ಕಲಾಕೃತಿಗಳ ಪ್ರದರ್ಶನ

7

ಕಲಾಕೃತಿಗಳ ಪ್ರದರ್ಶನ

Published:
Updated:
Deccan Herald

ಸಮಾಜದ ಸಮಸ್ಯೆಗಳಿಗೆ ತಮ್ಮ ಕಲಾಕೃತಿಗಳ ಮೂಲಕ ಕನ್ನಡಿ ಹಿಡಿಯುವ ಕಲಾವಿದ ಸಿ.ಎಸ್‌. ಕೃಷ್ಣ ಶೆಟ್ಟಿ ಅವರ ಹೊಸ ಕಲಾಕೃತಿಗಳು ನಗರದ ಆರ್ಟ್‌ಹೌಸ್‌ನಲ್ಲಿ ಇಂದಿನಿಂದ ಪ್ರದರ್ಶನವಾಗಲಿವೆ. ಇದು ಶೆಟ್ಟಿ ಅವರ 9ನೇ ಏಕವ್ಯಕ್ತಿ ಪ್ರದರ್ಶನವಾಗಿದ್ದು, ವರ್ಣಚಿತ್ರಗಳು, ರೇಖಾಚಿತ್ರಗಳು ಸೇರಿದಂತೆ ಒಟ್ಟು 50 ಕಲಾಕೃತಿಗಳು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಶೆಟ್ಟಿ ಅವರು, ದಾವಣಗೆರೆಯ ಕಲಾ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಕಲಿತಿದ್ದಾರೆ. ದೆಹಲಿಯ ಗರ್ಹಿ ಸ್ಟುಡಿಯೊಸ್‌ನಲ್ಲಿ ಗ್ರಾಫಿಕ್ಸ್‌ ಕುರಿತು ಅಧ್ಯಯನ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಭಾರತೀಯ ವಿದ್ಯಾ ಭವನದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !