ಆರಂಗಂ ವಾರ್ಷಿಕೋತ್ಸವ

7

ಆರಂಗಂ ವಾರ್ಷಿಕೋತ್ಸವ

Published:
Updated:
Prajavani

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿರುವ ನೃತ್ಯ ಕಲಾವಿದ ರೂಪೇಶ್‌ ಕೆ.ಸಿ. ಅವರನ್ನು ಕೇವಲ ಭರತನಾಟ್ಯ ಕಲಾವಿದ ಎಂದು ಸೀಮಿತಗೊಳಿಸಲು ಸಾಧ್ಯವಿಲ್ಲ. ನಗರದಲ್ಲಿರುವ ಬೆರಳೆಣಿಕೆಯ ಪುರುಷ ನೃತ್ಯ ಕಲಾವಿದರ ಪೈಕಿ ಇವರು ಭಿನ್ನವಾಗಿ ಗುರುತಿಸಿಕೊಂಡವರು. ಏಕೆಂದರೆ ರೂಪೇಶ್‌ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಮಕಾಲೀನ, ಲಘು ಪಾಶ್ಚಿಮಾತ್ಯ, ಬಾಲಿವುಡ್‌ ನೃತ್ಯ ಎಲ್ಲ ಪ್ರಕಾರಗಳಲ್ಲಿಯೂ ಪ್ರಯೋಗಗಳನ್ನು ಮಾಡುತ್ತಾ ಬಂದವರು.

ಥೀಮ್‌ ಇಟ್ಟುಕೊಂಡು ನೃತ್ಯರೂಪಕಗಳನ್ನು  ನಿರ್ದೇಶನ ಮಾಡುವುದರಲ್ಲಿ ಇವರು ಹೆಸರಾದವರು. ಸೌಂದರ್ಯ, ಭಕ್ತಿ ರಸಗಳ ಜೊತೆಗೆ ಎಚ್ಐವಿ ಏಡ್ಸ್‌, ಬ್ಲ್ಯಾಕ್‌ ಮ್ಯಾಜಿಕ್‌, ಗುಡ್‌ ವರ್ಸಸ್‌ ಇವಿಲ್‌, ದಿ ಮುಂಬೈ ಬ್ಲಾಸ್ಟ್‌, ದಿ ಬಿಗ್‌ ಫ್ಯಾಟ್‌ ಇಂಡಿಯನ್‌ ವೆಡ್ಡಿಂಗ್‌, ಫೆಸ್ಟಿವಲ್ಸ್‌ ಆಫ್ ಇಂಡಿಯಾ ಇವೆಲ್ಲ ರೂಪೇಶ್‌ ಆಯ್ದುಕೊಂಡಿರುವ ಥೀಮ್‌ಗಳು. 

25 ವರ್ಷಗಳ ಕಾಲ ನಿರಂತರವಾಗಿ ದೇಶದ ಖ್ಯಾತ ನೃತ್ಯ ಗುರುಗಳ ಸಂಯೋಜನೆಗಳಲ್ಲಿ ಕಲಾವಿದರಾಗಿ, ದೇಶವಿದೇಶಗಳಲ್ಲಿ ನೃತ್ಯ ಯಾತ್ರೆ ಮಾಡಿ ನಂತರ ‘ಆರಂಗಂ– ರೂಪೇಶ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್ಸ್’ ನೃತ್ಯ ಶಾಲೆ ತೆರದಿದ್ದಾರೆ. 

ಇವರ ಶಿಷ್ಯ ವೃಂದದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 45 ವರ್ಷ ವಯಸ್ಸಿನ ಮಹಿಳೆಯರೂ ಇದ್ದಾರೆ. ಮಕ್ಕಳ ಅಮ್ಮಂದಿರಿಗೂ ಆರಂಗಂನಲ್ಲಿ ನೃತ್ಯ ಕಲಿಸುತ್ತಿದ್ದಾರೆ. ಡಾನ್ಸ್‌ ಇಂಡಿಯಾ ಡಾನ್ಸ್‌, ಜಸ್ಟ್‌ ಡಾನ್ಸ್‌, ಡಿ ಫಾರ್‌ ಡಾನ್ಸ್‌ ಮುಂತಾದ ನೃತ್ಯ ರಿಯಾಲಿಟಿ ಶೋಗಳಿಗೆ ಇವರು ನಿರ್ದೇಶನ ಮಾಡಿದ್ದಾರೆ. ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕಂಪೆನಿಯ ಉದ್ಯೋಗಿಯೂ ಆಗಿದ್ದಾರೆ.

ಆರಂಗಂ ಸಂಸ್ಥೆ ಮೊದಲ ವಾರ್ಷಿಕೋತ್ಸವ ವನ್ನು 19ರಂದು ಆಚರಿಸಿಕೊಳ್ಳುತ್ತಿದೆ. ಇಂದಿರಾನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಂಡನ್‌ನ ಸಲಂಗೈ ನರ್ತನಾಲಯದ ಸ್ಥಾಪಕಿ ಡಾ.ಜಯಂತಿ ಯೋಗರಾಜ ಮುಖ್ಯ ಅತಿಥಿ. ಭರತನಾಟ್ಯ, ಸಮಕಾಲೀನ, ಜಾನಪದ ನೃತ್ಯಗಳನ್ನು ರೂಪೇಶ್‌ ಶಿಷ್ಯವೃಂದ ಪ್ರದರ್ಶಿಸಲಿದೆ.

ಸ್ಥಳ: ಈಸ್ಟ್‌ ಕಲ್ಚರಲ್‌ ಅಸೋಸಿಯೇಷನ್‌, 100 ಅಡಿ ರಸ್ತೆ, ಇಂದಿರಾನಗರ. ಸಮಯ– ಶನಿವಾರ, ಸಂಜೆ 6 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !