‘ಅಂಬರ’ದಲ್ಲಿ ಕೈಮಗ್ಗ ಸೀರೆಗಳ ಚಿತ್ತಾರ

7

‘ಅಂಬರ’ದಲ್ಲಿ ಕೈಮಗ್ಗ ಸೀರೆಗಳ ಚಿತ್ತಾರ

Published:
Updated:
Deccan Herald

ಹಲಸೂರಿನ ‘ಅಂಬರ’ ಮಳಿಗೆಯಲ್ಲಿ ಖ್ಯಾತ ವಸ್ತ್ರವಿನ್ಯಾಸಕಿ ರೆಮಾ ಕುಮಾರ್ ಅವರ ವಿನ್ಯಾಸದ ಆಕರ್ಷಕ ಸೀರೆಗಳ ಸಂಗ್ರಹ ಪ್ರದರ್ಶನ ಮತ್ತು ವಸ್ತ್ರಮೇಳ ಆಯೋಜಿಸಲಾಗಿದೆ.

ಆಗಸ್ಟ್ 8ರಿಂದ 11ರವರೆಗೆ ‘ಜವಳಿ ಕತೆಗಳು’ ಶೀರ್ಷಿಕೆಯಡಿ ನಾಲ್ಕು ದಿನಗಳ ವಸ್ತ್ರಮೇಳ ನಡೆಯಲಿದೆ. ರೆಮಾ ವಿನ್ಯಾಸದ ವಸ್ತ್ರಗಳು ಮೇಳದ ಆಕರ್ಷಣೆಯಾಗಿದ್ದು, ಬೇರೆ ಬೇರೆ ಶೈಲಿಯ ವಿನ್ಯಾಸದ ಕೈಮಗ್ಗದ ಸೀರೆಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಕುಸುರಿ ಕಲೆಯಂತಿರುವ ಸೂಕ್ಷ್ಮ ನೇಯ್ಗೆಯ ವಿನ್ಯಾಸಗಳಲ್ಲಿ ಒಡಮೂಡಿದ ಪ್ರತಿ ಸೀರೆಯೂ ತನ್ನದೇ ವಿಶೇಷ ಕತೆಗಳನ್ನು ಹೇಳುವಂತಿದ್ದು, ಕಣ್ಣು ಹಾಗೂ ಮನಸಿಗೆ ಮುದ ನೀಡುವಂತಿವೆ. ಅಜ್ರಕ್, ಬಟಿಕ್, ಹ್ಯಾಂಡ್‍ಬ್ಲಾಕ್ಸ್, ಕಾಂತಾ ಮತ್ತು ಕಲಂಕಾರಿ ಮುಂತಾದ ಭಾರತದ ಬೇರೆ ಬೇರೆ ಪ್ರಕಾರದ ನೇಯ್ಗೆಯಲ್ಲಿ ತಯಾರಾದ ಇಲ್ಲಿನ ವಸ್ತ್ರಗಳು ದೇಶದ ವೈವಿಧ್ಯಮಯ ಕೈಮಗ್ಗದ ಜಗತ್ತನ್ನೇ ತೆರೆದಿಡಲಿವೆ.

ವಾರಾಣಸಿಯ ಕೈಮಗ್ಗಗಳಲ್ಲಿ ನೇಯ್ದ ಹಗುರವಾದ ಹತ್ತಿ-ರೇಷ್ಮೆ ಸೀರೆಗಳು, ಚಂದೇರಿ ಕೈಮಗ್ಗದ ಸೀರೆಗಳು, ಮಾಹೇಶ್ವರಿ ಮಗ್ಗದ ಸೀರೆಗಳು, ಆಂಧ್ರದ ಹತ್ತಿ, ಛತ್ತೀಸ್‍ಗಢದ ಟಸ್ಸಾರ್ ರೇಷ್ಮೆಯ ಸೀರೆಗಳು, ಚಂದೇರಿಯ ಜಾಲಿ ಕಲೆಕ್ಷನ್‍ನಲ್ಲಿ ಪ್ರಿಂಟೆಡ್ ಸೀರೆಗಳು, ಕಲಂಕಾರಿ ಹಾಗೂ ಎಂಬ್ರಾಯ್ಡರಿಯಿಂದ ಕೂಡಿದ ಸೀಮಿತ ಸಂಖ್ಯೆಯ ಮಿಕ್ಸ್ ಅಂಡ್ ಮ್ಯಾಚ್ ರವಿಕೆಗಳೂ ಇಲ್ಲಿ ಪ್ರದರ್ಶನಕ್ಕಿವೆ. ಅಜ್ರಕ್ ಮತ್ತು ಬೊಟಿಕ್ ಟಸ್ಸಾರ್ ರೇಷ್ಮೆಯ ಸ್ಟೋಲ್‍ಗಳು ಹಾಗೂ ರೇಷ್ಮೆ ದುಪಟ್ಟಾಗಳೂ ನಾನಾ ವಿನ್ಯಾಸಗಳಲ್ಲಿ
ಲಭ್ಯವಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !