ಕ್ಯಾನ್ವಾಸಿನಲ್ಲಿ ಜೀವನ ದರ್ಶನ

7

ಕ್ಯಾನ್ವಾಸಿನಲ್ಲಿ ಜೀವನ ದರ್ಶನ

Published:
Updated:
Deccan Herald

ತೀವ್ರವಾಗಿ ಕಾಡುತ್ತಿರುವ ನೀರಿನ ಹಾಹಾಕಾರ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ, ಪೀಡೆಯಾಗಿ ಪರಣಮಿಸಿರುವ ಬಾಲ ಕಾರ್ಮಿಕ ಪದ್ಧತಿ ... ಇಂತಹ  ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಕುಂಚದ ಮೂಲಕ ಕನ್ನಡಿ ಹಿಡಿಯುವ ಪ್ರಯತ್ನವನ್ನು ಕಲಾವಿದ ಸಿ.ಆರ್. ಉಪ್ಪಳ ಮಾಡಿದ್ದಾರೆ.

ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ‘ಅವಲೋಕನ’ ಹೆಸರಿನಡಿಯಲ್ಲಿ ಕಲಾಕುಟೀರವು ಏಕವ್ಯಕ್ತಿ ಪ್ರದರ್ಶನವನ್ನು ಆಯೋಜಿಸಿದೆ.

ಹೆಣ್ಣು ಭ್ರೂಣ ಹತ್ಯೆ, ಸಂಬಂಧ. ಕಾಡಿನಲ್ಲಿ ತಿರುಗುವ ಹುಲಿ. ಸಂಗೀತದತ್ತ ಮೈಯೆಲ್ಲ ಕಿವಿಯಾಗಿಸಿಕೊಂಡಿರುವ ಯುವ ಜನಾಂಗ ಹೀಗೆ ಜೀವನದ ಹತ್ತು ಹಲವು ಆಯಾಮಗಳನ್ನವರು ಸೃಷ್ಟಿಸಿದ್ದಾರೆ. 

ರಾಯಚೂರು ಜಿಲ್ಲೆಯ ಸಿಂಧನೂರಿನವರಾದ ಅವರು ಪ್ರೌಢಶಾಲಾ ಸಂದರ್ಭದಲ್ಲಿ ಇವರ ಚಿತ್ರಕಲೆಯನ್ನು ಗುರುತಿಸಿದ ಶಿಕ್ಷಕ ಹನುಮಂತಪ್ಪನವರು ಅದರಲ್ಲೇ ಮುಂದುವರಿಯುವಂತೆ ಸೂಚಿಸಿದರು. ಅವರ ಪ್ರೇರಣೆಯಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ಐಡಿಯಲ್‌ ಫೈನ್‌ ಆರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಪ್ಲೊಮಾ ಮತ್ತು ಕಾಲೇಜ್‌ ಆಫ್‌ ಇನ್‌ ವಿಷುವಲ್‌ ಆರ್ಟ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. 

ಉಪ್ಪಳ ಅವರು ಪ್ರಚಲಿತ ವಿದ್ಯಾಮಾನಗಳು ಮತ್ತು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮ ಪರಿಕಲ್ಪನೆಯನ್ನು ಚಿತ್ರಗಳ ಮೂಲಕ ಬಿಂಬಿಸಿದ್ದಾರೆ.

ಈಗಾಗಲೇ ವೆಂಕಟಪ್ಪ ಆರ್ಟ್‌ ಗ್ಯಾಲರಿ, ಚಿತ್ರಕಲಾ ಕಲಾ ಪರಿಷತ್ತು, ಕಲಬುರ್ಗಿಯಲ್ಲಿ ಗುಂಪು ಪ್ರದರ್ಶನ ಹಾಗೂ ಗಂಗಾವತಿ, ಬೆಂಗಳೂರು, ರಾಯಚೂರು, ತುಮಕೂರಿನಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.

1985ರಲ್ಲಿ ನಡೆದ ಆಲ್‌ ಇಂಡಿಯಾ ಮೈಸೂರು ದಸರಾ ಪ್ರದರ್ಶನದಲ್ಲಿ ಇವರ ಚಿತ್ರಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಪದವಿ ಮುಗಿದ ಮೇಲೆ ಮೂರು ವರ್ಷ ‘ಕ್ರಾಂತಿ’ ದಿನಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸಿದ ಇವರು ನಂತರ ಹವ್ಯಾಸಿ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪೋಸ್ಟರ್ ಕಲರ್‌, ಜಲ, ತೈಲ ಬಣ್ಣಗಳಲ್ಲಿ ಕಲಾಕೃತಿಗಳನ್ನು ರಚಿಸುತ್ತಾರೆ.

ಈ ಪ್ರದರ್ಶನವು ಬೆಳಿಗ್ಗೆ 10.30 ರಿಂದ ರಾತ್ರಿ 7ರವರೆಗೆ ನಡೆಯಲಿದ್ದು ಇದೇ 12 ಕೊನೆಯಾಗಲಿದೆ. 

ಕಲಾವಿದ–ಸಿ.ಆರ್. ಉಪ್ಪಳ
ಸ್ಥಳ–ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ.
ಸಮಯ– ಬೆಳಿಗ್ಗೆ 10.30 ರಿಂದ ರಾತ್ರಿ 7
ಕೊನೆಯ ದಿನಾಂಕ–ನವೆಂಬರ್‌ 12
ಸಂಪರ್ಕ–9449443969

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !