ಭಾನುವಾರ, ಆಗಸ್ಟ್ 18, 2019
23 °C

ದತ್ತಾತ್ರೇಯ: ದಾರಿ–ಗುರಿ

Published:
Updated:
Prajavani

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು (1919–74) ಹಲವು ಗ್ರಂಥಗಳನ್ನೂ ಬರೆದವರು. ಅವುಗಳಲ್ಲಿ ತುಂಬ ಪ್ರಮುಖವಾದುದು ‘ದತ್ತಾತ್ರೇಯ – ದಿ ವೇ ಅಂಡ್‌ ಗೋಲ್‌ (ದತ್ತಾತ್ರೇಯ – ಸಾಗಬೇಕಾದ ದಾರಿ, ಹೊಂದಬೇಕಾದ ಗುರಿ). ಈ ಇಂಗ್ಲಿಷ್‌ಕೃತಿಯನ್ನು 1957ರಲ್ಲಿ ಲಂಡನ್‌ನ ‘ಜಾರ್ಜ್‌ ಆಲೆನ್‌ ಅಂಡ್‌ ಅನ್ವಿನ್‌ ಲಿಮಿಟೆಡ್‌’ ಪ್ರಕಾಶನ ಸಂಸ್ಥೆ ಪ್ರಕಟಿಸಿತು. 1982ರಲ್ಲಿ ಇದು ಕನ್ನಡಕ್ಕೂ ಅನುವಾದವಾಯಿತು; ಅನುವಾದಕರು ಸ. ವೆಂಕಟಾಚಲಪತಿ. (ಈಗ ಈ ಅನುವಾದಕೃತಿ ಲಭ್ಯ.)

ಈ ಕೃತಿಯ ರಚನೆಗೆ ಕಾರಣವೇನೆಂದು ಲೇಖಕರು ಹೀಗೆ ತಿಳಿಸಿದ್ದಾರೆ:

‘ವೇದಮತದಲ್ಲಿ ಅಲ್ಲಲ್ಲಿ ಕಾಣುವ ಸಕಲ ಭೇದಗಳನ್ನೂ ಸಮನ್ವಯಕ್ಕೆ ತರುವ ಸಮದರ್ಶನದ ಸಾಕಾರರೂಪವೇ ದತ್ತಾತ್ರೇಯ. ಮತ್ತು ಆತನ ಈ ಉಪದೇಶವನ್ನು ಜೀನನ್ಮುಕ್ತಗೀತೆಯೂ ಅವಧೂತಗೀತೆಯೂ ಒಳಗೊಂಡಿದೆ. ಈ ಉಭಯಗೀತೆಗಳನ್ನು ಮೂಲದೊಡನೆ ಕೊಡುವುದೂ ಅವುಗಳ ತಾತ್ಪರ್ಯವನ್ನೂ ಆಶಯವನ್ನೂ ಯಥಾಶ್ರುತವಾಗಿ ನೀಡಿ ವೇದಮತದ ಬೆಳಕಿನಲ್ಲಿ ವ್ಯಾಖ್ಯಾನಮಾಡುವುದೂ ನನ್ನ ಉದ್ದೇಶವಾಗಿದೆ. ಈಗ ಜನರು ಅಧಿಕಾರಕ್ಕೂ ಸುಖಲಾಭ–ಲೋಭಗಳಿಗೂ ಒಳಗಾಗಿ ಜೀವನದ ಪರಮಾರ್ಥ ಪರಮಮೌಲ್ಯಗಳ ಬಗ್ಗೆ ತೀರ ಅಜ್ಞಾನದಲ್ಲಿರುವುದರಿಂದ ಅವರ ಗಮನಕ್ಕೆ ಈ ಕೃತಿಯನ್ನು ತಂದದ್ದಾದರೆ – ಅವರು ತಮ್ಮ ಅಭ್ಯುದಯ ಪ್ರಯತ್ನದ ಜೊತೆಗೆ ನಿಃಶ್ರೇಯಸಿದ್ಧಿಯ ಕಡೆಗೂ ತಿರುಗುವುದಕ್ಕೆ ಸಹಾಯವಾಗುವುದೆಂದು ನಾನು ಎದೆಯಾರ ನಂಬಿದ್ದೇನೆ.’

 

Post Comments (+)