ಅಮ್ಮಾ ಅಮ್ಮಾ , ಏನದು ಹೇಳು

ಬುಧವಾರ, ಏಪ್ರಿಲ್ 24, 2019
27 °C

ಅಮ್ಮಾ ಅಮ್ಮಾ , ಏನದು ಹೇಳು

Published:
Updated:
Prajavani

ಅಮ್ಮಾ ಅಮ್ಮಾ ಏನದು ಹೇಳು

ಬಾನಿಂದುದುರುವ ನೀರು?

ಐಸ್ ಬಾರಿನ ಚೂರು?

 

ಏತಕೆ ಗುಡು ಗುಡು ಎನ್ನುವ

ಚಕ ಚಕ ಬೆಳಕಿನ ಸಿಂಬಾಲು?

ಈ ಹನಿ ಸುರಿಸುವ ಸಿಗ್ನಲ್ಲು?

 

ಏತಕೆ ಗಿಡಮರ ಜೀಕುತ

ತಲೆಯ ತೂಗುತಿವೆ?

ಆಗಸದಲ್ಲಿ ಓಡುವ

ಗುಡು ಗುಡು ಟ್ರೇನಿಗೆ

ಟಾಟಾ ಹೇಳುತಿವೆ?

 

ಟರ ಟರ ಎನ್ನುತ ಜಿಗಿಯುತ ನೆಗೆಯುತ

ಅದೇನು ಸರಿಯುತಿದೆ?

ಗುಡುಗು ಸಿಡಿಲಿನ ರಿದಂ ಜೊತೆಯಲಿ

ಹಾಡನು ಹಾಡುತಿದೆ?

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !