ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಲರಿ ‘ಜಿ’ಯಲ್ಲಿ ದುರ್ಗೋತ್ಸವ ‘9ಜೆಮ್ಸ್‌’

Last Updated 9 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲು ತಾಯಿ ದುರ್ಗೆಯ ವರ್ಣಮಯ ಅವತಾರಗಳ ಕಲಾಕೃತಿಗಳೊಂದಿಗೆ ಲ್ಯಾವೆಲ್ಲೆ ರಸ್ತೆಯಲ್ಲಿರುವ ಗ್ಯಾಲರಿ ಜಿ ಸಜ್ಜಾಗಿದೆ. ಪಶ್ಚಿಮ ಬಂಗಾಳದ ದಿ ಬೆಂಗಾಲ್ ಸ್ಕೂಲ್ ಆಫ್ ಆರ್ಟ್‌ನಲ್ಲಿ ರಚಿಸಲಾದ ದುರ್ಗಾಮಾತೆಯ ಕಲಾಕೃತಿಗಳ ‘9 ಜೆಮ್ಸ್’ ಇದೇ 31ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನಗೊಳ್ಳಲಿದೆ.

ಸುಜಾತಾ ಬಂಡಿ ಜಯದೇವ್ ಹಾಗೂ ಕಲ್ಲೋಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಬೆಂಗಾಲ್ ಸ್ಕೂಲ್ ಆಫ್ ಆರ್ಟ್ಸ್‌ನ ವಿದ್ಯಾರ್ಥಿಗಳಾದಅಶೋಕ್ ರಾಠೋಡ್, ಸುಬ್ರತಾ ಗಂಗೋಪಾಧ್ಯಾಯ, ಪಾಯಲ್ ಆಚಾರ್ಯ, ಕೌಶಿಕ್ ಕೂಮರ್, ಪಾರ್ಥಸಾರಥಿ ಭಟ್ಟಾಚಾರ್ಜಿ, ಸಬ್ಯಸಾಚಿ ಬೊಹ್ರಾ, ಚಂದನ್ ರಾಯ್ (ಶಿಲ್ಪಿ), ಸುವಜಿತ್ ಸಮಂತ (ಶಿಲ್ಪಿ) ಹಾಗೂ ಸುಕಾಂತ ಪಾಲ್ (ಶಿಲ್ಪಿ) ಅವರು ರಚಿಸಿದ್ದಾರೆ.

ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ 9 ದಿನಗಳ ದಸರಾ ಉತ್ಸವ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತದೆ. ದುರ್ಗಾಪೂಜೆಯು ಬಂಗಾಳಿಗಳಿಗೆ ಅತ್ಯಂತ ದೊಡ್ಡ ಹಬ್ಬ. ಇನ್ನು, ದಕ್ಷಿಣ, ಪಶ್ಚಿಮ, ಉತ್ತರ ಭಾರತಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಬೇರೆ ಬೇರೆ ರೀತಿಗಳಲ್ಲಿ ಆಚರಿಸಲಾಗುತ್ತದೆ.

ಈ ಭಾಗದಲ್ಲಿ ದಸರಾ ಹಬ್ಬವನ್ನು ರಾವಣನ ಮೇಲೆ ಶ್ರೀರಾಮನ ವಿಜಯದ ಉತ್ಸವವಾಗಿ ಆಚರಿಸಿದರೆ, ಪೂರ್ವ ಭಾಗದಲ್ಲಿ, ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ದುರ್ಗಾಮಾತೆಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ಹಬ್ಬವಾಗಿ ಆಚರಿಸಲಾಗುತ್ತದೆ. ಹಿನ್ನೆಲೆ ಏನೇ ಇದ್ದರೂ, ದುಷ್ಟ ಶಕ್ತಿಗಳ ಮೇಲೆ ದೈವಿಕ ಶಕ್ತಿಯ ವಿಜಯದ ಸಂಕೇತವಾಗಿ ಈ ಹಬ್ಬ ನಮ್ಮ ದೇಶದ ಎಲ್ಲೆಡೆ ಆಚರಣೆಯಾಗುತ್ತದೆ.

ಇಲ್ಲಿರುವ ಕಲಾಕೃತಿಗಳಲ್ಲಿ ಪ್ರತಿಯೊಬ್ಬ ಕಲಾವಿದರೂ ದುರ್ಗಾಮಾತೆಯನ್ನು ತಮ್ಮದೇ ಆದ ರೀತಿಯಲ್ಲಿ ಚಿತ್ರಿಸಿದ್ದಾರೆ. ಅವುಗಳಿಗೆ ಬೇರೆ ಬೇರೆ ರೀತಿಯ ರೂಪ ಹಾಗೂ ವೈಶಿಷ್ಟ್ಯಗಳಿವೆ. ಸೌಮ್ಯ ಮುಖಭಾವದ ದುರ್ಗಾಮಾತೆ, ತ್ರಿಶೂಲ ಹಿಡಿದ ರಕ್ಷಕಿಯ ರೂಪದ ದುರ್ಗೆ, ರಾಕ್ಷಸನನ್ನು ಸಂಹರಿಸಿದ ನಂತರದ ರೌದ್ರಾವತಾರದ ದುರ್ಗೆ ಹೀಗೆ ವಿವಿಧ ರೂಪ ಹಾಗೂ ಭಂಗಿಯ ದುರ್ಗೆಯರ ಕಲಾಕೃತಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT