ಬಣ್ಣದಲ್ಲಿ ಕಂಡ ಬದುಕು

7

ಬಣ್ಣದಲ್ಲಿ ಕಂಡ ಬದುಕು

Published:
Updated:

ಬೆಚ್ಚಗೆ ಮಲಗಿರುವ ಮಗು, ನೀರುಣಲು ಬಂದ ವ್ಯಾಘ್ರ, ರೈತ ಮಹಿಳೆಯ ಬದುಕು, ಕರ್ನಾಟಕದ ಸಾಂಸ್ಕೃತಿಕ ಕಲೆ ಯಕ್ಷಗಾನದ ಝಲಕ್‌ ಕಾಡು, ನಾಡನ್ನು ಕ್ಯಾನ್ವಾಸ್‌ ಮೇಲೆ ಮೂಡಿಸಿದ್ದಾರೆ ಕಲಾವಿದೆ ಅಂಬಿಕಾ ಜಿ ನಾಯರ್‌.

ಹೆಣ್ಣಿಗೆ ನಗುವೇ ಆಭರಣ ಆ ನಗುವೇ ಇಲ್ಲದೆ ಮೈತುಂಬಾ ಆಭರಣಗಳ ಅಲಂಕಾರ ಮಾಡಿಕೊಂಡು ಚಿಂತೆಯಲ್ಲಿ ಮುಳಗಿರುವ ಮಹಿಳೆ. ಪ್ರಕೃತಿಯ ಮಡಿಲಿನ ಮಧ್ಯೆಯಲ್ಲಿರುವ ಹಳ್ಳಿ. ಕೋಣಗಳನ್ನು ಬಂಡಿಗೆ ಕಟ್ಟಿ ಗಾಡಿ ಓಡಿಸುತ್ತಿರುವ ರೈತ ಇಂತಹ ಹಳ್ಳಿ ಸೊಗಡಿನ ಚಿತ್ರಗಳನ್ನು ರಚಿಸಿದ್ದಾರೆ. 

ಕೇರಳ ಜಿಲ್ಲೆಯ ಕ್ಯಾಲಿಕಟ್‌ನಲ್ಲಿ ಹುಟ್ಟಿದ ಇವರು ಕ್ಯಾಲಿಕಟ್‌ನ ಗುರುವಾಯುರಪ್ಪನ್‌ ಕಾಲೇಜಿನಲ್ಲಿ ಲೈಬ್ರರಿ ಸೈನ್ಸ್‌ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ಇವರು ಶಾಲಾ ಸಂದರ್ಭದಲ್ಲಿ ಬಿಡಿಸುತ್ತಿದ್ದ ಚಿತ್ರಗಳನ್ನು ಕಂಡ ಇವರ ಶಿಕ್ಷಕರು ಕಲೆಯನ್ನು ಮುಂದುವರೆಸಲು ಹೇಳಿದ್ದಾರೆ. ಅಂದಿನಿಂದ ಹವ್ಯಾಸವನ್ನು ಬೆಳೆಸಿಕೊಂಡಿರುವ ಇವರು 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಕಲೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕೆಂದು ಆರ್ಟ್‌ ವಿಷಯದಲ್ಲಿ ಒಂದು ವರ್ಷದ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. 

ಇವರು ಸ್ಟ್ರೋಕ್‌ ಪೇಂಟಿಂಗ್‌, ಆಕ್ರೆಲಿಕ್‌, ವಾಟರ್‌ ಕಲರ್‌ಗಳಲ್ಲಿ ಇವರು ಕಲಾಕೃತಿಗಳನ್ನು ರಚಿಸುತ್ತಾರೆ. 30 ವರ್ಷಗಳಿಂದ ಕಲೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಇವರು ಈಗಾಗಲೇ ಚಿತ್ರಕಲಾ ಪರಿಷತ್ತು, ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಗುಂಪು ಪ್ರದರ್ಶನಗಳನ್ನು ಮಾಡಿದ್ದಾರೆ. ಕಲೆಗೆ ವಯಸ್ಸಿನ ಹಂಗಿಲ್ಲ ಎನ್ನುವಂತೆ ಸಂಜೆ 5 ರಿಂದ 7 ಗಂಟೆಯವರೆಗೆ ಮಕ್ಕಳಿಗೆ, ಮಹಿಳೆಯರಿಗೆ, ಕಲಾಸಕ್ತರಿಗೆ ಪೇಂಟಿಂಗ್‌, ಡ್ರಾಯಿಂಗ್‌ ಪಾಠ ಹೇಳಿಕೊಂಡು ಹೋಗುತ್ತಿದ್ದಾರೆ.

ಅಂಬಿಕಾ ಜಿ ನಾಯರ್‌ ಅವರು ಚಿತ್ರಕಲಾ ಪರಿಷತ್ತಿನಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ಇದೇ ನವೆಂಬರ್‌ 5 ರಂದು ಆಯೋಜಿಸಲಾಗಿದ್ದು,  ಸಂಜೆ 5 ಗಂಟೆಗೆ ಕಲಾವಿದ ವಿಜಯನ್‌ ಶ್ರೀ ಉದ್ಘಾಟನೆ ಮಾಡಲಿದ್ದಾರೆ. ಪ್ರದರ್ಶನವು ನವೆಂಬರ್‌ 5 ರಿಂದ 11ರ ವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 7ರವೆರೆಗೆ ನಡೆಯಲಿದ್ದು ಕಲಾಕೃತಿಗಳನ್ನು ಕಣ್ತುಂಬಿಸಿಕೊಳ್ಳಬಹುಗಾಗಿದೆ.

ಕಲಾಕೃತಿಗಳ ಪ್ರದರ್ಶನ

ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ. 
ದಿನಾಂಕ: ನಾಳೆಯಿಂದ 11ರವೆರೆಗೆ
ಸಮಯ:  ಬೆಳಿಗ್ಗೆ 10.30 ರಿಂದ 7
ಸಂಪರ್ಕ–8050008668

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !