ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಭಾವಗಳ ಸಂಗಮ ‘ಆರ್ಟ್‌ ಬ್ಯಾಗ್‌’

Last Updated 24 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಆರ್ಟ್‌ ಬ್ಯಾಗ್‌ 15’ ಎಂಬ ಸಮೂಹ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. . ಇಲ್ಲಿರುವ ಹದಿನೈದು ಕಲಾವಿದರಲ್ಲಿ ಏಳು ಮಂದಿ ಬೀದರ್‌ನ ಕಲಾವಿದರು. ಇದಕ್ಕೆ ಕಾರಣವೂ ಇದೆ. ಬೀದರ್‌ನಲ್ಲಿ ‘ಯೋಗೇಶ್‌ ಫೈನ್‌ ಆರ್ಟ್‌ ಕಾಲೇಜು’ ಕಾರ್ಯದರ್ಶಿ ಮತ್ತು ‘ಚನ್ನಾರ್ಟ್‌ ದೃಶ್ಯಕಲಾ ಕಾಲೇಜು’ ಪ್ರಾಂಶುಪಾಲರಾಗಿರುವ ಕಲಾವಿದ ಮತ್ತು ಸದ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿರುವ ಯೋಗೇಶ್‌ ಸಿ. ಮಠದ್‌ ಅವರು ಈ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಹಾಗಾಗಿ ಈ ಕಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಇಲ್ಲಿನ ಬಹುತೇಕ ಕಲಾವಿದರು ರಾಷ್ಟ್ರೀಯ ಮಟ್ಟದ ಕಲಾ ಶಿಬಿರ, ಪ್ರದರ್ಶನಗಳಲ್ಲಿ ಭಾಗವಹಿಸಿದ ಅನುಭವಿಗಳು. ಯುವ ಕಲಾವಿದ ಆಕಾಶ್‌ ಎಸ್‌. ಸಾಲಿ ರಚಿಸಿರುವ ಜೋಕರ್‌ ವೇಷ ತೊಟ್ಟು ಗೊಂಬೆಗಳನ್ನು ಮಾರುವವನ ಕಲಾಕೃತಿ ನೋಡುತ್ತಿದ್ದರೆ ಆತ ಜಗತ್ತಿಗೇನಗುವನ್ನು ಹಂಚುತ್ತಿದ್ದಾನೆ ಎಂಬ ಭಾವನೆ ಮೂಡುತ್ತದೆ.

ಅನಿಲ್‌ ಕುಮಾರ್‌ ಅವರ ಬುದ್ಧ ಕಲಾಕೃತಿ, ವಿಶೇಷ ಬಣ್ಣಗಳ ಬಳಕೆಯಿಂದ ಗಮನ ಸೆಳೆಯುತ್ತಿದೆ. ಬುದ್ಧನ ಹಣೆಯ ಮೇಲೆ ಸೂರ್ಯನೇ ಪ್ರಜ್ವಲಿಸುತ್ತಿರುವಂತೆ ಕಾಣುತ್ತದೆ. ದಿವ್ಯಾ ಸಿ. ಮಠದ್‌ ಅವರ ಮಹಿಳೆಯೇ ಮುಖ್ಯ ವಸ್ತುವಾಗಿರುವ ಕಲಾಕೃತಿಗಳು ಕಡು ಬಣ್ಣ ಮತ್ತು ವಿಭಿನ್ನ ಶೈಲಿಯಿಂದ ಆಕರ್ಷಿಸುತ್ತಿವೆ. ಶಿಲ್ಪಾವತಿ ಹಿರೇಮಠ್ ಯೋಗೇಶ್‌ ಕಲಾ ಕಾಲೇಜಿನ ವಿದ್ಯಾರ್ಥಿನಿ. ಗೆರೆಗಳೇ ಆಕೆಯ ಕಲಾ ಮಾಧ್ಯಮ.

ಚೆನ್ನಾರ್ಟ್‌ ಕಾಲೇಜಿನಲ್ಲಿ ಎಂಎಫ್ಎ ಪದವೀಧರರಾಗಿರುವ ಸಿದ್ದಪ್ಪ ಎಸ್‌ ಅವರ ಕಲಾಕೃತಿಗಳು ಕಳೆದು ಹೋದ ಕಾಲವನ್ನು ಮತ್ತೆ ನೆನಪಿಸುತ್ತಿವೆ. ಈ ಪ್ರದರ್ಶನದಲ್ಲಿ ಅವರು ಬಳಸಿದ ವಸ್ತು ‘ಲಾಟೀನ್‌’. ಒಂದು ಕಲಾಕೃತಿಯಲ್ಲಿ ಲಾಟೀನಿನ ಗಾಜು ಒಡೆದಿದೆ. ಮತ್ತೊಂದರಲ್ಲಿ ಒಡೆದ ಗಾಜಿನ ಜಾಗಕ್ಕೆ ಆಧುನಿಕ ವಿದ್ಯುತ್‌ ಬಲ್ಬ್‌ ಅಳವಡಿಸಲಾಗಿದೆ. ಲಾಟೀನಿನ ಜೊತೆಗಿದ್ದ ಬಾಲ್ಯದ ನಂಟನ್ನು ಒಡೆದ ಗಾಜಿನ ಕಲಾಕೃತಿ ಕಟ್ಟಿಕೊಡುತ್ತದೆ.

ಸುನಿಲ್‌ ಸಾಗರ್ ಕೂಡಾಚೆನ್ನಾರ್ಟ್‌ ಕಾಲೇಜಿನಲ್ಲಿ ಎಂಎಫ್ಎ ಪದವೀಧರ. ರಂಗಭೂಮಿಯಲ್ಲೂ ಸಕ್ರಿಯರಾಗಿರುವ ಇವರ ಮರದ ಆಟಿಕೆ ಕುದುರೆಯ ಕಲಾಕೃತಿ ಗಮನ ಸೆಳೆಯುತ್ತದೆ. ಯೋಗೇಶ್‌ ಸಿ. ಮಠದ್‌ ಅವರ ಮಹಿಳಾ ಪ್ರಧಾನ ಕಲಾಕೃತಿಗಳು ಸಹಜವಾಗಿಯೇ ಸೆಳೆಯುತ್ತಿವೆ.

ವಿಜಯಪುರದ ಹಿರಿಯ ಕಲಾವಿದೆ ಡಾ. ಶಶಿಕಲಾ ಹೂಗಾರ್‌ ಆಧುನಿಕ ಶೈಲಿಯ ಕಲಾಕೃತಿಗಳು ಮತ್ತು ರಾಜೇಶ್ವರಿ ಅಲ್ಕುಂಟೆ ಅವರ ಸೆಮಿ ಮಾಡರ್ನ್‌ ಕಲಾಕೃತಿಗಳು, ಬೆಂಗಳೂರಿನ ಶಾಂತಲಾ ಎಚ್‌.ಪಿ ಅವರ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು, ಆಂಧ್ರ ಪ್ರದೇಶದ ಅದೋನಿಯ ಗುರ್ಲಾ ಶ್ರುತಿ ಅವರ ತಂತ್ರಕಲೆ ಕಲಾಕೃತಿ, ಬೆಮೆಲ್‌ ಉದ್ಯೋಗಿ ಬೆಂಗಳೂರಿನ ಗಣಪತಿ ಹೆಗ್ಡೆ ಅವರ ಅಮ್ಮ ಮಗುವಿನ ವಾತ್ಸಲ್ಯದ ಕ್ಷಣ ಬಿಂಬಿಸುವ ಸೆಮಿ ಮಾಡರ್ನ್‌ ಕಲಾಕೃತಿ ಆಪ್ತ ಭಾವದಿಂದ ಸೆಳೆಯುತ್ತಿದೆ.

ಮಂಡ್ಯದ ಅಕ್ಷಯ್ ಕುಮಾರ್‌ ಲಲಿತಕಲಾ ಅಕಾಡೆಮಿಯಿಂದ 2018ರ ಸಾಲಿನ ವರ್ಷದ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿ ಪಡೆದ ಕಲಾಕೃತಿಯೂ ಪ್ರದರ್ಶನದಲ್ಲಿದೆ. ಭಾನು ವೆಂಕಟೇಶ್‌ ಬೆಂಗಳೂರಿನ ಕಲಾಮಂದಿರದ ಪ್ರತಿಭೆ. ಕಥಕ್ಕಳಿ ವೇಷಧಾರಿಯ ಕಲಾಕೃತಿ ಪ್ರದರ್ಶನದಲ್ಲಿದೆ.

ಮಂಗಳೂರಿನ ಹಿರಿಯ ಕಲಾವಿದ ರಾಜೇಂದ್ರ ಕೇದಿಗೆ ಅವರ ಅಮೂರ್ತ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಇವರು ಲಲಿತಕಲಾ ಅಕಾಡೆಮಿಯ ಸದಸ್ಯ. ಇದುವರೆಗೆ ಮೂರು ಸೋಲೊ ಪ್ರದರ್ಶನಗಳನ್ನು ನೀಡಿದ್ದಾರೆ. ಸುಮಾರು 40 ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಈ‍ಪ್ರದರ್ಶನ ಇದೇ 25 ಸಂಜೆ 5 ಗಂಟೆಯವರೆಗೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT