ಮಂದ ಬೆಳಕಿನ ಸ್ಪಷ್ಟತೆ

ಗುರುವಾರ , ಏಪ್ರಿಲ್ 25, 2019
26 °C
ಮೊದಲ ಓದು

ಮಂದ ಬೆಳಕಿನ ಸ್ಪಷ್ಟತೆ

Published:
Updated:
Prajavani

ಮಂದ ಬೆಳಕಿನ ಸ್ಪಷ್ಟತೆ (ಆಧ್ಯಾತ್ಮ–ವಿಜ್ಞಾನ, ಮೌಢ್ಯ ನಿವಾರಣೆ, ಸಮನ್ವಯ ವೈಚಾರಿಕ ಕಾದಂಬರಿ)

ಲೇಖಕ: ಈರಣ್ಣಾ ಬಡಿಗೇರ

ಬೆಲೆ: 150

ಪ್ರಕಾಶಕರು: ಶ್ರೀ ಹರಿ ಪ್ರಕಾಶನ

ಪುಟಗಳು: 184

‘ಮಂದ ಬೆಳಕಿನ ಸ್ಪಷ್ಟತೆ’ ಲೇಖಕರೇ ಹೇಳಿಕೊಂಡಿರುವಂತೆ ಇದೊಂದು ವೈಚಾರಿಕ ಕಾದಂಬರಿ. ತಾವು ಕಂಡುಂಡ ಅನುಭವದ ಆಧಾರದ ಮೇಲೆ ಆಧ್ಯಾತ್ಮ– ವಿಜ್ಞಾನದ ಅಧ್ಯಯನಶೀಲತೆಯಿಂದ ತಿಳಿದುಕೊಂಡ ಸಂಗತಿಗಳನ್ನೂ ಆಧಾರವಾಗಿಟ್ಟುಕೊಂಡು ಮೌಢ್ಯ ನಿವಾರಣೆ ಮಾಡುವ, ಸಮನ್ವಯತೆ ಸಾಧಿಸುವ ಆಶಾಭಾವನೆಯೊಂದಿಗೆ ಈ ಕೃತಿ ರಚನೆಗೆ ಕೈಹಾಕಿದ್ದಾರೆ ಅವರು. ಕಾದಂಬರಿಯ ಕಥಾವಸ್ತು, ಪಾತ್ರಗಳು ಮತ್ತು ಘಟನೆಗಳು ಸಮಾಜದಲ್ಲಿ ಬೇರೂರಿರುವ ಮೌಢ್ಯಗಳು ಹಾಗೂ ಅವುಗಳ ಸತ್ಯಾಸತ್ಯತೆಯ ಸುತ್ತಲೇ ತಿರುಗುತ್ತವೆ. ದೇವರು, ಪ್ರಕೃತಿ, ಆತ್ಮ– ಪರಮಾತ್ಮ, ಪುನರ್ಜನ್ಮ, ಶಾಸ್ತ್ರ ಮುಂತಾದ ವಿಷಯಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ ಹಾಗೂ ತಾವು ಓದಿದ, ತಿಳಿದುಕೊಂಡ ಸತ್ಯವನ್ನು ಕಾದಂಬರಿಯ ವಿಷಯವಸ್ತುವಿನಲ್ಲಿ ತುಂಬಿ ಓದುಗರ ಮನದ ಅನುಮಾನಗಳನ್ನು ತಿಳಿಗೊಳಿಸುವ ಪ್ರಯತ್ನ ಲೇಖಕರದ್ದು. 

ಇಷ್ಟೂ ವರ್ಷಗಳಿಂದ ಸತ್ಯವೆಂದೇ ನಂಬಿಕೊಂಡು ಬಂದ ಶಾಸ್ತ್ರ– ಸಂಪ್ರದಾಯಗಳನ್ನು ಹೊಸ ದೃಷ್ಟಿಕೋನದಿಂದ ನಿಚ್ಚಳವಾಗಿ ಮತ್ತೊಮ್ಮೆ ತಿಳಿದುಕೊಳ್ಳಬೇಕಾದ ಅನಿವಾರ್ಯ ಮತ್ತು ಅಗತ್ಯವನ್ನು ಲೇಖಕ ಈ ಕಾದಂಬರಿಯ ಮೂಲಕ ಒತ್ತಿ
ಹೇಳಿದ್ದಾರೆ. 

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !