ಜಿ ಕೈಯೆತ್ತಿ ಕೊಡುದಿಲ್ಲ ಹೇಳಿದರೇ…?! ಬುಡದಲ್ಲಿ ಬಿದ್ದು ಕರಗಿ ಹೋಗಿದೆ ಹೇಗೆ ನೋಡಿ?!

ನಮ್ಮ ಅಮ್ಮ ಒಂದು ಗಾದೆ ಹೇಳ್ತಿದ್ದರು,

“ಕೊಳೆತು ಹೋದರೂ ಕೈ ಎತ್ತಿ ಕೊಡಲಾರೆ” ಅಂತ. ಹಾಗಾಗಿದೆ.

ಅಷ್ಟರಲ್ಲಿ ಮಿಕ್ಸರ್ ಸದ್ದು ನಿಂತಿತು, ಇಬ್ಬರು ತಮ್ಮ ತುಂಬಿದ ತೊಟ್ಟೆಯನ್ನು ಹಿಡಿದುಕೊಂಡು ಬೇಲಿ ದಾಟಿ ಸರಸರನೇ ಹೋಗಿದ್ದು ಯಾರೂ ಕಂಡಿರಲಿಲ್ಲ.

“ಇಲ್ಲೇ ..ಕೆಲಸ ಮಾಡಿಕೊಂಡು ಇದ್ದರೂ ನಿನ್ನ ಕಣ್ಣಿಗೂ ಬೀಳಿಲ್ಲವಾ ಇದು? ಎಷ್ಟು ನಿಗಾ ಇರಬಹುದು ನಿಂಗೆ? ಇವತ್ತು ನಿಂಬೆ ಹಣ್ಣು, ನಾಳೆ ಮನೆಯೊಳಗೆ ನುಗ್ಗಿದರೂ ನಿಂಗೆ ಗೋಚಾರ ಇರಲಾರದು. ನಾನು ಇರುವವವರೆಗೂ ಹೇಗೋ ನಡೆಯುತ್ತದೆ. ಮುಂದೆ ಹೇಗೋ..ಏನೋ..?”

ಸಾಕಾಗಿತ್ತ ರೇಣುವಿಗೂ ಇದನ್ನು ಕೇಳಿ..ಕೇಳಿ. ಯಾವಾಗಲೂ ತಾನಿದ್ದರಷ್ಟೇ ನಮ್ಮ ಬದುಕು ಸಾಗುವುದು ಅನ್ನುವ ಡೈಲಾಗ್ ಎಷ್ಟು ಅಂತ ಕೇಳುವುದು?

“ಹೋದರೆ ಹೋಯಿತು. ಅಷ್ಟು ದೊಡ್ಡ ಅನಾಹುತಾ ಏನಾಯಿತು ಈಗ? ಅದು ಬಿದ್ದು ಕರಗಿ ಹೋಗುವಂತದ್ದು ತಾನೇ? ಬದುಕೇ ಶಾಶ್ವತ ಅಲ್ಲ ಅಂತೆ, ಇನ್ನು ಒಂದೆರಡು ನಿಂಬೆ ಹಣ್ಣು ತಕೊಂಡು ಹೋಗಿ ಹೆಚ್ಚೆಂದರೆ ಉಪ್ಪಿನಕಾಯಿ ಹಾಕಬಹುದು ಬಿಟ್ಟರೆ, ಉಪ್ಪರಿಗೆ ಕಟ್ಟಲು ಸಾಧ್ಯ ಇಲ್ಲ.

ನೀವು ಮರ್ಯಾದೆಯಿಂದ ಆಚೆಮನೆ ಈಚೆಮನೆಯವರಿಗೆ ಕರೆದು ಕೊಟ್ಟಿದ್ದರೆ ಇಷ್ಟೆಲ್ಲಾ ಆಗ್ತಾ ಇತ್ತಾ…?

ನಾನು ನಿಮ್ಮ ಮನೆ ವಸ್ತು ಯಾವಾಗ ಕಳುವು ಆಗ್ತದೆ ಅಂತ ಪಾರ ಕಾಯಲಿಕ್ಕೆ ಬಂದ ಜನ ಅಲ್ಲ ತಿಳುಕೊಳ್ಳಿ” ಅಂತ ಹೇಳಿ ದಡಕ್ಕನೆ ರೂಮಿಗೆ ಹೋಗಿ ಹಾಸಿಗೆ ಮೇಲೆ ಸುಮ್ಮಗೆ ಬಿದ್ದುಕೊಂಡಳು ರೇಣು.

ಸಾವಿಯಕ್ಕ ವಟಗುಟ್ಟಿಕೊಂಡೇ ಆಚೀಚೆ ಹೋಗುವುದು ಕೇಳುತ್ತಿತ್ತು. ಎಷ್ಟೋ ದಿನದ ಮೇಲೆ ಬಾಯಿಗೆ ಬಾಯಿ ಕೊಟ್ಟಿದ್ದಳು. ಸ್ವಲ್ಪ ನೆಮ್ಮದಿಯೆನ್ನಿಸಿತು ರೇಣುವಿಗೆ. ಆ ಖುಷಿಗೋ, ಇಷ್ಟೊತ್ತು ನೆತ್ತಿಗೆ ಬಿಸಿಲು ಬಿದ್ದದ್ದಕ್ಕೋ ಏನೋ, ಹಾಸಿಗೆಗೆ ಬೆನ್ನು ತಾಗಿಸಿದ ಸ್ವಲ್ಪ ಹೊತ್ತಿನಲ್ಲಿ ಸಣ್ಣಕೆ ಜೊಂಪು ಹತ್ತಿತ್ತು ಅಷ್ಟೆ. ಅಷ್ಟರಲ್ಲಿ ಸಾವಿಯಕ್ಕನ ಪೋನು ಎರಡನೇ ಸಾರಿ ಹೊಡೆದು ನಿಂತಿದ್ದು.

ಸೋಫಾದ ಮೇಲೆ ಸುರುಂಡಿ ಮಲಗಿದ್ದಾರೆ! ತನ್ನ ಮಾತು ಬೇಸರ ತರಿಸಿರಬಹುದೇ? ತಾನು ಏನೂ ಹೇಳಬಾರದಿತ್ತೇನೋ? ಏನೇ ಅವರು ಮಾಡಿದರು ಮನೆಗಾಗಿ ತಾನೆ? ಅವರಿಗೆ ನಾವಲ್ಲದೆ ಬೇರೆ ಯಾರಿದ್ದಾರೆ? ಹೀಗೆಲ್ಲ ಮಲಗಿದ್ದನ್ನು ತಾನು ಈವೆರೆಗೂ ನೋಡಿದ್ದಿಲ್ಲ ಅಲಾ?

ಎಂತ ಮಾಡುದು? ಏಳಿಸಿ ನೋಡುವುದಾ? ಈಗ ಇಷ್ಟುದ್ದ ಬಾಯಿ ಕೊಟ್ಟು ಬಂದಿರುವೆ. ತಾನೇ ಈಗ ಮಾತಾಡಿದರೆ…? ಹಿಗ್ಗಾಮುಗ್ಗ ಮತ್ತೆ ಬೈದರೆ? ಮತ್ತೆ ಪುನಃ ಮನಸು ಹಾಳು? ಎಂತ ಮಾಡುವುದು? ರೇಣುಗೆ ತಾಕಲಾಟ ಶುರುವಾಗಿದೆ.

ಇರಲಿ, ಈ ಸರ್ತಿ ಎಬ್ಬಿಸಿ ಬಿಡುವೆ. ಏನಾದರೂ ಹೆಚ್ಚು ಕಮ್ಮಿಆಗಿದ್ದರೆ? ಶಿವ..ಶಿವ… ಇನ್ನು ಮುಂದೆ ಇವಳು ಏನು ಹೇಳಿದರೂ ಬಾಯಿ ಮುಚ್ಚಿಕೊಂಡೇ ಇದ್ದು ಬಿಡುವೆ. ಏನೂ ಆಗದಿದ್ದರೆ ಸಾಕು ಅಂತ ನೆನಪಿಗೆ ಬರುವ ದೇವರನ್ನೆಲ್ಲ ನೆನೆಯುತ್ತಾ, ಅತ್ತೇ..ಅತ್ತೆ.. ಮೆತ್ತಗೆ ಕರೆದಳು. ಸುದ್ದಿಯೇ ಇಲ್ಲ!

ದೇವರೇ…ಎಂತ ಮಾಡುದು?ಆಚೆ ಈಚೆ ಅಲುಗಾಡಿಸಿದರೂ ಸದ್ದು ಇಲ್ಲ. ಮೂಗಿನ ಹತ್ತಿರ ಕೈ ಇಟ್ಟು ನೋಡಿದಳು. ಸದ್ಯ! ಉಸಿರಾಡುತ್ತಿದ್ದಾರೆ. ಈಗ ಯಾರನ್ನು ಕರೆಯುವುದು? ರೇಣುವಿಗೆ ಕೈಕಾಲು ಬಿದ್ದು ಹೋದಂತೆ ಅನ್ನಿಸುತ್ತಿದೆ. ಇವರನ್ನು ಕರೆದು ಅವರು ಬರುವಷ್ಟರಲ್ಲಿ ಮತ್ತೆ ಹೋಗಿ ಬರುದಕ್ಕೆ ಒಂದು ಗಂಟೆಯಾದರೂ ಬೇಕು. ಬೇರೆ ವಿಧಿಯಿಲ್ಲದೆ ಆಚೆಮನೆ ರಾಘಣ್ಣನಿಗೆ ಫೋನಾಯಿಸಿ ಒಂದೇ ಉಸುರಿನಲ್ಲಿ ವಿಷಯ ಅರುಹಿದ್ದಳು. ನಿಮಿಷದೊಳಗೆ ಅವರ ಕಾರು ಅಂಗಳಕ್ಕೆ ಬಂದು ನಿಂತಿತ್ತು.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೋಹನ್ ಆಸ್ಪತ್ರೆಗೆ ಬಂದಾಗಿತ್ತು. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಕೂತಿದ್ದಾರೆ. ಸೌಮ್ಯ, ನಳಿನಿ ಎಲ್ಲರಿಗೂ ವಿಷಯ ಅದಾಗಲೇ ತಲುಪಿತ್ತು. ರೇಣುವಿನ ಫೋನು ಕರೆಯುತ್ತಲೇ ಇದೆ.

“ಯಾರೋ ಗಿಡದ ನಿಂಬೆ ಹಣ್ಣನ್ನೆಲ್ಲಾ ಕೊಯಿದದ್ದು ಗೊತ್ತಾಗಿ ಗಲಾಟೆ ಮಾಡಿದ್ರು ನಳಿನಿಯಕ್ಕ.. ನಂತರ ಇಷ್ಟೆಲ್ಲಾ..”
ಓಹ್.. !ನಳಿನಿಗೆ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಯಿತು.

“ಸಾವಿಯಕ್ಕನಿಗೆ ಏನಾದರೂ ಹೆಚ್ಚು ಕಡಿಮೆ ಆದರೆ..?!”

ನಿಂಬೆ ಹಣ್ಣು ಕದ್ದ ಪಾಪದ ಜೊತೆಗೆ ಸಾವಿಯಕ್ಕನನ್ನು ಸಾಯಿಸಿದ ಪಾಪವೂ ತಟ್ಟಿ ಬಿಡುತ್ತದಲ್ಲ? ಇವರಿಗೆ ಗೊತ್ತಾದರೆ ಕತೆ ಅಷ್ಟೇ..!
ಯಾರೋ ದಾರಿಲಿ ಹೋಗುವವರ ಕೆಲಸ ಆಗಿರಬೇಕು. ಹುಷಾರ್ ಆಗಿ ಬರ್ತಾರೆ ಬಿಡು ಅಂತ ರೇಣುವನ್ನು ಸಮಾಧಾನಿಸಿ ಪೋನಿಟ್ಟರೂ ಪಾಪಪ್ರಜ್ಞೆ ಆಕೆಗೆ ಕಾಡುತ್ತಲೇ ಇತ್ತು. ಒಮ್ಮೆ ಹುಷಾರಾಗಿ ಬಂದು ಬಿಡಲಪ್ಪ ಅಂತ ಆಕೆಯೂ ದೇವರಿಗೆ ಪ್ರಾರ್ಥನೆ ಮಾಡಿಕೊಂಡಳು.
“ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದ ಕಾರಣ ಆಯಿತು. ಸಣ್ಣ ಹಾರ್ಟ್ ಅಟಾಕ್ ಆಗಿದೆ. ಜೊತೆಗೆ ಬ್ರೈನ್ ಗೆ ಸ್ವಲ್ಪ ಪೆಟ್ಟು ಆಗಿದೆ. ಆದಷ್ಟೂ ಜಾಗ್ರತೆ ಬೇಕು. ಅವರು ಟೆನ್ಷನ್ ತಗೊಳಬಾರದು ಅಷ್ಟೇ.”

ವೈದ್ಯರು ಎಚ್ಚರಿಕೆ ಕೊಟ್ಟರು.
ಒಂದು ವಾರ ಆಸ್ಪತ್ರೆಯಲ್ಲಿ ಸುಧಾರಿಸಿಕೊಂಡು ಸಾವಿಯಕ್ಕ ಮನೆಗೆ ಬಂದಾಯಿತು. ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆದದ್ದು ನೆರೆಕರೆಯವರಿಗೆ ಗೊತ್ತಾಗಿ, ಯಾರಿಗೂ ಸಾವಿಯಕ್ಕನ ಅಷ್ಟಾಗಿ ಆಗದೇ ಇದ್ದರೂ,

‘ಸಾಯಲಿ, ಏನೇ ಆದರೂ ಗಟ್ಟಿನ ಕೆಲಸಗಾರ್ತಿ ಹೆಂಗಸು. ಒಂಟಿ ಹೆಂಗಸು ಕಾರುಬಾರು ಮಾಡಿ ಮಗನ ಒಂದು ಮಟ್ಟಿಗೆ ತಂದು ನಿಲ್ಲಿಸಿದೆ ಅಲಾ, ಎಷ್ಟೇ ಆದರೂ ನಾವು ನೆರೆಕರೆಯವರು, ಒಬ್ಬರ ಕಷ್ಟ ಸುಖಕ್ಕೆ ಆಗದೆ ಮತ್ತೆಂತಕೆ ಆಗುವುದು? ಹೋಗಿ ನೋಡಿಕೊಂಡು ಬರುವ’

ಅಂತ ಒಬ್ಬೊಬ್ಬರೇ ಬರತೊಡಗಿದರು.
‘ಓಹ್! ಏನೇ ಆಗಲಿ ಬಂದ್ರಲ!’ ಸಾವಿಯಕ್ಕನ ಮನಸು ಮೃದುವಾಗತೊಡಗಿತು.

ಬಂದವರ್ಯಾರು ಬರಿಗೈಲಿ ಬರಲಿಲ್ಲ. ಸೇಬು, ಕಲ್ಲಂಗಡಿ, ದ್ರಾಕ್ಷಿ, ಮುಸಂಬಿ ಅಂತ ಊಟದ ಮೇಜು ಭರ್ತಿ ಆಯಿತು.
ಒಂದೆರಡು ಸಲ ಸಾವಿಯಕ್ಕ ಸೊಸೆಯ ಜೊತೆಗೆ,

“ಮನೆಕಡೆಂದ ಭಾವ, ಮೈದುನ, ಅಕ್ಕ,ತಂಗಿ ..ಯಾರಾದರೂ ಬಂದಿದ್ದರಾ?” ಅಂತ ಕೇಳಿದ್ದಳು. ನಿದ್ದೆ ಮಾಡುವಾಗಲೋ, ಸ್ನಾನಕ್ಕೆ ಹೋಗುವಾಗಲೋ ಬಂದಿದ್ದರೆ ಅನ್ನುವ ಸಣ್ಣ ನಿರೀಕ್ಷೆ ಆಕೆಯದ್ದು.

“ಇಲ್ಲ, ಇಲ್ಲಿ ತನಕ ಬಂದಿಲ್ಲ, ನೀವು ಅಡ್ಮಿಟ್ ಆದು ಅವರಿಗೆ ಗೊತ್ತುಂಟು ಅಂತ ನಿನ್ನೆ ನಿಮ್ಮ ನೋಡಲಿಕ್ಕೆ ಬಂದ ಮೋಯಿನಿ ಅಕ್ಕ ಹೇಳಿದ್ರು”.

ಯಾಕೋ ಸಾವಿಯಕ್ಕನ ಮನಸು ಕುಂದಿ ಹೋದದ್ದನ್ನ ಸೊಸೆ ಗಮನಿಸಿದಳು.

‘ಯಾರದೋ ಸಿಟ್ಟನ್ನು ಯಾರ ಮೇಲೋ ಹಾಕುತ್ತಿದ್ದೇನಾ? ಅವರ ಮೇಲಿನ ಹಠ ಇವರ ಮೇಲೆ ಪ್ರಯೋಗಿಸಿದೆನಾ?’ ಪಶ್ಚಾತ್ತಾಪದ ಎಳೆಯೊಂದು ಅವಳೊಳಗೆ ಮಿಡುಕಿತು.

ತಾನು ಬಾಯಿ ಬಡುಕಿ ಅನ್ನಿಸಿಕೊಳ್ಳುವುದಕ್ಕೆ ಕಾರಣ ಬೇರೇ ಇತ್ತಲ್ಲ? ಇಲ್ಲದಿದ್ದರೆ ಎಲ್ಲರೂ ತನ್ನನ್ನು ನುಂಗಿ ನೊಣೆಯುತ್ತಿರಲಿಲ್ಲವಾ? ಆಸ್ತಿ ಪಾಸ್ತಿ ಮಾತ್ರ ಅಲ್ಲ, ಗಂಡ ಇಲ್ಲದವಳು ಅಂತ ಅಂದಾಕ್ಷಣ ಸಣ್ಣಗೆ ಒಂದು ನಗೆ ನಕ್ಕರೂ ಸಾಕು,ಅದಕ್ಕೆ ಬೇರೆಯದೇ ಅರ್ಥ ಹುಟ್ಟಿಕೊಳ್ಳಬಹುದು. ಸಲಿಗೆ ವಹಿಸಿ ಮನೆಯೊಳಗೂ ಬರಬಹುದು, ಅದನ್ನು ದೊಡ್ಡ ಗುಲ್ಲೇ ಮಾಡಬಹುದು? ಇದನ್ನೆಲ್ಲಾ ಎಲ್ಲರಿಗೂ ವಿವರಿಸಿ ಹೇಳುವುದಕ್ಕುಂಟಾ?

ಸಾವಿಯಕ್ಕ ಯಾವೊತ್ತೂ ಇಲ್ಲಿತನಕ ಅದನ್ನೆಲ್ಲ ನೆನಪಿಸಿಕೊಂಡವಳೇ ಅಲ್ಲ. ಇವತ್ತು ಬೇಡವೆಂದರೂ ನೆನಪುಗಳು ನುಗ್ಗಿ ಬರತೊಡಗಿದವು.

ಎಷ್ಟು ಚೆಂದ ಇತ್ತು ಎಲ್ಲವೂ ಇವರಿದ್ದಾಗ. ಮೇದಪ್ಪ ಮಾಷ್ಟರು ಅಂದ್ರೆ ಎಲ್ಲರಿಗೂ ಗೊತ್ತು. ಆಸ್ತಿ ಪಾಸ್ತಿ ಎಲ್ಲ ಊರಲ್ಲಿ ಬೇಕಾದಷ್ಟು ಇದ್ದರೂ ಅದನ್ನೆಲ್ಲಾ ಭಾವ ಮೈದುನನ ವಶ ಕೊಟ್ಟು ನಾವು ಬೆಳ್ಳೂರಿಗೆ ಹೋದದ್ದು. ಇವರಿಗೆ ಸಿಗುತ್ತಿದ್ದ ವಾರ್ಷಿಕ ಎರಡು ತಿಂಗಳ ರಜೆಯಲ್ಲಿ ಹೋದಾಗ ಮಾತ್ರ ಅವರೆಲ್ಲ ಚೆಂದ ಸತ್ಕಾರ ಮಾಡುತ್ತಿದ್ದರು. ಬರುವಾಗ ಕಾಯಿ, ಅಕ್ಕಿ, ಬಾಳೆ, ಎಣ್ಣೆ ಅಂತ ನಾವು ಬೇಡ ಬೇಡವೆಂದರೂ ಒತ್ತಾಯ ಮಾಡಿ ಒಂದಷ್ಟು ತುಂಬಿಸಿ ಕಳುಹಿಸುತ್ತಿದ್ದರು. ಅವರೇ ಕೊಟ್ಟದ್ದು ಬಿಟ್ಟರೆ ನಾವೇನೂ ಕೇಳುತ್ತಲೂ ಇರಲಿಲ್ಲ. ನಮ್ಮೂರಿನಿಂದ ಬೆಳ್ಳೂರಿಗೆ ಸುಮಾರು ನೂರು ಮೈಲು ದೂರ. ಆ ಊರಿನ ಸರಕಾರಿ ಪ್ರೌಢಶಾಲೆಯಲ್ಲಿ ಇವರು ಮೇಷ್ಟ್ರು. ಮಗ ಮೋಹನನ್ನು ಕೂಡ ಅದೇ ಊರಲ್ಲಿ ಶಾಲೆಗೆ ಸೇರಿಸಿದೆವು. ಆ ದಿನ ರಾತ್ರಿ ಮೂರು ಜನ ಕೂತು ಒಟ್ಟಿಗೆ ಊಟ ಮಾಡಿದ್ದೆವು. ಸ್ವಲ್ಪ ಹೊತ್ತಿನ ನಂತರ ಎದೆ ಉರಿ ಅಂತ ಹೇಳ್ತಾ ಗ್ಯಾಸ್ಟ್ರಿಕ್ ಇರಬಹುದೇನೋ ಅಂತ ಜೀರಿಗೆ ತಿಂದರೆ ಸರಿಯಾಗ ಬಹುದು ಅಂತ ಜೀರಿಗೆ ತಿಂದು ನೀರು ಕುಡಿದದ್ದೊಂದೆ ಇವರು ಕುಸಿದು ಕುಳಿತರು. ಅಲ್ಲಿಗೆ ತನ್ನ ಬದುಕನ್ನು ವಿಧಿ ಕಸಿದು ಕೊಂಡಿತು. ಮಗ ಐದನೇ ತರಗತಿಗೆ ಹೋಗುತ್ತಿದ್ದ. ಅಷ್ಟು ಸಣ್ಣ ವಯಸಿಗೆ ಇಬ್ಬರೂ ಅನಾಥರಾಗಿ ಬಿಟ್ಟೆವು. ಅವರಿರುವಾಗ ಇಲ್ಲಿ ಇರುವುದಕ್ಕೆ ಒಂದು ಅರ್ಥ ಇತ್ತು. ಬಂಧು ಬಾಂಧವರಿಲ್ಲದ ಊರಲ್ಲಿ ಇರುವುದಕ್ಕಿಂತ ಊರಿಗೆ ಹೋಗುವುದೇ ವಾಸಿ ಅಂತ ಅನ್ನಿಸಿತು. ಮೋಹನ ಎಂದರೆ ಎಲ್ಲರಿಗೂ ಪ್ರೀತಿ. ಹಾಗಿರುವಾಗ ಚಿಕಪ ದೊಡಪನ ಜತೆಗೆ ಇರುವುದೇ ಕ್ಷೇಮ ಅಂತನ್ನಿಸಿತ್ತು.

ಆ ಸಲ ದಸರಾ ರಜೆಯಲ್ಲಿ ಒಂದು ವಾರದ ಮಟ್ಟಿಗೆ ಊರಿಗೆ ಹೋದಾಗ ಮೊದಲಿನ ಆತಿಥ್ಯ ಸಿಗುತ್ತಿಲ್ಲವೆಂಬುದು ತನ್ನ ಭ್ರಮೆಯಾ? ಅಥವಾ ಇವರಿಲ್ಲದ್ದಕ್ಕೆ ಹೀಗೆ ಅನ್ನಿಸುತ್ತಿದೆಯೇನೋ ಅಂತ ಅಂದುಕೊಂಡೆ. ಆ ವರ್ಷ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಊರಿಗೆ ವಾಪಾಸಾಗಿ ಬಿಟ್ಟೆ. ಮಗನನ್ನು ಹತ್ತಿರದ ಶಾಲೆಗೆ ಸೇರಿಸಿದೆ.

ಸಣ್ಣ ಸಣ್ಣ ಹುಳಿ ರಗಳೆಗಳು ಅದಾಗಲೇ ಶುರುವಾಗಿದ್ದವು. ಎಷ್ಟು ದಿನ ಅಂತ ಭಾವಂದಿರ ಮನೆಯಲ್ಲಿ ಇರೋಕೆ ಸಾಧ್ಯ? ಹೇಗೂ ನಮ್ಮ ಪಾಲಿನ ಆಸ್ತಿ ಇತ್ತಲ್ಲ? ಇನ್ನು ಅದನ್ನ ತಾನು ನಿಭಾಯಿಸಬೇಕು ತಾನೇ? ನಮ್ಮ ಪಾಲಿನ ಜಾಗೆ ಕೇಳಿದೆ. ಅದರ ಮೇಲಿಂದ ತಾನು ಒಮ್ಮಿಂದೊಮ್ಮಗೇ ಬದ್ಧ ವೈರಿ ಆದದ್ದು. ತನಗೂ ಆ ಊರಲ್ಲಿ ಯಾರೂ ಬೇಕಾದವರಿರಲಿಲ್ಲ. ತನ್ನ ತವರು ಮನೆಯಲ್ಲಿ ಇದ್ದದ್ದು ವಯಸಾದ ಅಪ್ಪ ಅಮ್ಮ. ಅವರೂ ಒಂದೆರಡು ಸಲ ಬಂದು ತನ್ನ ಪಾಲಿನ ಹಕ್ಕನ್ನು ಕೊಡಲು ಕೇಳಿಕೊಂಡಿದ್ದರು.
“ನಿಮಗೇನು? ಇಷ್ಟು ದಿನ ತೋಟ ತುಡುಗೆ ಎಲ್ಲಾ ಬಿಟ್ಟು ಹೊರಗೆ ಆರಾಮದಲ್ಲಿ ಇದ್ರಿ. ಈಗ ಕೇಳಿದರೆ? ನಿಮಗಾದರೂ ಪೆನ್ಷನ್ ಬರುತ್ತದೆ. ನಾವು ಈ ಜಾಗೆಯಲ್ಲಿ ಮಕ್ಕಳು ಸಂಸಾರ ಹೇಗೆ ನಿಭಾಯಿಸುವುದು?’’ ಭಾವ ಖಾರವಾಗಿ ನುಡಿದಿದ್ದರು.

ಸಂಧಾನಕ್ಕೆ ಬಂದ ಆಚೆ ಮನೆ ಲಿಂಗಪ್ಪಣ್ಣ, ಇವರಿಗೂ ಇಲ್ಲಿ ಹಕ್ಕುಂಟಲ, ಕೋರ್ಟು ಕಚೇರಿ ಅಲೆದರೆ ಕಷ್ಟ ಅಂತ ಹೇಳಿದ ಮೇಲೆ ಒಂದಿಷ್ಟು ಜಾಗೆ ಮತ್ತು ಕೆಲಸದವರಿಗೆ ಅಂತ ಕಟ್ಟಿದ ಎರಡು ರೂಮಿನ ಬಿಡಾರ ಒಲ್ಲದ ಮನಸಿನಿಂದ ನಮಗೆ ಬಿಟ್ಟು ಕೊಟ್ಟದ್ದು.
ಮತ್ತೆ ಎಲ್ಲಾ ಶುರುವಾದದ್ದು. ತನ್ನ ಕಂಡರಂತೂ ಉರಿಉರಿಯಾಗುತ್ತಿದ್ದರು. ಸಹಿಸಿಕೊಳ್ಳದೆ ಅನ್ಯ ದಾರಿಯಿರಲಿಲ್ಲ. ಬೇಸರ ನೀಗಿಕೊಳ್ಳಲು ಮೈಮೇಲೆ ಕೆಲಸ ಎಳೆದುಕೊಂಡೆ. ಯಾರೇ ಕೆಲಸಗಾರರು ಬಂದರು ತಪ್ಪಿಸಿ ಬಿಡುತ್ತಿದ್ದರು. ಮಗ ಶಾಲೆಗೆ ಹೋದ ಮೇಲೆ ತಾನೇ ಒಂದಷ್ಟು ತರಕಾರಿ, ಬಾಳೆ ನೆಟ್ಟೆ. ಚೆಂದಕೆ ಫಸಲು ಕೊಟ್ಟಿತು. ಇಷ್ಟು ದಿನ ಸಾವಿತ್ರಿಯಕ್ಕ ಆಗಿದ್ದ ತನ್ನನ್ನು ಎಲ್ಲರೂ ಸಾವಿಯಕ್ಕ ಅಂತ ಕರೆಯತೊಡಗಿದರು. ಏನೇ ಹೇಳಿ,

“ಈ ಸಾವಿಯಕ್ಕ ಪೀಚೆ ಕೈಲಿ ಬಿತ್ತಿದರೂ ಗಿಡ ಬಳುಂಬು ಬರ್ತದೆ”

ಅಂತ ಜನ ಮಾತಾಡಿಕೊಳ್ಳುವುದು ತನ್ನ ಕಿವಿಗೂ ಬಿದ್ದು ಖುಷಿ ಆಗುತ್ತಿತ್ತು. ಮತ್ತೆ ಹೆಚ್ಚು ಕೆಲಸ ಮಾಡಲು ಉಮೇದು ಬರುತ್ತಿತ್ತು.

ಅದೂ ಇದೂಂತ ಮನೆಯವರದ್ದು ಕಟಿ ಪಿಟಿ ತಪ್ಪುತ್ತಿರಲಿಲ್ಲ. ಹಗಲಿಡಿ ಖಾರ ಕಾರುತ್ತಿದ್ದವರು ರಾತ್ರೆ ಬಾಗಿಲು ಬಡಿಯುತ್ತಿದ್ದರು. ರಾತ್ರೆ ಬಾಗಿಲು ಹಾಕಿದ ಮೇಲೆ ಯಾವ ಸದ್ದಾದರೂ ನಾನು ತೆಗೆಯಲು ಹೋಗುತ್ತಿರಲಿಲ್ಲ. ತಾನು ಅವರಿಂದ ಏನು ತಕಳುವುದಕ್ಕೂ ಕೊಡುವುದಕ್ಕೂ ಹೋಗುತ್ತಿರಲಿಲ್ಲ. “ಸಾವಿಯಕ್ಕ ಬರೇ ಪಿಟ್ಟಾಸಿ” ಅಂತ ನನಗೊಂದು ಉಚಿತವಾಗಿ ಬಿರುದನ್ನು ದಯಪಾಲಿಸಿದ್ದರು. ಅದನ್ನು ತಾನು ಖುಷಿಯಿಂದಲೇ ಸ್ವೀಕರಿಸಿದೆ. ತಾನು ಬಗ್ಗುವುದಿಲ್ಲ ಅಂತ ಗೊತ್ತಾದ ಮೇಲೆ ಬೇರೆಯದೇ ಅಸ್ತ್ರ ಪ್ರಯೋಗಿಸಲು ತೊಡಗಿದರು. ತರಕಾರಿ ಗಿಡ ಮಾಡಿದಲ್ಲಿಗೆ ಆಡು ಬಿಡುವುದು, ಬಾಳೆ ಗೊನೆ ಕದಿಯುದು…ಒಂದಲ್ಲ ಎರಡಲ್ಲ? ಪರವೂರು ಬಿಟ್ಟು ತನ್ನೂರಿಗೆ ಬಂದದ್ದು ಈ ಸುಖಕ್ಕ? ಅಂತ ಅನ್ನಿಸದೇ ಇರಲಿಲ್ಲ.

ಒಂದು ದಿನ ಬೆಳಗೆ ಎದ್ದು ನೋಡ್ತೇನೆ ಮನೆ ಮುಂದಿನ ಅಂಗಳದಲ್ಲಿ ನೆಟ್ಟ ಬೆಂಡೆಗಿಡವನ್ನೆಲ್ಲಾ ಕರು ಮೇದು ಮುಗಿಸಿದೆ. ಗೇಟು ಹಾಕಿ ಮಲಗಿದ್ದೆನ್ನಲ್ಲ?! ಇದು ಆಕಸ್ಮಿಕ ಆದದ್ದು ಅಲ್ಲ, ಹೀಗೆ ಬಾಯಿ ಮುಚ್ಚಿದರೆ ಇಂತದು ಆಗುತ್ತನೇ ಇರುತ್ತದೆ ಅಂತ ಗೊತ್ತಾದ ಮೇಲಿಂದ ತನ್ನ ನಾಲಗೆಯನ್ನು ಹರಿತಗೊಳಿಸಿಕೊಂಡೆ.

ಈ ಕೆಲಸ ಮೊದಲೇ ಮಾಡಬೇಕಿತ್ತಲ್ಲ! ಅನ್ನಿಸದೇ ಇರಲಿಲ್ಲ.

ಇಷ್ಟೆಲ್ಲಾ ಕಿರಿಕಿರಿ ಮಾಡಿಕೊಂಡು ನಮ್ಮವರ ನಡುವೆ ಬದುಕುವುದರಲ್ಲಿ ಅರ್ಥ ಇಲ್ಲ ಅನ್ನಿಸಿತು. ಬೇರೆ ಎಲ್ಲಿಯಾದರೂ ಜಾಗೆ ಮಾರಾಟಕ್ಕಿರಬಹುದಾ ಅಂತ ಕೆಲವರ ಜೊತೆ ವಿಚಾರಿಸುತ್ತಲೇ ಇದ್ದೆ. ಒಂದು ದಿನ ಮೀನು ಮಾರಿಕೊಂಡು ಬಂದ ಮೂಸೆ ಕಾಕ ರಾಘುವಿನ ಮನೆಯ ಪಕ್ಕದ ಈ ಜಾಗೆ ಹೇಳಿದ್ದು.

ಹೊಸ ಜಾಗೆ. ನೆರೆಹೊರೆಯವರು ಯಾರೂ ಪರಿಚಯ ಇರಲಿಲ್ಲ. ತನಗೂ ಬೇಕಾದದ್ದೂ ಅದುವೇ. ಯಾರು ಬಂದರೂ ಒಂದಷ್ಟು ಬಿಗುಮಾನ ಇಟ್ಟುಕೊಂಡೇ ಮಾತನಾಡ ತೊಡಗಿದೆ. ಹಳೆಯ ಅನುಭವ ಮತ್ತೆ ಮರುಕಳಿಸ ಬಾರದು ಅಲ್ಲವಾ? ತನಗೆ ನೆರೆಕರೆಯವರ ಒಳ್ಳೆಯದು ಕೆಟ್ಟದ್ದು ಯಾವುದು ಬೇಕಿರಲಿಲ್ಲ. ತನ್ನ ಕಡಕ್ ಮಾತಿನಿಂದ ಎಲ್ಲರಿಗೂ ತಾನು ನಿಷ್ಟುರವೇ. ಮಗ ಓದಿ ಬ್ಯಾಂಕಿನಲ್ಲಿ ಒಂದು ಕೆಲಸಕ್ಕೆ ಸೇರಿದ ಮೇಲೆ ಒಂದಷ್ಟು ನಿರಾಳ ಅನ್ನಿಸಿತ್ತು. ತಾನು ಜೋರು ಅಂತ ಊರು ಪೂರ ಸುದ್ದಿ ಆಗಿತ್ತಲ್ಲ? ಹೆಣ್ಣು ಹುಡುಕುವ ಕಾಲಕ್ಕೆ ಮಗನಿಗೆ ಮಾತ್ರ ಹೆಣ್ಣು ಸಿಗುವುದು ಮಾತ್ರ ಬಾರೀ ಕಷ್ಟ ಆಯಿತು.

ಯಾರೇ ಕೇಳಿದರೂ “ಹೈದನ ಅಮ್ಮ ಬಾರೀ ಘಟವಾಣಿ ಅಂತೆ?” ಅನ್ನುವ ಮಾತು ಮೇಲಿಂದ ಮೇಲೆ ಕೇಳತೊಡಗಿತು.
ಎಷ್ಟೋ ಹುಡುಗಿಯರು ಆ ಕಾರಣಕ್ಕೆ ತಪ್ಪುತ್ತಾ ಹೋದರು. ಇದರಲ್ಲಿ ತನ್ನ ಭಾವ ಮೈದುನರ ಕೈವಾಡ ಇದೆ ಅಂತ ತನಗೆ ಗೊತ್ತಾಗಿತ್ತು.

“ನಿನ್ನ ಬಾಯಿಂದಾಗಿ ನಂಗೆ ಈ ಸಲ ಮದುವೆ ಆದಂತೆ” ಅಂತ ಒಮ್ಮೆಯಂತು ಮೋಹನ ತುಸು ಬೇಸರ ಮಾಡಿಕೊಂಡಿದ್ದ.
ಒಮ್ಮೆಗೆ ಮನಸು ಕದಡಿದರೂ ಅದಕ್ಕೆ ತಾನು ಹೆಚ್ಚು ತಲೆ ಕೆಡಿಸಿಕೊಳ್ಳುವವಳಲ್ಲ . ಅಂತೂ ದೇವರ ದಯೆ! ತನ್ನ ತವರಿನ ಕಡೆಯವರ ನೆಂಟಸ್ಥನದಿಂದ ಪ್ರೈವೇಟ್ ಶಾಲೆಯಲ್ಲಿ ಟೀಚರಾಗಿರುವ ಒಳ್ಳೆಯ ಸಾಧು ಹುಡುಗಿಯೊಬ್ಬಳು ಸೊಸೆಯಾಗಿ ಸಿಕ್ಕಳು. ಒಂದೆರಡು ವರ್ಷ ಅವಳು ಕೆಲಸ ಮಾಡಿದಳು. ತಾನು ಗಟ್ಟಿ ಇದ್ದೆ ಅಲ? ತೋಟ ತುಡುಗೆ ಎಲ್ಲಾ ನಿಭಾಯಿಸುತ್ತಿದ್ದೆ. ಮತ್ತೆ ಅವಳಿಗೆ ಎರಡು ಮಕ್ಕಳಾದ ಮೇಲೆ ಆಕೆಗೆ ಮನೆ, ಶಾಲೆ, ಮಕ್ಕಳು ಎಲ್ಲಾ ಸರಿದೂಗಿಸುವುದು ಕಷ್ಟವಾಗಿ ಅವಳೇ ಕೆಲಸ ಬಿಟ್ಟದ್ದು.

ಈ ಮೋಹನನ, ಕಾಣುದಿಲ್ಲವಾ.! ಆಪೀಸು ಬಿಟ್ಟರೆ ಬೇರೆಂತ ಗೊತ್ತಿಲ್ಲ. ಬೆಳಗೆ ಹೋದರೆ ಸಾಯಂಕಾಲಕ್ಕೇ ಬರುವುದು. ತಾನು ಹೋಗಿ ಬಿಟ್ಟರೆ…?! ..ಪಾಪ! ಈ ರೇಣು ಎಷ್ಟೂಂತ ಮಾಡಿಯಾಳು? ಅವಳು ಮಕ್ಕಳನ್ನು ಸುಧಾರಿಸುವುದಾ? ತೋಟ ತುಡುಗೆ ನೋಡಿಕೊಳ್ಳುವುದಾ..?

ಮನಸು ನೆನಪಿನ ಭಾರಕ್ಕೆ ಜಗ್ಗುತ್ತಾ , ಚಿತ್ರದ ರೀಲಿನಂತೆ ಎಲ್ಲವೂ ಒಳಗಣ್ಣಿನೊಳಗೆ ತಿರುಗುತ್ತಲೇ ತನಗೂ ಗೊತ್ತಿಲ್ಲದೇ ತನ್ನೊಳಗೆ ತಾನೇ ಮಾತಿಗಿಳಿದು ಬಿಡುತ್ತಿದ್ದಳು ಸಾವಿಯಕ್ಕ.
ಆಗಲೇ ರಾಘು ಮತ್ತು ನಳಿನಿ ಬಂದದ್ದು.

ಸಾವಿಯಕ್ಕ ಮನೆಗೆ ಬಂದ ಮೇಲೆ ನಳಿನಿ ಇನ್ನೂ ನೋಡಲು ಬಂದಿರಲಿಲ್ಲ. ಅವಳಿಗೆ ಮನಸು ಕೇಳಲಿಲ್ಲ.

ಬನ್ನಿ, ಹೋಗಿ ನೋಡಿಕೊಂಡು ಬರುವ ಅಂತ ಮೊನ್ನೆಯಿಂದ ಕರೆದರೂ ರಾಘು ಹೊರಟಿರಲಿಲ್ಲ.
“ಮೊನ್ನೆ ಹೋಗಿ ಆಸ್ಪತ್ರೆಗೆ ಸೇರಿಸಿ ಬಂದಿದ್ದೇನೆ. ನಾನು ದೇವರು ಮೆಚ್ಚುವ ಕೆಲಸ ಮಾಡಿದ್ದೇನೆ. ಅಂದು ನಾವು ನಮ್ಮ ತೋಟದ ಮರ ಕಡಿಯುವಾಗ ಬಂದು ಎಷ್ಟು ಬೊಬ್ಬೆ ಹಾಕಿತ್ತು ಪಿಟ್ಟಾಸಿ ಅಜ್ಜಿ ? ನಿಂಗೆ ನೆನಪಿಲ್ಲವಾ ಅದೆಲ್ಲ? ನೀನು ಬೇಕಾದರೆ ಹೋಗು. ನಾನು ಹೋಗಿ ಮತ್ತೆ ಅಜ್ಜಿ ಮುಖ ನೋಡಲಾರೆ. ನಾಳೆ ಹುಷಾರಾದರೆ ಮತ್ತೆ ಅದರ ಬಾಯಿ ಬೊಂಬಾಯಿಯೇ..”

ಅಂತ ರೇಗಾಡಿದ್ದ. “ನೋಡಿ.. ಅವರಂತೆ ನಾವು ಆಡಬಾರದು. ಎಷ್ಟಾದರೂ ಅವರು ಹಿರಿಯರಲ್ಲವಾ? ಅದರಿಂದ ನೀವೇನೂ ಸಣ್ಣವರಾಗುವುದಿಲ್ಲ.”

ಹೆಂಡತಿಯ ಒತ್ತಾಯ ತಡೆಯಲಾರದೆ, ಸಾಯಲಿ ಅತ್ತ ಅಂತ ಗೊಣಗಿಕೊಂಡು ರಾಘು ನಳಿನಿಯ ಜೊತೆ ಹೊರಟು ಬಂದಿದ್ದ.
ರಾಘುವನ್ನು ನೋಡುತ್ತಲೇ ಸಾವಿಯಕ್ಕನ ಕಣ್ಣು ಹನಿಗೂಡಿತು. ರಾಘಣ್ಣನ ಕೈ ಹಿಡಿದುಕೊಂಡಳು ಸಾವಿಯಕ್ಕ.

ರಾಘುವಿಗೆ ಕಸಿವಿಸಿ ಆಗಿ ಎಳೆದುಕೊಳ್ಳಲೆತ್ನಿಸಿದ ಕೈಯನ್ನು ಬಿಡದೆ ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡಳು.

‘ತಾನು ಇಷ್ಟೆಲ್ಲ ಬಾಯಿ ಮಾಡಿದರೂ ಕೊನೆಗೆ ತನಗೆ ಆಗಿ ಬಂದದ್ದು ರಾಘುವೇ’

ಒಳಗೊಳಗೆ ಕರಗತೊಡಗಿದಳು ಸಾವಿಯಕ್ಕ. ಹಿಂದೆಂದಿಗಿಂತಲೂ ಇಲ್ಲದ ಪ್ರಸನ್ನತೆ ರಾಘುವಿಗೆ ಸಾವಿಯಕ್ಕನ ಮುಖದಲ್ಲಿ ಕಾಣಿಸತೊಡಗಿತು. ಈ ಹಿಂದಿನ ಚಹರೆ ಸಾವಿಯಕ್ಕನದ್ದು ಅಲ್ಲ, ಇದುವೇ ನಿಜವಾದ ಸಾವಿಯಕ್ಕ ಅಂತ ಅನ್ನಿಸಿ, ತಾನೇ ಸಾವಿಯಕ್ಕನನ್ನು ತಪ್ಪಾಗಿ ಅರ್ಥೈಸಿಕೊಂಡೆನಾ ಅಂತ ರಾಘು ಒಳಗೊಳಗೆ ಕನಲಿದ.
ಸಾವಿಯಕ್ಕನಿಗೆ ಮತ್ತೆ ಪುನಃ ಹಳೆಯ ನೆನಪಿನಲೆಗಳು ಎದೆ ದಡಕ್ಕೆ ಬಂದು ಬಡಿಯಿತು.

ಸಾವಿಯಕ್ಕನೊಳಗಿನ ಮೊರೆತ ರಾಘುವಿನೊಳಗೂ ಇಳಿಯತೊಡಗಿತು.

ಕೆಲವೊಂದು ಸಂದರ್ಭಗಳಲ್ಲಿ ಮಾತು ಅಪ್ರಯೋಜಕವಾಗಿ ಬಿಡುತ್ತದೆ. ಒಂದು ಸ್ಪರ್ಶ ಅಷ್ಟು ಭಾವಗಳನ್ನು ತಾಕಿಸಲು ಸಾಧ್ಯವಾ? ಅಂತ ರಾಘುವಿಗೂ ಅಚ್ಚರಿ.

ಇಬ್ಬರೂ ಅದೆಷ್ಟು ಹೊತ್ತು ಹಾಗೇ ಕೂತಿದ್ದರೋ?!

ಒಳಗೆ ನಳಿನಿ ರೇಣುವಿದು ಗಲಗಲ ಮಾತುಕತೆ ಇನ್ನೂ ಮುಗಿದಿರಲಿಲ್ಲ.

ಒಮ್ಮೆಗೇ ಅವರಿಬ್ಬರ ಧ್ಯಾನ ಇತ್ತ ಕಡೆಗೆ ಹರಿಯಿತು.
“ಯಾಕೆ ಇಬ್ಬರೂ ಏನೂ ಮಾತಾಡದೆ ಹೀಗೆ ಕೂತಿದಾರೆ !”

ಒಳಕೋಣೆಯಿಂದ ಯಾವುದೇ ಸದ್ದು ಕೇಳಿಸದೆ,

ರೇಣು, ನಳಿನಿ ಒಳಗೆ ಬಂದರೆ ,

ಸಾವಿಯಕ್ಕ ರಾಘುವಿನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ರಾಘು ಸುಮ್ಮಗೆ ಸಾವಿಯಕ್ಕನನ್ನು ನೋಡುತ್ತಿದ್ದಾನೆ. ಮೌನ ಸಂವಾದವೊಂದು ಎದೆಯಿಂದ ಎದೆಗೆ ಹರಿಯುತ್ತಿರುವಂತೆ ತೋರಿತು.
“ಎಂತ ಇಬ್ಬರೂ ಸುಮ್ಮಗೆ ಹೀಗೆ ಕೂತದ್ದು? ಬನ್ನಿ ಬಾಯಾರಿಕೆ ಕುಡಿಯಿರಿ’’
“ ಅತ್ತೆ ನಿಮಗೆ ಅಲ್ಲಿಗೆ ಕುಡಿಯಲು ತಂದು ಕೊಡಲಾ?” ಅಂದಳು ರೇಣು.
“ಸುಮ್ಮಗೆ ಏನೂ ಮಾತಾಡದೆ ನಿನ್ನ ಕೂರಿಸಿಕೊಂಡೆ ನೋಡು! “
“ ಮೊನ್ನೆ ಆಸ್ಪತ್ರೆಯಿಂದ ಬಂದ ಮೇಲಂತೂ ಯಾವುದನ್ನ ಮರೆತ್ತಿದ್ದೆನೋ, ಅದೇ ಈಗ ನೆನಪಾಗುತ್ತಿದೆ” ಅಂದಳು ಸಾವಿಯಕ್ಕ.

ಅದೆಲ್ಲ ಬೇಡ ಈಗ, ತನಗೆಲ್ಲ ಅರ್ಥವಾಗುತ್ತದೆ ಅನ್ನುವ ರೀತಿಯಲ್ಲಿ ಸಾವಿಯಕ್ಕನ ಕೈಯನ್ನು ಮತ್ತಷ್ಟು ಬೆಚ್ಚಗೆ ಹಿಡಿದುಕೊಂಡ ರಾಘು.
ಬನ್ನಿ ರಾಘಣ್ಣ, ನಳಿನಿಯಕ್ಕ ಬಾಯಾರಿಕೆ ಕುಡಿಯಿರಿ, ಮತ್ತೆ ಮಾತನಾಡುವಿರಂತೆ,

ರೇಣು ಮತ್ತೊಮ್ಮೆ ಕರೆದಳು.
‘ಒಂದಷ್ಟು ನಿಂಬೆ ಹಣ್ಣು ಅತ್ತೆಗೆ ಗೊತ್ತಾಗದೇ ಕೊಟ್ಟು ಬಿಡುವೆ. ನಳಿನಿಯಕ್ಕ ಇನ್ನು ಕೊಟ್ರೆ ತಗಳ್ತಾರೋ ಇಲ್ಲವೋ?’

ರೇಣು ಯೋಚಿಸುತ್ತಾ ಎರಡು ಗಾಜಿನ ಬಟ್ಟಲಿಗೆ ಫ್ರೂಟ್ ಸಲಾಡ್ ಹಾಕತೊಡಗಿದಳು. ಬಂದವರು ತಂದ ರಾಶಿ ಹಣ್ಣುಗಳು ಹಾಳಾಗಿ ಬಿಡ್ತದೆ ಅಂತ ಬೆಳಗೆಯೇ ಫ್ರೂಟ್ ಸಲಾಡ್ ಮತ್ತು ಬನಾನ ಮಿಲ್ಕ್ ಶೇಕ್ ಮಾಡಿ ಪ್ರಿಡ್ಜ್ನಲ್ಲಿ ಇಟ್ಟಿದ್ದಳು.

“ಓಯ್..ರೇಣು… ನನಗೆ ಜ್ಯೂಸ್ ಗೀಸ್ ಒಂದೂ ಬೇಡ. ಶುಗರ್ ಹೆಚ್ಚಾದರೆ ಮತ್ತೆ ಕಷ್ಟ! ಒಂದು ಕಣ್ಣ ಚಾ ಮಾಡಿದ್ದು ಇದ್ದರೆ ಕೊಡು.

ಹಾಗೇ, ನಳಿನಿಗೆ ಒಂದು ತೊಟ್ಟೆ ನಿಂಬುಳಿ ಕೊಟ್ಟು ಕಳ್ಸು ಅಯ್ತಾ..ಉಪ್ಪನಕಾಯಿ ಹಾಕಲಿ.. ಹಾಗೇ ನೇಂದ್ರ ಬಾಳೆ ಉಂಟಾ ನೋಡು. ಇದ್ದರೆ ಅದರದ್ದೂ ಒಂದು ಪಾಡ ಕೊಟ್ಟು ಕಳಿಸು”

ಸಾವಿಯಕ್ಕ ಹೇಳತೊಡಗಿದಳು.

ಟ್ರೇ ಹಿಡಿದುಕೊಂಡು ಅರೆಕ್ಷಣ ಸ್ತಬ್ಧವಾಗಿ ನಿಂತ ರೇಣುವಿನ ಮುಖಭಾವದಲ್ಲಾಗುವ ಬದಲಾವಣೆಯನ್ನು ರಾಘು ನಳಿನಿ ನೋಡುತ್ತಾ ನಿಂತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.